CONNECT WITH US  

ಮತ್ತೊಮ್ಮೆ "ಭೈರವ ಗೀತ' ಪೋಸ್ಟರ್ ರಿವೀಲ್

"ಟಗರು' ಚಿತ್ರದಲ್ಲಿ ಧನಂಜಯ್‌ ಮಾಡಿದ ಡಾಲಿ ಪಾತ್ರವನ್ನು ತುಂಬಾನೇ ಮೆಚ್ಚಿದ್ದ ರಾಮ್‌ಗೋಪಾಲ್‌ ವರ್ಮಾ ಅವರಿಗಾಗಿ "ಭೈರವ ಗೀತ' ಚಿತ್ರವನ್ನು ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಿಸುತ್ತಿದ್ದು, ಈ ಹಿಂದೆ ಚಿತ್ರತಂಡ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸಿತ್ತು. ಅಲ್ಲದೇ ಧನಂಜಯ್ ಫಸ್ಟ್ ಲುಕ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದೀಗ ರಾಮ್‌ಗೋಪಾಲ್‌ ವರ್ಮಾ ತಮ್ಮ ಟ್ವೀಟರ್ ಖಾತೆಯಲ್ಲಿ ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ವಿಭಿನ್ನ ಶೇಡ್​ನಲ್ಲಿ ಡಾಲಿ ನಟಿಸುತ್ತಿದ್ದು, ಈ ಪೋಸ್ಟರ್​​​ನಲ್ಲಿ ಕೂಡಾ ಡಿಫರೆಂಟ್ ಆಗಿ ಕಾಣುತ್ತಿದ್ದಾರೆ. ಚಿತ್ರವನ್ನು ವರ್ಮಾ ಶಿಷ್ಯ ಸಿದ್ಧಾರ್ಥ್ ನಿರ್ದೇಶಿಸುತ್ತಿದ್ದು, ಸಿನಿಮಾ ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ರಾಮ್​​ಗೋಪಾಲ್ ವರ್ಮಾ ತಮ್ಮ ಟ್ವಿಟರ್​​ನಲ್ಲಿ ಹೇಳಿಕೊಂಡಿದ್ದಾರೆ. 

ಇನ್ನು "ಭೈರವ ಗೀತ' ಒಂದು ಕ್ರೈಮ್‌ ಹಿನ್ನೆಲೆಯ ಲವ್‌ಸ್ಟೋರಿಯಾಗಿದ್ದು, ರಾಮ್‌ಗೋಪಾಲ್‌ ವರ್ಮಾ ಹಾಗೂ ಭಾಸ್ಕರ್ ಹರಿ ನಿರ್ಮಾಣ ಚಿತ್ರಕ್ಕಿದೆ.


Trending videos

Back to Top