CONNECT WITH US  

ಸುದೀಪ್‌ ಬರ್ತ್‌ಡೇಗೆ "ಕೋಟಿಗೊಬ್ಬ-3' ಟೀಸರ್‌

ಸೆಪ್ಟೆಂಬರ್‌ 2 ಸುದೀಪ್‌ ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬ. ಅಂದು ಸುದೀಪ್‌ ಹುಟ್ಟುಹಬ್ಬ. ಸುದೀಪ್‌ ಹುಟ್ಟುಹಬ್ಬ ಸಮಯದಲ್ಲಿ ಅವರ ಚಿತ್ರತಂಡಗಳು ಅಭಿಮಾನಿಗಳಿಗೆ ಒಂದಲ್ಲ ಒಂದು ಕೊಡುಗೆ ನೀಡುತ್ತಲೇ ಬಂದಿವೆ. ಈ ಬಾರಿಯ ಹುಟ್ಟುಹಬ್ಬಕ್ಕೆ ಯಾವ ಚಿತ್ರತಂಡದಿಂದ ಏನು ಗಿಫ್ಟ್ ಸಿಗುತ್ತದೆಂದು ಅಭಿಮಾನಿಗಳು ಎದುರು ನೋಡುತ್ತಿದ್ದರು. ಈಗ "ಕೋಟಿಗೊಬ್ಬ-3' ಚಿತ್ರತಂಡ ಅಭಿಮಾನಿಗಳು ಖುಷಿಯಾಗುವ ಸುದ್ದಿ ನೀಡಿದೆ.

ಅದು ಚಿತ್ರದ ಟೀಸರ್‌ ಬಿಡುಗಡೆ. ಹೌದು, ಸುದೀಪ್‌ ಅಭಿನಯದ "ಕೋಟಿಗೊಬ್ಬ-3' ಚಿತ್ರದ ಟೀಸರ್‌ ಸೆಪ್ಟೆಂಬರ್‌ 2ರ ಮಧ್ಯರಾತ್ರಿ ಬಿಡುಗಡೆಯಾಗಲಿದೆ. ಈ ಮೂಲಕ ಸುದೀಪ್‌ ಅಭಿಮಾನಿಗಳು ಖುಷಿಯಾಗಿದ್ದಾರೆ. ಸೂರಪ್ಪ ಬಾಬು "ಕೋಟಿಗೊಬ್ಬ-3' ಚಿತ್ರವನ್ನು ನಿರ್ಮಿಸುತ್ತಿದ್ದು, ಶಿವಕಾರ್ತಿಕ್‌ ಈ ಚಿತ್ರದ ನಿರ್ದೇಶಕರು. ಈಗಾಗಲೇ ಸುಮಾರು 40 ದಿನಗಳ ಕಾಲ ಸರ್ಬಿಯಾದಲ್ಲಿ "ಕೋಟಿಗೊಬ್ಬ-3' ಚಿತ್ರೀಕರಣವಾಗಿದೆ. ಈ ಚಿತ್ರದಲ್ಲಿ ಮಡ್ಡೋನ ಸೆಬಾಸ್ಟಿಯನ್‌ ನಾಯಕಿಯಾಗಿ ನಟಿಸುತ್ತಿದ್ದು, ಇದು ಅವರ ಮೊದಲ ಚಿತ್ರವಾಗಿದೆ.

ಇದಕ್ಕೂ ಮುನ್ನ ಮಲಯಾಳಂನ "ಪ್ರೇಮಂ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು, "ಕಿಂಗ್‌ ಲಯರ್‌'ನಲ್ಲೂ ನಟಿಸಿದ್ದಾರೆ. ತಮಿಳಿನಲ್ಲಿ "ಕಾದಲುಂ ಕದಂದು ಪೋಗುಂ', "ಕವನ್‌', "ಪವರ್‌ ಪಾಂಡಿ' ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅವರು, ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅವರು "ಕೋಟಿಗೊಬ್ಬ 3' ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಬಾಲಿವುಡ್‌ ನಟ ಅಫ್ತಾಬ್‌ ಶಿವದಾಸಾನಿ ನಟಿಸುತ್ತಿರುವುದು.

ಈ ಚಿತ್ರದಲ್ಲಿ ಇಂಟರ್‌ಪೋಲ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರಿಗಿದು ಮೊದಲ ಕನ್ನಡ ಚಿತ್ರ. ಈಗಾಗಲೇ ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದಾರೆ. ಇನ್ನು ಸುದೀಪ್‌ ಅವರ "ಕೆಸಿಸಿ' ಮುಗಿಸಿಕೊಂಡು ಮತ್ತೆ "ಕೋಟಿಗೊಬ್ಬ-3' ಚಿತ್ರೀಕರಣದಲ್ಲಿ ತೊಡಗಲಿದ್ದು, ಬ್ಯಾಂಕಾಕ್‌ ಹಾಗೂ ಮಲೇಷಿಯಾದಲ್ಲಿ ಹಾಡು ಹಾಗೂ ಕ್ಲೆé„ಮ್ಯಾಕ್ಸ್‌ ದೃಶ್ಯದ ಚಿತ್ರೀಕರಣ ನಡೆಯಲಿದೆ. ಇನ್ನು ಶೇಖರ್‌ ಚಂದ್ರ ಅವರ ಛಾಯಾಗ್ರಹಣವಿದೆ.

ಚಿತ್ರದಲ್ಲಿ ಸುದೀಪ್‌, ಮಡ್ಡೋನ, ಅಫ್ತಾಬ್‌ ಜೊತೆಗೆ ನವಾಬ್‌ ಷಾ, ಶ್ರದ್ಧಾ, ರವಿಶಂಕರ್‌, ರಂಗಾಯಣ ರಘು ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ನಡುವೆಯೇ ಸುದೀಪ್‌ ಅವರ "ಪೈಲ್ವಾನ್‌' ಚಿತ್ರದ ಚಿತ್ರೀಕರಣ ಕೂಡಾ ನಡೆಯುತ್ತಿದೆ. ಜೊತೆಗೆ "ಅಂಬಿ ನಿಂಗೆ ವಯಸ್ಸಾಯೊ¤à' ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯ ಹಂತದಲ್ಲಿದೆ. ಸದ್ಯ ಸುದೀಪ್‌ ಅವರ "ದಿ ವಿಲನ್‌' ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

Trending videos

Back to Top