ವಿಕ್ಟರಿ-2ಗೆ ದಿವ್ಯ ಕುಮಾರ್ ಗಾಯನ
Team Udayavani, Sep 2, 2018, 11:13 AM IST
ಮಾನಸ ತರುಣ್ ಮತ್ತು ತರುಣ್ ಶಿವಪ್ಪ ನಿರ್ಮಿಸುತ್ತಿರುವ “ವಿಕ್ಟರಿ 2′ ಚಿತ್ರದ ಒಂದು ಹಾಡನ್ನು ಖ್ಯಾತ ಗಾಯಕ ದಿವ್ಯಕುಮಾರ್ ಹಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್ ಬರೆದಿರುವ “ಪ್ಲೀಸ್ ಟ್ರಸ್ಟು ನಾ ಚೀಪ್ ಅಂಡ್ ಬೆಸ್ಟ್’ ಎಂಬ ಹಾಡನ್ನು ಅರ್ಜುನ್ ಜನ್ಯ ಸ್ಟುಡಿಯೊದಲ್ಲಿ ಹಾಡಿದ್ದಾರೆ.
ಅರ್ಜುನ್ ಜನ್ಯ ಈ ಚಿತ್ರದ ಸಂಗೀತ ನಿರ್ದೇಶಕರು. ಹರಿ ಸಂತೋಷ್ ನಿರ್ದೇಶನದಲ್ಲಿ “ವಿಕ್ಟರಿ-2′ ಮೂಡಿಬಂದಿದೆ. ಬಾಲಿವುಡ್ನ ಹಲವು ಯಶಸ್ವಿ ಚಿತ್ರಗಳ ಗೀತೆಗಳನ್ನು ತಮ್ಮ ಅಮೋಘ ಕಂಠದಲ್ಲಿ ಹಾಡಿರುವ ದಿವ್ಯಕುಮಾರ್, ಗುಜರಾತಿ, ರಾಜಾಸ್ಥಾನಿ, ಮರಾಠಿ, ತಮಿಳು, ತೆಲುಗು ಭಾಷೆಗಳ ಗಾಯನಪ್ರಿಯರನ್ನು ತಮ್ಮ ಕಂಠಸಿರಿಯಿಂದ ರಂಜಿಸಿದ್ದಾರೆ.
ಕನ್ನಡದ “ರನ್ ಆಂಟೋನಿ’ ಚಿತ್ರದ ರನ್ ರನ್ ಹಾಡನ್ನು ದಿವ್ಯ ಕುಮಾರ್ ಹಾಡಿದ್ದರು. ಈಗ “ವಿಕ್ಟರಿ-2′ ಚಿತ್ರದ ಹಾಡನ್ನು ಹಾಡಿದ್ದಾರೆ. ಈ ಹಾಡಿನ ಚಿತ್ರೀಕರಣ ರಷ್ಯಾದ ಸುಂದರ ತಾಣದಲ್ಲಿ ನಡೆದಿದೆ. ಶರಣ್ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ಅಪೂರ್ವ, ರವಿಶಂಕರ್, ಅಸ್ಮಿತಾ ಸೂದ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು