ಲವರ್ ಬಾಯ್ ಗೆಟಪ್‍ನಲ್ಲಿ ಖಡಕ್ ವಿಲನ್ | Udayavani - ಉದಯವಾಣಿ
   CONNECT WITH US  
echo "sudina logo";

ಲವರ್ ಬಾಯ್ ಗೆಟಪ್‍ನಲ್ಲಿ ಖಡಕ್ ವಿಲನ್

ನಾಗತಿಹಳ್ಳಿ ಹೊಸ ಚಿತ್ರದಲ್ಲಿ ವಸಿಷ್ಠ ಸಿಂಹ

ವಿಲನ್ ಪಾತ್ರಗಳಿಂದಲೇ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟ ವಸಿಷ್ಠ ಸಿಂಹ ತಮ್ಮ ಕಂಚಿನ ಕಂಠದಿಂದಲೇ ಹೆಚ್ಚು ಫೇಮಸ್​​​. ನಟನೆ, ಡಬ್ಬಿಂಗ್ ಮಾತ್ರದಲ್ಲಿ ಅಲ್ಲದೇ, ಒಳ್ಳೆಯ ಸಿಂಗರ್ ಕೂಡಾ. ಸ್ಯಾಂಡಲ್‍ವುಡ್‍ನ ಖಡಕ್ ವಿಲನ್ ಈಗ ಹೀರೋ ಆಗಿ ಮಿಂಚುತ್ತಿದ್ದಾರೆ.

ಹೌದು! "ಟಗರು' ಸಿನಿಮಾದಲ್ಲಿ ವಸಿಷ್ಠ "ಚಿಟ್ಟೆ'ಯಾಗಿ ಫುಲ್ ಫೇಮಸ್ ಆಗಿದ್ದರು. ತಮ್ಮ ಗುಂಗುರು ಕೂದಲಿನಿಂದ ಎಲ್ಲರ ಗಮನ ಸೆಳೆಯುತ್ತಿದ್ದ ವಸಿಷ್ಠ ಈಗ ಹಳೆಯ ಲುಕ್ ಬದಲಿಸಿ ಲವರ್ ಬಾಯ್ ಆಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕಾಗಿ ಹೊಸ ಗೆಟಪ್‍ನಲ್ಲಿ ವಸಿಷ್ಠ ಮಿಂಚಿದ್ದಾರೆ.

ಇನ್ನು ಈ ಚಿತ್ರಕ್ಕೆ ನಾಗತಿಹಳ್ಳಿ ಪುತ್ರಿ ಕನಸು ಚಿತ್ರಕಥೆ ಬರೆದಿದ್ದು, ಚಿತ್ರಿಕರಣ ಈಗಾಗಲೇ ಆರಂಭವಾಗಿದೆ. ಅಲ್ಲದೇ ಚಿತ್ರತಂಡದೊಂದಿಗೆ ವಸಿಷ್ಠ ಹಾಗೂ ಅವರಿಗೆ ನಾಯಕಿಯಾಗಿ ನಟಿಸುತ್ತಿರುವ ಮಾನ್ವಿತಾ ಹರೀಶ್ ಲಂಡನ್​​ಗೆ ತೆರಳಿದ್ದು, ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ ವಸಿಷ್ಠ ತಮ್ಮ ಅಪರೂಪದ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಶೇರ್ ಮಾಡಿದ್ದಾರೆ.

Trending videos

Back to Top