CONNECT WITH US  

ವಾಜಪೇಯಿ ನಿಧನ; ಫಿಲ್ಮ್ ಚೇಂಬರ್‌ ಸಂತಾಪ

ಮಾಜಿ ಪ್ರಧಾನ ಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂತಾಪ ಸೂಚಿಸಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎ.ಚಿನ್ನೇಗೌಡ ಅವರು ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಅಜಾತ ಶತ್ರು, ದೇಶ ಕಂಡ ಧೀಮಂತ ನಾಯಕ, ವಾಗ್ಮಿ, ಕವಿ, ಸಾಹಿತಿ, ಪತ್ರಕರ್ತರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನದಿಂದ ಇಡೀ ಚಿತ್ರೋದ್ಯಮಕ್ಕೆ ದುಃಖವುಂಟಾಗಿದೆ.

ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಕೋರಿರುವ ಮಂಡಳಿ ಪದಾಧಿಕಾರಿಗಳು, ಅವರ ಅಗಲಿಕೆಯಿಂದಾಗಿರುವ ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗದವರಿಗೆ ಹಾಗೂ ಬಂಧು-ಮಿತ್ರರಿಗೆ ಕರುಣಿಸಲೆಂದು' ಚಿತ್ರೋದ್ಯಮ ಪರವಾಗಿ ಅಧ್ಯಕ್ಷರಾದ ಚಿನ್ನೇಗೌಡ ಪ್ರಾರ್ಥಿಸಿದ್ದಾರೆ.

ಉಪಾಧ್ಯಕ್ಷರಾದ ಕರಿಸುಬ್ಬು, ಕೆ.ಮಂಜು, ಕೆ.ಸಿ.ಅಶೋಕ್‌, ಗೌರವ ಕಾರ್ಯದರ್ಶಿಗಳಾದ ಭಾ.ಮ.ಹರೀಶ, ಹೆಚ್‌.ಸಿ. ಶ್ರೀನಿವಾಸ್‌ (ಶಿಲ್ಪ), ಆರ್‌.ಸುಂದರ್‌ ರಾಜು, ಖಜಾಂಚಿ ಕೆ.ಎಂ.ವೀರೇಶ್‌ ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ.

Trending videos

Back to Top