CONNECT WITH US  

ಸಸ್ಪೆನ್ಸ್ ದಾರಿಯಲ್ಲಿ ರಿಷಿ: Watch

ಪುನೀತ್‌ ರಾಜಕುಮಾರ್‌ ತಮ್ಮ ಪಿಆರ್‌ಕೆ ಬ್ಯಾನರ್‌ನಡಿ ಹೊಂಬಾಳೆ ಫಿಲಂಸ್‌ ಜತೆ ಸೇರಿ ಚಿತ್ರವೊಂದನ್ನು ನಿರ್ಮಿಸುತ್ತಿರುವ "ಗೋಧಿ ಬಣ್ಣ ಸಾಧಾರಣ ಮೈಕಟ್ಟು' ನಿರ್ದೇಶಿಸಿದ್ದ ಹೇಮಂತ್‌ ರಾವ್‌ ನಿರ್ದೇಶನದ "ಕವಲು ದಾರಿ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಸಖತ್ ಸಸ್ಪೆನ್ಸ್ ಥ್ರಿಲ್ಲಿಂಗ್‍ ಆಗಿದ್ದು, ಸಿನಿಪ್ರಿಯರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಹಿಂದೆ ಚಿತ್ರದ ನಾಯಕ ರಿಷಿ ಅವರ ಫ‌ಸ್ಟ್ ಲುಕ್‌ ಬಿಡುಗಡೆಯಾಗಿ ಪೊಲೀಸ್‌ ಅಧಿಕಾರಿಯ ಗೆಟಪ್‌ನಲ್ಲಿ ಹೀರೋ ಮನೀಶ್‌ ಕಾಣಿಸಿಕೊಂಡಿದ್ದರು. ಅಲ್ಲದೇ ಮನೀಶ್‌ ರಿಷಿ ಅವರು ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಎಂದಷ್ಟೇ ಗೊತ್ತಾಗಿತ್ತು. ಅಲ್ಲದೇ ಇದೊಂದು  ಔಟ್‌ ಅಂಡ್‌ ಔಟ್‌ ಥ್ರಿಲ್ಲರ್‌ ಸಿನಿಮಾ ಆಗಿದ್ದು, "ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರ ಮಾಡಿದ್ದ ಹೇಮಂತ್‌, ಅದೇ ತಂಡ ಕಟ್ಟಿಕೊಂಡು "ಕವಲು ದಾರಿ' ಮಾಡಿದ್ದಾರೆ.

ಇನ್ನು ಚರಣ್ ರಾಜ್ ಸಂಗೀತ ಸಂಯೋಜನೆ, ಕೆ. ರವಿವರ್ಮ ಸಾಹಸ, ಜಗದೀಶ್ ಸಂಕಲನ, ಹೇಮಂತ್‌ ರಾವ್‌ - ಗುಂಡು ಶೆಟ್ಟಿ ಸಂಭಾಷಣೆ ಸೇರಿದಂತೆ ಆಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣ ಚಿತ್ರಕ್ಕಿದೆ. ಹಾಗೂ ಅನಂತ್ ನಾಗ್, ರಿಷಿ, ಅಚ್ಯುತ್ ಕುಮಾರ್, ಸುಮನ್ ರಂಗನಾಥನ್, ರೋಶ್ನಿ ಪ್ರಕಾಶ್, ಸಿದ್ಧಾರ್ಥ್ ಮಾಧ್ಯಾಮಿಕ, ಸಿರಿ ರವಿಕುಮಾರ್, ಸಮನ್ವಿತಾ ಶೆಟ್ಟಿ, ಸಂಪತ್ ಕುಮಾರ್, ಸುಲೀಲ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವಿದೆ.

Trending videos

Back to Top