CONNECT WITH US  

ಜಿಯೋ ಸಿಮ್ ಬಂದಾಯ್ತು... ಲೋಕ 4ಜಿ ಆಗೋಯ್ತು: Watch

ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರ "ಕಳ್ಬೆಟ್ಟದ ದರೋಡೆಕೋರರು' ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದರೆ, ಇತ್ತ ಚಿತ್ರತಂಡ ಚಿತ್ರ "ಜಿಯೋ ಸಿಮ್ ಗಣೇಶ' ಎಂಬ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಿದೆ. ಅಲ್ಲ‍ದೇ ಹಾಡಿಗೆ ಸಾಹಿತ್ಯವನ್ನು ಅರಸು ಅಂತಾರೆ ಬರೆದಿದ್ದು, ವ್ಯಾಸರಾಜ್ ಸೊಸಲೆ, ಅರಸು ಅಂತಾರೆ ಹಾಡಿಗೆ ದನಿಯಾಗಿದ್ದಾರೆ.

"ಭ್ಯಾಗರಾಜ್'ನ ನಂತರ ದೀಪಕ್ ಮಧುವನಹಳ್ಳಿ, ಅನುಷ್ ಶೆಟ್ಟಿ ಬರೆದಿರುವ "ಕಳ್ಬೆಟ್ಟದ ದರೋಡೆಕೋರರು' ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು ತೆರೆಮೇಲೆ ಬರಲು ಸಜ್ಜಾಗಿದೆ. "ರಾಮಾ ರಾಮಾ ರೇ' ಖ್ಯಾತಿಯ ನಟರಾಜ್ ಈ ಚಿತ್ರದ ನಾಯಕನಾಗಿದ್ದು, ಅವರ ಎದುರಿಗೆ "ರಾಧಾರಮಣ' ಧಾರವಾಹಿಯ ಶ್ವೇತಾ ಪ್ರಸಾದ್ ನಟಿಸಿದ್ದಾರೆ.

ಮೊದಲಬಾರಿಗೆ ಬ್ರಿಗೇಡ್ ಫಿಲಂ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಚಿತ್ರಕ್ಕೆ ಕಿರಣ್ ಹಂಪಾಪುರ, ಲವಿತ್, ಪ್ರದೀಪ್ ಛಾಯಾಗ್ರಹಣ ಮಾಡಿದ್ದಾರೆ. "ಅಮರಾವತಿ' ಖ್ಯಾತಿಯ ಹೇಮಂತ್ ಸುಶಿಲ್, ಸುಂದರ್ ವೀಣಾ ಮತ್ತು ರಮಣ್ಣ ಮೊದಲಾದ ನಟರು ಈ ಚಿತ್ರದಲ್ಲಿದ್ದಾರೆ. 
 

Trending videos

Back to Top