CONNECT WITH US  

ಡಬಲ್ ಮಿನಿಂಗ್ ಡೈಲಾಗ್ ಅಬ್ಬರದಲ್ಲಿ "ವಿಕ್ಟರಿ 2': Watch

ಶರಣ್ ಅಭಿನಯದ "ವಿಕ್ಟರಿ 2" ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದೊಂದು ಪಕ್ಕಾ ಕಾಮಿಡಿ ಎಂಟರ್​ಟ್ರೈನರ್ ಎಂಬುದು ಟೀಸರ್ ನೋಡಿದ ತಕ್ಷಣ ಹೇಳಬಹುದು.

ಅಲ್ಲದೇ ಡಬಲ್ ಮಿನಿಂಗ್ ಡೈಲಾಗ್ ಅಬ್ಬರ ಚಿತ್ರದಲ್ಲಿ ಜೋರಾಗಿದ್ದು, ಶರಣ್ ಜತೆ ಸಾಧು ಕೋಕಿಲಾ ಹಾಗೂ ರವಿಶಂಕರ್ ವಿಶೇಷ ಗೆಟಪ್‍ನಲ್ಲಿ ಮಿಂಚಿರುವುದು ಮತ್ತಷ್ಟು ಹಾಸ್ಯಭರಿತವನ್ನಾಗಿಸಿದೆ. ಶರಣ್ ಎದುರಿಗೆ ನಾಯಕಿಯರಾಗಿ ಅಸ್ಮಿತಾ ಸೂದ್‌ ಹಾಗೂ ಅಪೂರ್ವ ನಟಿಸಿದ್ದಾರೆ. 

ಚಿತ್ರವನ್ನು ತರುಣ್‌ ಶಿವಪ್ಪ ನಿರ್ಮಿಸುತ್ತಿದ್ದು, ತರುಣ್ ಸುಧೀರ್ ಅವರ ಕಥೆ ಇದೆ. ಬಹುತೇಕ "ವಿಕ್ಟರಿ' ತಂಡವೇ ಇಲ್ಲೂ ಕೆಲಸ ಮಾಡಿದೆ. ಹರಿ ಸಂತೋಷ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಇಂದು ಹೆಚ್ಚು ಓದಿದ್ದು

ಧಾರವಾಡ: ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ 'ರಾಷ್ಟ್ರೀಯತೆ: ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು' ಗೋಷ್ಠಿಯಲ್ಲಿ ಡಾ| ಶಿವ ವಿಶ್ವನಾಥನ್‌ ಮಾತನಾಡಿದರು.

Jan 20, 2019 05:03pm

ಶಿರಸಿ: ಬಣ್ಣದ ಮಠದ ಶ್ರೀಗಳು ಆಶೀರ್ವಚನ ನೀಡಿದರು.

Jan 20, 2019 04:54pm

Trending videos

Back to Top