CONNECT WITH US  

"ಪೈಲ್ವಾನ್' ಅಖಾಡಕ್ಕೆ ಎಂಟ್ರಿ ಕೊಟ್ಟ ಸುನೀಲ್ ಶೆಟ್ಟಿ

ಕಿಚ್ಚ ಸುದೀಪ ಅಭಿನಯದ "ಪೈಲ್ವಾನ್' ಚಿತ್ರದ ಎರಡನೇ ಹಂತದ​ ಚಿತ್ರೀಕರಣ ಬಿರುಸಿನಿಂದ ಪ್ರಾರಂಭವಾಗಿದೆ. ಹೌದು! ಸುದೀಪ ವಿಭಿನ್ನ ಗೆಟಪ್​​ನಲ್ಲಿ ನಟಿಸುತ್ತಿರುವ "ಪೈಲ್ವಾನ್' ಚಿತ್ರದ ಮೊದಲನೇ ಹಂತದ ಚಿತ್ರೀಕರಣ ಈ ಹಿಂದೆ ಚೈನ್ನೈನಲ್ಲಿ 15 ದಿನಗಳ ಕಾಲ ನಡೆದು ಮುಕ್ತಾಯವಾಗಿತ್ತು. ಇದೀಗ ಮತ್ತೆ ಶೂಟಿಂಗ್​ ಪ್ರಾರಂಭವಾಗಿದ್ದು, ಚಿತ್ರೀಕರಣದಲ್ಲಿ ಬಾಲಿವುಡ್​ ನಟ ಸುನೀಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಮಂಗಳವಾರ ಮಧ್ಯ ರಾತ್ರಿ ನಡೆದ ಶೂಟಿಂಗ್​ನಲ್ಲಿ ಸುನೀಲ್ ಶೆಟ್ಟಿ ಎಂಟ್ರಿ ಕೊಟ್ಟಿರುವ ಫೋಟೋಗಳನ್ನು ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸುದೀಪ ಎದುರಿಗೆ ನಾಯಕಿಯಾಗಿ ಮುಂಬೈ ಮೂಲದ ಆಕಾಂಕ್ಷಾ ಸಿಂಗ್ ತೆರೆ ಹಂಚಿಕೊಳ್ಳುತ್ತಿದ್ದು, ಕಬೀರ್ ಸಿಂಗ್ ದುಹಾನ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಅಲ್ಲದೇ ಆರ್‌.ಆರ್‌.ಆರ್‌. ಮೋಷನ್‌ ಪಿಕ್ಚರ್ ಬ್ಯಾನರ್‌ನಡಿ ಸ್ವಪ್ನ ಕೃಷ್ಣ ಮತ್ತು ಕೃಷ್ಣ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು ನಿರ್ದೇಶನ ಮಾಡುವ ಜೊತೆಗೆ ಕಥೆ ಹಾಗೂ ಚಿತ್ರಕಥೆಯನ್ನು ಕೃಷ್ಣ ರಚಿಸಿದ್ದಾರೆ. ಇದೊಂದು ಬಾಕ್ಸಿಂಗ್‌ ಮತ್ತು ಕುಸ್ತಿ ಕುರಿತಾದ ಚಿತ್ರವಾಗಿದ್ದು, ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ ಮಾಡಿದರೆ, ಕರುಣಾಕರನ್‌ ಅವರು ಛಾಯಾಗ್ರಹಣ ಮಾಡಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸಾಧುಕೋಕಿಲ, ಚಿಕ್ಕಣ್ಣ ಸೇರಿದಂತೆ ಅನೇಕರ ತಾರಾಬಳಗವಿದೆ.


Trending videos

Back to Top