CONNECT WITH US  

ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ"ದಿ ವಿಲನ್'​ನ ನೋಡಿವಲಂದವ ಸಾಂಗ್: Watch

ಪ್ರೇಮ್ ನಿರ್ದೇಶನದ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ "ದಿ ವಿಲನ್'​ ಚಿತ್ರದ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಹೌದು! "ನೋಡಿವಲಂದವ ಮುತ್ತಿನ ಮಾಲೆ ಚೆಂದವ... ಇವಳು ಯಾವೂರಾ ಚೆಲುವೆ ಶಿವಾ' ಎನ್ನುವ ಹಾಡು ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದ್ದು, ಹಾಡಿಗೆ ದನಿಯಾಗಿದ್ದಾರೆ ಬಾಲಿವುಡ್‍ನ ಖ್ಯಾತ ಗಾಯಕ ಅರ್ಮನ್ ಮಲಿಕ್ ಹಾಗೂ ಶ್ರೇಯಾ ಘೋಷಾಲ್.

ಅಲ್ಲದೇ ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ಈ ಹಾಡು ನಾಲ್ಕನೇ ಸ್ಥಾನದಲ್ಲಿದೆ. ಹಾಡು ಬಿಡುಗಡೆಯಾದಗಿನಿಂದ ಇಲ್ಲಿಯವರೆಗೂ 7 ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಹಾಡಿಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಈ ಮೊದಲಿನ ಎರಡು ಹಾಡುಗಳು ಮಾಸ್ ಫೀಲ್ ಕೊಟ್ಟರೆ, "ಲವ್​ ಆಗೋಯ್ತೆ ನಿನ್ನ ಮ್ಯಾಲೆ' ಹಾಡು ಮತ್ತು "ನೋಡಿವಲಂದವ ಮುತ್ತಿನ ಮಾಲೆ ಚೆಂದವ... ಇವಳು ಯಾವೂರಾ ಚೆಲುವೆ ಶಿವಾ' ಹಾಡು ಪಕ್ಕಾ ಕ್ಲಾಸ್ ಅನುಭವ ನೀಡಲಿದೆ.

ಅಲ್ಲದೇ, ಈ ಹಾಡಿನಲ್ಲಿ ಶಿವಣ್ಣ, ಸುದೀಪ್ ಮತ್ತು ಆ್ಯಮಿ ಜಾಕ್ಸನ್ ಹೆಜ್ಜೆ ಹಾಕಿದ್ದು ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾದಲ್ಲಿ ಇದೊಂದು ರೊಮ್ಯಾಂಟಿಕ್ ಹಾಡಾಗಲಿದೆ. ಇನ್ನು ಚಿತ್ರವನ್ನು ಸಿ.ಆರ್‌. ಮನೋಹರ್‌ ತಮ್ಮ ತನ್ವಿ ಫಿಲಂಸ್‌ ಲಾಂಛನದಲ್ಲಿ ನಿರ್ಮಿಸುತ್ತಿದ್ದು, ಗಿರೀಶ್‌ ಗೌಡ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶಿವರಾಜಕುಮಾರ್‌, ಸುದೀಪ್‌, ಶ್ರುತಿ ಹರಿಹರನ್‌, ಆ್ಯಮಿ ಜಾಕ್ಸನ್‌, ಮಿಥುನ್‌ ಚಕ್ರವರ್ತಿ, ಶ್ರೀಕಾಂತ್‌, ತಿಲಕ್‌ ಮುಂತಾದವರು ನಟಿಸುತ್ತಿದ್ದಾರೆ.

Trending videos

Back to Top