CONNECT WITH US  

ರಷ್ಯಾದಲ್ಲಿ ಹುಲಿ ಕುಣಿಸಿದ ವಿಕ್ಟರಿ 2 ತಂಡ

ಶರಣ್‌ ಅಭಿನಯದ "ರ್‍ಯಾಂಬೋ-2' ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು. ಈಗ "ವಿಕ್ಟರಿ-2' ಸರದಿ. ಶರಣ್‌ ನಾಯಕರಾಗಿರುವ "ವಿಕ್ಟರಿ-2' ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರವನ್ನು ಹರಿ ಸಂತೋಷ್‌ ನಿರ್ದೇಶಿಸುತ್ತಿದ್ದಾರೆ. "ಕಾಲೇಜು ಕುಮಾರ್‌' ಚಿತ್ರದ ನಂತರ ಸಂತು ನಿರ್ದೇಶಿಸುತ್ತಿರುವ ಸಿನಿಮಾವಿದು.

ಇತ್ತೀಚೆಗೆ ಚಿತ್ರತಂಡ ಹಾಡೊಂದನ್ನು ರಷ್ಯಾದಲ್ಲಿ ಚಿತ್ರೀಕರಿಸಿಕೊಂಡು ಬಂದಿದೆ. ರಷ್ಯಾದ ಸುಂದರ ತಾಣಗಳಲ್ಲಿ ಚಿತ್ರೀಕರಿಸಿರುವ ಈ ಹಾಡಿನ ವಿಶೇಷವೆಂದರೆ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಅಂಶಗಳೊಂದಿಗೆ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಹಾಡಿನಲ್ಲಿ ಯಕ್ಷಗಾನ, ಹುಲಿ ಕುಣಿತ ಸೇರಿದಂತೆ ಕರುನಾಡಿನ ಹಲವು ಕಲಾಪ್ರಾಕಾರಗಳನ್ನು ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ.

ವಿ.ನಾಗೇಂದ್ರ ಪ್ರಸಾದ್‌ ಬರೆದಿರುವ "ಪ್ಲೀಸು ಟ್ರಸ್ಟು .. ನಾನು ಚೀಪ್‌ ಅಂಡ್‌ ಬೆಸ್ಟು ...' ಹಾಡನ್ನು ರಷ್ಯಾದಲ್ಲಿ ಚಿತ್ರೀಕರಿಸಲಾಗಿದ್ದು, ಅರ್ಜುನ್‌ ಜನ್ಯಾ ಅವರ ಸಂಗೀತ ಚಿತ್ರಕ್ಕಿದೆ. ಈ ಚಿತ್ರವನ್ನು ಮಾನಸ ತರುಣ್‌ ಹಾಗೂ ತರುಣ್‌ ಶಿವಪ್ಪ ಸೇರಿ ನಿರ್ಮಿಸುತಿದ್ದಾರೆ. ಚಿತ್ರದಲ್ಲಿ ಅಸ್ಮಿತಾ ಸೂದ್‌ ಹಾಗೂ ಅಪೂರ್ವ ನಾಯಕಿಯರಾಗಿ ನಟಿಸುತ್ತಿದ್ದು, ಆಗಸ್ಟ್‌ 27 ರಂದು ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ. 


Trending videos

Back to Top