ಕೆಸಿಸಿ ಕೌಂಟ್‌ಡೌನ್‌ ಶುರು


Team Udayavani, Sep 2, 2018, 10:00 PM IST

sude-shiv.png

ಕನ್ನಡ ಚಲನಚಿತ್ರ ಕಪ್‌ನ ಎರಡನೇ ಅವತರಿಣಿಕೆಗೆ ದಿನಗಣನೆ ಶುರುವಾಗಿದೆ. ಮುಂದಿನ ಶನಿವಾರ ಮತ್ತು ಭಾನುವಾರ ಅಂದರೆ ಸೆಪ್ಟೆಂಬರ್‌ 8 ಮತ್ತು 9ರಂದು ಈ ಕ್ರಿಕೆಟ್‌ ಟೂರ್ನಿಯ ಎರಡನೇ ಆವೃತ್ತಿ ನಡೆಯಲಿದೆ. ಈ ಕಪ್‌ನಲ್ಲಿ ಆರು ತಂಡಗಳು ಭಾಗವಹಿಸುತ್ತಿದ್ದು, ಕನ್ನಡ ಚಿತ್ರರಂಗದ ಜನಪ್ರಿಯ ಸ್ಟಾರ್‌ಗಳಾದ ಶಿವರಾಜಕುಮಾರ್‌, ಪುನೀತ್‌ ರಾಜಕುಮಾರ್‌, ಸುದೀಪ್‌, ಉಪೇಂದ್ರ, ಗಣೇಶ್‌ ಮತ್ತು ಯಶ್‌ ಒಂದೊಂದು ತಂಡವನ್ನು ಪ್ರತಿನಿಧಿಸಲಿದ್ದಾರೆ.

ಇದರ ಜೊತೆಗೆ ಆರು ತಂಡಗಳಲ್ಲಿ ಪರಭಾಷೆಯ ಜನಪ್ರಿಯ ಕಲಾವಿದರಾದ ಸುನೀಲ್‌ ಶೆಟ್ಟಿ, ಧನುಷ್‌, ಅರ್ಬಾಜ್‌ ಖಾನ್‌, ಸೋಹೈಲ್‌ ಖಾನ್‌ ಮುಂತಾದವರು ಒಂದೊಂದು ತಂಡದಲ್ಲಿ ಆಡಲಿದ್ದಾರೆ. ಇದಲ್ಲದೆ ಆರು ಅಂತಾರಾಷ್ಟ್ರೀಯ ಆಟಗಾರರು ಈ ಟೂರ್ನಿಯಲ್ಲಿ ಆಡುತ್ತಿರುವುದು ವಿಶೇಷ. ಮತ್ತೂ ಒಂದು ವಿಶೇಷವೆಂದರೆ, ಕಳೆದ ಬಾರಿಯ ಕಪ್‌ ಗೆದ್ದಿರುವ ಶಿವರಾಜಕುಮಾರ್‌, ಈ ಬಾರಿ 10 ದಿನಗಳ ಕಾಲ ಪ್ರಾಕ್ಟೀಸ್‌ ನಡೆಸುತ್ತಿದ್ದಾರೆ.

ಹೌದು, ಈ ವಿಷಯವನ್ನು ಸ್ವತಃ ಸುದೀಪ್‌ ಸ್ಪಷ್ಟಪಡಿಸುತ್ತಾರೆ. “ಶಿವಣ್ಣ ಇದುವರೆಗೂ ಫ್ಯಾಮಿಲಿ ಜೊತೆಗೆ ಪ್ರವಾಸ ಹೋಗುವುದು ಬಿಟ್ಟರೆ, ಮಿಕ್ಕಂತೆ ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಾರೆ. ಇದೇ ಮೊದಲ ಬಾರಿಗೆ ಅವರು 10 ದಿನಗಳ ಕಾಲ ಅಭ್ಯಾಸ ಮಾಡುತ್ತಿದ್ದಾರೆ. ಇನ್ನು ಗಣೇಶ್‌ ಅಸ ಪ್ರಾಕ್ಟೀಸ್‌ ಸೆಷನ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಬೇರೆ ಬೇರೆ ಕಲಾವಿದರು ಸಹ ಅಭ್ಯಾಸದಲ್ಲಿ ನಿರತರಾಗಿದ್ದಾರೆ’ ಎನ್ನುತ್ತಾರೆ ಸುದೀಪ್‌.

ಸುದೀಪ್‌ ಎಂಬ ಕ್ರಿಕೆಟ್‌ ಮಾಂತ್ರಿಕ: ಈ ಕುರಿತು ಮಾತನಾಡುವ ಶಿವರಾಜಕುಮಾರ್‌, “ಮೊದಲ ಸೀಸನ್‌ನಲ್ಲಿ ಸುದೀಪ್‌ ಬಂದು ಕೆಸಿಸಿ ಬಗ್ಗೆ ಹೇಳಿದಾಗ, ಏನಿದು ನಾನು ಆಡಬೇಕಾ ಅಂತ ಅನಿಸಿತ್ತು. ಆದರೆ, ಈ ಟೂರ್ನಿಯನ್ನು ಸುದೀಪ್‌ ಶುರು ಮಾಡಿರುವುದರಿಂದ ಏನೋ ಇರುತ್ತದೆ ಅಂತ ನಾನು ಸೇರಿಕೊಂಡೆ. ಟೀಮ್‌ ಆಯ್ಕೆಗೆ ಬಂದಾಗ ಎಲ್ಲರಿಗೂ ಒಂದೊಂದು ಬ್ಲಾಕ್‌ ಕೋಟ್‌ ಕೊಡುವುದರ ಮೂಲಕ ಎಲ್ಲರೂ ಸರಿಸಮ ಎನ್ನುವುದು ತೋರಿಸಿಕೊಟ್ಟರು.

ಅವರ ಶಿಸ್ತು, ಪ್ಯಾಶನ್‌ ನೋಡಿ ಇನ್ನೂ ಖುಷಿಯಾಯಿತು. ಇಲ್ಲಿ ಯಾರೂ ದೊಡ್ಡೋರು, ಚಿಕ್ಕೋರು ಅಂತ ಇಲ್ಲ. ಇದೊಂದು ದೊಡ್ಡ ಪ್ರಯತ್ನ. ನಾನು ಸುದೀಪ್‌ಗೆ ಸಿ.ಎಂ ಅಂತ ಕರೆಯುತ್ತೀನಿ. ಸಿ.ಎಂ ಎಂದರೆ ನನ್ನ ಪ್ರಕಾರ ಕ್ರಿಕೆಟ್‌ ಮಾಂತ್ರಿಕ ಅಂತ. ಕಳೆದ ಬಾರಿಗಿಂತಲೂ ದೊಡ್ಡ ಮಟ್ಟದಲ್ಲಿ ಈ ಟೂರ್ನಿಯನ್ನು ಅವರು ಆಯೋಜಿಸಿದ್ದಾರೆ. ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯುತ್ತಿದೆ.

ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನೇಕ ಪಂದ್ಯಗಳನ್ನ ನೋಡಿದ್ದೇನೆ. ನನಗೆ ಜಿ.ಆರ್‌. ವಿಶ್ವನಾಥ್‌, ಕ್ಲೈವ್‌ ಲಾಯ್ಡ ಅಂದರೆ ಬಹಳ ಇಷ್ಟ. ಬೆಂಗಳೂರು, ಚೆನ್ನೈ, ಮುಂಬೈ ಹೀಗೆ ಎಲ್ಲಾ ಟೆಸ್ಟ್‌ ಪಂದ್ಯಗಳು ನಡೆದರೂ ಹುಡುಕಿಕೊಂಡು ಹೋಗುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಹಳಷ್ಟು ಪಂದ್ಯಗಳನ್ನು ನೋಡಿದ್ದೇನೆ. ಈಗ ಅಲ್ಲೇ ಆಡುವ ಅವಕಾಶ ಸಿಕ್ಕಿದೆ’ ಎಂದು ಖುಷಿಪಡುತ್ತಾರೆ ಶಿವರಾಜಕುಮಾರ್‌.

ಮುಂದಿನ ಟೂರ್ನಿ ವಿದೇಶದಲ್ಲಿ: ಈ ಟೂರ್ನಿಗೆ ತಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎನ್ನುವ ಶಿವರಾಜಕುಮಾರ್‌. “ಸುದೀಪ್‌ ನನ್ನ ಸಹೋದರನಿದ್ದಂತೆ. ಅವರ ಈ ಸಾಹಸಕ್ಕೆ ನನ್ನ ಸಂಪೂರ್ಣ ಸಹಕಾರವಿರುತ್ತದೆ. ನಾವೆಲ್ಲಾ ಯಾವಾಗಲೂ ಜಗಳ ಮಾಡಿಕೊಳ್ತೀವಿ ಅಂತಾರೆ. ಆದರೆ, ನಾವು ಹಾಗಲ್ಲ. ಇಲ್ಲಿ ಯಾರು ಮುನ್ನಡೆಸುತ್ತಾರೆ ಎನ್ನುವುದು ಮುಖ್ಯವಲ್ಲ. ಎಲ್ಲರೂ ಜೊತೆಗೆ ಆಡುತ್ತಿರುವುದು ಮುಖ್ಯ. ಕಳೆದ ಬಾರಿ ಸರಿಯಾಗಿ ಪ್ರಾಕ್ಟೀಸ್‌ ಮಾಡುವುದಕ್ಕೆ ಆಗಲಿಲ್ಲ.

ಈ ಬಾರಿ ಮುಂಚಿತವಾಗಿ ಅಭ್ಯಾಸ ಮಾಡುತ್ತಿದ್ದೀನಿ. ಅಂತಾರಾಷ್ಟ್ರೀಯ ಆಟಗಾರರು, ಬೇರೆ ಭಾಷೆಯ ಕಲಾವಿದರ ಜೊತೆಗೆ ಆಟ ಆಡುತ್ತಿದ್ದೇವೆ.  ಆಟ ನೋಡುವುದಕ್ಕೆ ಬರುವ ಜನರಿಗೆ ಖುಷಿಯಾಗಬೇಕು. ಟಿ20 ವಾತಾವರಣ ಸೃಷ್ಟಿಸಬೇಕು. ಅದೇ ಕಾರಣಕ್ಕೆ ಈ ಬಾರಿ ತಯಾರಿ ಮಾಡಿಕೊಂಡು ಆಡುತ್ತಿದ್ದೇನೆ. ಇನ್ನು ಬಹಳ ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಟಿಕೆಟ್‌ನಿಂದ ಬರುವ ಹಣವನ್ನು ಕೊಡಗು ಸಂತ್ರಸ್ತರಿಗೆ ಕೊಡುತ್ತಿರುವುದು ಇನ್ನಷ್ಟು ಖುಷಿ ತಂದಿದೆ’ ಎನ್ನುತ್ತಾರೆ ಶಿವರಾಜಕುಮಾರ್‌.

ಬರಬೇಡಿ ಅಂತ ಯಾರಿಗೂ ಗೇಟ್‌ ಹಾಕಿಲ್ಲ: ಇನ್ನು ಈ ಬಾರಿಯ ಟೂರ್ನಿಯಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ದೊಡ್ಡ ಸ್ಟಾರ್‌ಗಳು ಆಡುತ್ತಿದ್ದಾರೆ, ದರ್ಶನ್‌ ಅವರೊಬ್ಬರನ್ನು ಬಿಟ್ಟು. ಕಳೆದ ಸೀಸನ್‌ನಲ್ಲೂ ದರ್ಶನ್‌ ಅವರು ಭಾಗವಹಿಸಿರಲಿಲ್ಲ. ಈ ಕುರಿತು ಸುದೀಪ್‌ ಅವರನ್ನು ಕೆಸಿಸಿ ಪತ್ರಿಕಾಗೋಷ್ಠಿಯ ನಂತರ ಮಾಧ್ಯಮದರು ಕೇಳಿದಾಗ, “ನಾವು ಯಾರಿಗೂ ಬರಬೇಡಿ ಅಂತ ಗೇಟ್‌ ಹಾಕಿಲ್ಲ’ ಎಂದು ಸ್ಪಷ್ಟಪಡಿಸಿದರು. ಈ ಕುರಿತು ಮಾತನಾಡಿದ ಸುದೀಪ್‌, “ನನ್ನ ಕಡೆಯಿಂದ ತಪ್ಪಾದರೆ, ಯಾರನ್ನ ಕೇಳಬೇಕು? ನನ್ನನ್ನು ತಾನೇ.

ಅದು ಬಿಟ್ಟು, ಶಿವರಾಜಕುಮಾರ್‌ ಮನೆ ಹತ್ತಿರ ಹೋಗಿ ಕೇಳುವುದು ಸರಿಯಾ? ಹಾಗೆಯೇ ಈ ವಿಷಯದಲ್ಲಿ ನೀವು ಅವರನ್ನು ಕೇಳಬೇಕು. ನನಗೆ ಸಂಬಂಧಿಸಿದ ಪ್ರಶ್ನೆಯನ್ನು ಮಾತ್ರ ಇಲ್ಲಿ ಕೇಳಿ. ನಾನು ನನ್ನ ಜೀವನಕ್ಕೆ ಸಂಬಂಧಪಟ್ಟಂತೆ ಹೇಳಬಲ್ಲೆ. ಒಂದು ಹಂತದಲ್ಲಿ ಹೆಂಡತಿ ಮತ್ತು ಫ್ಯಾಮಿಲಿ ವಿಷಯದಲ್ಲಿ ಮಾತನಾಡಬಲ್ಲೆ. ಅದು ಬಿಟ್ಟು ಬೇರೆಯವರ ಲೈಫ್ ಬಗ್ಗೆ ಮಾತನಾಡುವುದಕ್ಕೆ ಸಾಧ್ಯವಿಲ್ಲ. ನನಗೆ ಏನು ಸಂಬಂಧಪಟ್ಟಿದೆಯೋ ಅದನ್ನ ಮಾತ್ರ ಕೇಳಿ’ ಎಂದು ಸುದೀಪ್‌ ಹೇಳಿದರು.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.