CONNECT WITH US  

ಕೊಡಗಿನ 31 ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಿದ ರಶ್ಮಿಕಾ ಮಂದಣ್ಣ

 

ವಿರಾಜಪೇಟೆ: ಪ್ರವಾಹ ಮತ್ತು ಗುಡ್ಡ ಕುಸಿತದಿಂದ ಸಂಕಷ್ಟಕ್ಕೀಡಾಗಿರುವ ಹುಟ್ಟೂರಿನ 31 ಸಂತ್ರಸ್ತ ಕುಟುಂಬಗಳಿಗೆ ನಟಿ ರಶ್ಮಿಕಾ ಮಂದಣ್ಣ  ತಲಾ 10 ಸಾವಿರ ರೂಪಾಯಿ ನೆರವು ನೀಡಿದ್ದಾರೆ. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ  ಮನೆ ನಿರ್ಮಾಣಕ್ಕೆ ನೆರವಾಗುವುದಾಗಿ ಹೇಳಿದ್ದಾರೆ. 

ವಿರಾಜಪೇಟೆಯ ಸಂತ್ರಸ್ತರನ್ನು ಕಲ್ಯಾಣ ಮಂಟಪಕ್ಕೆ ಕರೆಸಿಕೊಂಡು, 31 ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ನೆರವು ನೀಡಿದ್ದಾರೆ. 

ಕೊಡಗು ತತ್ತರಿಸಿ ಹೋದ ಬಳಿಕ ಸಾಮಾಜಿಕ ತಾಣಗಳಲ್ಲಿ  ಭಾವಾನಾತ್ಮಕ ಪತ್ರವೊಂದದನ್ನು ಬರೆದಿದ್ದರು. ಈ ಬಗ್ಗೆ ಹಲವರು ಟೀಕೆಯನ್ನು ವ್ಯಕ್ತ ಪಡಿಸಿ ಹುಟ್ಟೂರಿಗೆ ಭೇಟಿ ನೀಡಿ ಸಂತ್ರಸ್ತರ ಪರವಾಗಿ ಕೆಲಸ ಮಾಡುವಂತೆ ಸಲಹೆ ನೀಡಿದ್ದರು. 

ಕೆಲವರು ರಶ್ಮಿಕಾ ಹೆಸರಲ್ಲಿ ಹಣ ಪರಿಹಾರ ನಿಧಿ  ಸಂಗ್ರಹಿಸಲು ಮುಂದಾಗಿದ್ದರು. ಆದರೆ ನನ್ನ ಹೆಸರಲ್ಲಿ ನಿಧಿ ಸಂಗ್ರಹಿಸಬೇಡಿ ಎಂದು ಅಭಿಮಾನಿಗಳಿಗೆ ಸೂಚಿಸಿದ್ದರು. 

Trending videos

Back to Top