ಮತ್ತೊಮ್ಮೆ “ಭೈರವ ಗೀತ’ ಪೋಸ್ಟರ್ ರಿವೀಲ್
Team Udayavani, Aug 18, 2018, 4:30 PM IST
“ಟಗರು’ ಚಿತ್ರದಲ್ಲಿ ಧನಂಜಯ್ ಮಾಡಿದ ಡಾಲಿ ಪಾತ್ರವನ್ನು ತುಂಬಾನೇ ಮೆಚ್ಚಿದ್ದ ರಾಮ್ಗೋಪಾಲ್ ವರ್ಮಾ ಅವರಿಗಾಗಿ “ಭೈರವ ಗೀತ’ ಚಿತ್ರವನ್ನು ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಿಸುತ್ತಿದ್ದು, ಈ ಹಿಂದೆ ಚಿತ್ರತಂಡ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸಿತ್ತು. ಅಲ್ಲದೇ ಧನಂಜಯ್ ಫಸ್ಟ್ ಲುಕ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದೀಗ ರಾಮ್ಗೋಪಾಲ್ ವರ್ಮಾ ತಮ್ಮ ಟ್ವೀಟರ್ ಖಾತೆಯಲ್ಲಿ ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ವಿಭಿನ್ನ ಶೇಡ್ನಲ್ಲಿ ಡಾಲಿ ನಟಿಸುತ್ತಿದ್ದು, ಈ ಪೋಸ್ಟರ್ನಲ್ಲಿ ಕೂಡಾ ಡಿಫರೆಂಟ್ ಆಗಿ ಕಾಣುತ್ತಿದ್ದಾರೆ. ಚಿತ್ರವನ್ನು ವರ್ಮಾ ಶಿಷ್ಯ ಸಿದ್ಧಾರ್ಥ್ ನಿರ್ದೇಶಿಸುತ್ತಿದ್ದು, ಸಿನಿಮಾ ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ರಾಮ್ಗೋಪಾಲ್ ವರ್ಮಾ ತಮ್ಮ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ಇನ್ನು “ಭೈರವ ಗೀತ’ ಒಂದು ಕ್ರೈಮ್ ಹಿನ್ನೆಲೆಯ ಲವ್ಸ್ಟೋರಿಯಾಗಿದ್ದು, ರಾಮ್ಗೋಪಾಲ್ ವರ್ಮಾ ಹಾಗೂ ಭಾಸ್ಕರ್ ಹರಿ ನಿರ್ಮಾಣ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ