CONNECT WITH US  

ವಿಕ್ಟರಿ-2ಗೆ ದಿವ್ಯ ಕುಮಾರ್‌ ಗಾಯನ

ಮಾನಸ ತರುಣ್‌ ಮತ್ತು ತರುಣ್‌ ಶಿವಪ್ಪ ನಿರ್ಮಿಸುತ್ತಿರುವ "ವಿಕ್ಟರಿ 2' ಚಿತ್ರದ ಒಂದು ಹಾಡನ್ನು ಖ್ಯಾತ ಗಾಯಕ ದಿವ್ಯಕುಮಾರ್‌ ಹಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್‌ ಬರೆದಿರುವ "ಪ್ಲೀಸ್‌ ಟ್ರಸ್ಟು ನಾ ಚೀಪ್‌ ಅಂಡ್‌ ಬೆಸ್ಟ್‌' ಎಂಬ ಹಾಡನ್ನು ಅರ್ಜುನ್‌ ಜನ್ಯ ಸ್ಟುಡಿಯೊದಲ್ಲಿ ಹಾಡಿದ್ದಾರೆ.

ಅರ್ಜುನ್‌ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರು. ಹರಿ ಸಂತೋಷ್‌ ನಿರ್ದೇಶನದಲ್ಲಿ "ವಿಕ್ಟರಿ-2' ಮೂಡಿಬಂದಿದೆ. ಬಾಲಿವುಡ್‌ನ‌ ಹಲವು ಯಶಸ್ವಿ ಚಿತ್ರಗಳ ಗೀತೆಗಳನ್ನು ತಮ್ಮ ಅಮೋಘ ಕಂಠದಲ್ಲಿ ಹಾಡಿರುವ ದಿವ್ಯಕುಮಾರ್‌, ಗುಜರಾತಿ, ರಾಜಾಸ್ಥಾನಿ, ಮರಾಠಿ, ತಮಿಳು, ತೆಲುಗು ಭಾಷೆಗಳ ಗಾಯನಪ್ರಿಯರನ್ನು ತಮ್ಮ ಕಂಠಸಿರಿಯಿಂದ ರಂಜಿಸಿದ್ದಾರೆ.

ಕನ್ನಡದ "ರನ್‌ ಆಂಟೋನಿ' ಚಿತ್ರದ ರನ್‌ ರನ್‌ ಹಾಡನ್ನು ದಿವ್ಯ ಕುಮಾರ್‌ ಹಾಡಿದ್ದರು. ಈಗ "ವಿಕ್ಟರಿ-2' ಚಿತ್ರದ ಹಾಡನ್ನು ಹಾಡಿದ್ದಾರೆ. ಈ ಹಾಡಿನ ಚಿತ್ರೀಕರಣ ರಷ್ಯಾದ ಸುಂದರ ತಾಣದಲ್ಲಿ ನಡೆದಿದೆ.  ಶರಣ್‌ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ಅಪೂರ್ವ, ರವಿಶಂಕರ್‌, ಅಸ್ಮಿತಾ ಸೂದ್‌  ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. 


Trending videos

Back to Top