ಯೂಟ್ಯೂಬ್‍ನಲ್ಲಿ ಧೂಳೆಬ್ಬಿಸಿದ "ಸೈರಾ ನರಸಿಂಹ ರೆಡ್ಡಿ': Watch

ರಾಮ್ಚರಣ್ ತೇಜ ನಿರ್ಮಾಣದ ಹಾಗೂ ಚಿರಂಜೀವಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ "ಸೈರಾ ನರಸಿಂಹ ರೆಡ್ಡಿ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದು ಮಾಡುತ್ತಾ ಸಕತ್ ವೈರಲ್ ಆಗಿದೆ. ಆಗಸ್ಟ್ 22 ರಂದು (ನಾಳೆ) ಚಿರಂಜೀವಿ ಅವರ ಹುಟ್ಟುಹಬ್ಬವಿದ್ದು, ಅದಕ್ಕೆ ಉಡುಗೊರೆಯಾಗಿ ಮಗ ರಾಮ್ಚರಣ್ ಸಿನಿಮಾದ ಟೀಸರ್ನ್ನು ಬಿಡುಗಡೆ ಮಾಡಿದ್ದಾರೆ.
ಅಲ್ಲದೇ ಬಿಡುಗಡೆಯಾದಗಿನಿಂದ ಇಲ್ಲಿಯವೆರೆಗೂ 10 ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ಟೀಸರ್ ವೀಕ್ಷಿಸಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಚಿತ್ರವು ಸ್ವಾತಂತ್ರ್ಯ ಹೋರಾಟಗಾರ ಉಯ್ಯಲವಾಡು ನರಸಿಂಹ ರೆಡ್ಡಿಯವರ ಜೀವನಚರಿತ್ರೆಯನ್ನು ಆಧರಿಸಿದ್ದು, ಸುರೇಂದರ್ ರೆಡ್ಡಿ ನಿರ್ದೇಶನವಿದೆ. ಅಲ್ಲದೇ ಕೊನಿದೆಲ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಚಿತ್ರ ತಯಾರಾಗುತ್ತಿದ್ದು, ಅಮಿತ್ ತ್ರಿವೇದಿ ಸಂಗಿತ ಮತ್ತು ಎ.ಶ್ರೀಕಾಂತ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ.
ಇನ್ನು ಚಿರಂಜೀವಿ ಅವರ 151ನೇ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ನಯನತಾರಾ, ಜಗಪತಿ ಬಾಬು, ತಮ್ಮನ್ನಾ ಭಾಟಿಯಾ, ವಿಜಯ್ ಸೇತುಪತಿ, ಬ್ರಹ್ಮಾಜೀ ಸೇರಿದಂತೆ ಬಹು ದೊಡ್ಡತಾರಾಬಳಗವಿದೆ.