CONNECT WITH US  

ಸಿಹಿ ಸುದ್ದಿ ನಂತರ ಹೊಸ ಫೋಟೋ ಶೇರ್ ಮಾಡಿದ Mrs.ರಾಮಾಚಾರಿ

ಸ್ಯಾಂಡಲ್‍ವುಡ್‍ನ ರಾಕಿಂಗ್​ ಜೋಡಿ ಯಶ್​ ಮತ್ತು ರಾಧಿಕಾ ಪಂಡಿತ್ ಇತ್ತೀಚೆಗಷ್ಟೇ ತಾವು ಅಪ್ಪ, ಅಮ್ಮ ಆಗ್ತಿರೋ ವಿಚಾರವನ್ನ ಸಾಮಾಜಿಕ ಜಾಲತಾಣದಲ್ಲಿ ಖುಷಿಯಿಂದ ಹಂಚಿಕೊಂಡಿದ್ದರು. ಇದೀಗ ಈ ರಾಕಿಂಗ್ ಜೋಡಿಗೆ ಎಂಗೇಜ್ಮೆಂಟ್ ಆಗಿ 2 ವರ್ಷ ಆಗಿದೆ. ತಮ್ಮ ಎಂಗೇಜ್ಮೆಂಟ್ ಆ್ಯನಿವರ್ಸರಿ ಖುಷಿಯಲ್ಲೇ ರಾಧಿಕಾ ಎಂಗೇಜ್ಮೆಂಟ್ ದಿನದ ಮತ್ತು ಗರ್ಭಿಣಿ ಆದ ಮೇಲೆ ಇದೇ ಮೊದಲ ಬಾರಿಗೆ ತಮ್ಮ "ಬೇಬಿ ಬಂಪ್' ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂತಸವನ್ನು ದುಪ್ಪಟ್ಟು ಮಾಡಿದ್ದಾರೆ.

ಹೌದು! ರಾಧಿಕಾ ಅವರು ಪತಿ ಯಶ್ ಜೊತೆಗೆ ನಿಂತು ಸೆಲ್ಫಿ ಫೋಟೋ ತೆಗೆದುಕೊಂಡಿದ್ದು, ಅದನ್ನು ಫೇಸ್‍ಬುಕ್ ಮತ್ತು ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. "ಬೇಬಿ ಬಂಪ್' ಫೋಟೋ ಜೊತೆಗೆ ಎರಡು ವರ್ಷದ ಹಿಂದಿನ ನಿಶ್ಚಿತಾರ್ಥದ ಫೋಟೋವನ್ನು ಸಹ ಕೊಲಾಜ್ ಮಾಡಿ ಪೋಸ್ಟ್ ಮಾಡಿದ್ದಾರೆ. ಇಂದಿಗೆ ನಾವು ಎಂಗೇಜ್ ಆಗಿ ಎರಡು ವರ್ಷ ಕಳೆಯಿತು. ಇದು ನಿಜವಾಗಿಯೂ "ಬಂಪಿ ರೈಡ್' ಆಗಿದೆ ಎಂದು ಹಾಸ್ಯವಾಗಿ ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ಭಾರೀ ವೈರಲ್​ ಆಗುತ್ತಿದೆ.

ರಾಧಿಕಾ ಅವರು ಈ ಫೋಟೋವನ್ನು ತಮ್ಮ ಫೇಸ್‍ಬುಕ್ ಮತ್ತು ಇನ್ಸ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ ಕೂಡಲೇ ಅಭಿಮಾನಿಗಳು ಸಂತಸದಿಂದ ಶುಭ ಹಾರೈಸಿದ್ದು, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಅಲ್ಲದೇ ಅಪ್ಪನಾಗುತ್ತಿರುವ ಖುಷಿಯಲ್ಲಿರುವ ಯಶ್ ಅವರಿಗೆ "ಕೆಜಿಎಫ್' ಸಿನಿಮಾಗಾಗಿ ಕಾತುರದಿಂದ ಕಾಯುತ್ತಿರುವುದಾಗಿ ಅಭಿಮಾನಿಗಳು ತಿಳಿಸಿದ್ದಾರೆ.

Trending videos

Back to Top