CONNECT WITH US  

ಕ್ರೈಮ್ ಹಿನ್ನಲೆಯ "ತ್ರಾಟಕ': Watch

ಶಿವಗಣೇಶ್‌ ನಿರ್ದೇಶನದ "ತ್ರಾಟಕ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದು ಶಿವಗಣೇಶ್‌ ನಿರ್ದೇಶನದ ನಾಲ್ಕನೇ ಚಿತ್ರ. ಈ ಹಿಂದೆ "ಅಖಾಡ', "ಹೃದಯದಲ್ಲಿ ಇದೇನಿದು' ಹಾಗೂ "ಜಿಗರ್‌ಥಂಡ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೈಲರ್ ಭರ್ಜರಿ ಹಿಟ್ ಆಗಿದ್ದು, ಸಿನಿರಸಿಕರಿಗೆ ಚಿತ್ರದ ಬಗ್ಗೆ ಸಾಕಷ್ಟು ಕೌತುಕವನ್ನು ಹುಟ್ಟು ಹಾಕಿದೆ.

ಅಂದಹಾಗೆ ಚಿತ್ರವನ್ನು ರಾಹುಲ್‌ ಐನಾಪುರ ನಿರ್ಮಿಸುತ್ತಿದ್ದು, ಅವರೇ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. "ಒರಟ ಐ ಲವ್‌ ಯೂ' ಚಿತ್ರದಲ್ಲಿ ನಟಿಸಿದ್ದ ಹೃದಯಾ ಆವಂತಿ ಈ ಚಿತ್ರದ ನಾಯಕಿ. ಪೊಲೀಸ್‌ ವ್ಯವಸ್ಥೆಯ ಸುತ್ತ ಈ ಚಿತ್ರ ಸಾಗಲಿದ್ದು, ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. "ತ್ರಾಟಕ' ಎಂದರೆ ಯೋಗವಿದ್ಯೆಯ ಭಾಷೆಯಲ್ಲಿ "ಏಕಾಗ್ರತೆ' ಎಂಬ ಅರ್ಥವಿದೆಯಂತೆ.

ಪೊಲೀಸ್‌ ವ್ಯವಸ್ಥೆ ಸುತ್ತ ಸಾಗುವ ಈ ಸಿನಿಮಾದಲ್ಲಿ ಏಕಾಗ್ರತೆ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನು ಅರುಣ್‌ ಪುರದ ಸಂಗೀತ ಸಂಯೋಜನೆ, ವಿನೋದ್‌ ಭಾರತಿ ಕ್ಯಾಮೆರಾ ಕೈ ಚಳಕ, ಎ.ಆರ್‌.ಸಾಯಿರಾಮ್‌ ಸಂಭಾಷಣೆ ಚಿತ್ರಕ್ಕಿದೆ. ಚಿತ್ರದಲ್ಲಿ ಅದ್ವಿಕಾ ಜಯರಾಂ, ಭವಾನಿ ಪ್ರಕಾಶ್‌, ನಂದಗೋಪಾಲ, ನಿಖಿತಾ ನಟಿಸುತ್ತಿದ್ದಾರೆ.

Trending videos

Back to Top