CONNECT WITH US  

"ಇರುವುದೆಲ್ಲವ ಬಿಟ್ಟು' ಚೆಲುವೆ ಬಂದರು ಮುದ್ದಾಗಿ: Watch

ದಾವಣಗೆರೆ ದೇವರಾಜ್‌ ನಿರ್ಮಾಣದ "ಇರುವುದೆಲ್ಲವ ಬಿಟ್ಟು' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿ ಅಬ್ಬರಿಸುತ್ತಿರುವ ನಡುವೆಯೇ, ಚಿತ್ರತಂಡ ಚಿತ್ರದ "ಚೆಲುವೆ ನೀ ಬಂದು' ವಿಡಿಯೋ ಸಾಂಗ್ ರಿಲೀಸ್ ಮಾಡಿದೆ. ಹಾಡಿನಲ್ಲಿ ಮೇಘನಾ ರಾಜ್‌ ಮತ್ತು ಶ್ರೀಮಹದೇವ್‌ ಕಾಣಿಸಿಕೊಂಡಿದ್ದಾರೆ.

ಅಲ್ಲದೇ ಹಾಡಿಗೆ ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ ಬರೆದಿದ್ದು, ಸಿದ್ಧಾರ್ಥ ಬೆಲ್ಮಾಣ್ಣು ಕಂಠಸಿರಿಯಲ್ಲಿ ಮೂಡಿಬಂದಿದೆ. ಸದ್ಯ ಬಿಡುಗಡೆಯಾಗಿರುವ ಲವ್​ ರೊಮ್ಯಾಂಟಿಕ್​ "ಚೆಲುವೆ ನೀ ಬಂದು' ಸಾಂಗ್​ ಅದ್ಭುತವಾಗಿ ಮೂಡಿ ಬಂದಿದೆ. ಇನ್ನು ಚಿತ್ರದ ಒಂದು ಹಾಡು ತಮಿಳು ನಟ ಸಿಂಬು ಕಂಠದಲ್ಲಿ ಮೂಡಿ ಬಂದಿದ್ದು, ಚಿತ್ರಕ್ಕೆ ಶ್ರೀಮುರಳಿ ಧ್ವನಿ ನೀಡುವ ಮೂಲಕ ಹೊಸಬರ ತಂಡವನ್ನು ಪ್ರೋತ್ಸಾಹಿಸಿದ್ದಾರೆ. 

ಚಿತ್ರವನ್ನು ಕಾಂತ ಕನ್ನಲ್ಲಿ ನಿರ್ದೇಶಿಸಿದ್ದು, ಮಹೇಶ್‌ ಮಳವಳ್ಳಿ ಸಂಭಾಷಣೆ, ವಿಲಿಯಂ ಡೇವಿಡ್‌ ಛಾಯಾಗ್ರಹಣ, ಶ್ರೀಧರ್‌ ವಿ ಸಂಭ್ರಮ್‌ ಸಂಗೀತ, ಶ್ರೀನಿವಾಸ್‌ ಕಲೆ ಇದೆ. ತಾರಾಗಣದಲ್ಲಿ ತಿಲಕ್‌, ಶ್ರೀಮಹದೇವ್‌, ಅಚ್ಯುತ್‌ ಕುಮಾರ್‌, ಅರುಣ ಬಾಲರಾಜ್‌, ಅಭಿಷೇಕ್‌ ರಾಯಣ್ಣ, ರಿಚರ್ಡ್‌ ಲೂಯಿಸ್‌ ಮುಂತಾದವರಿದ್ದಾರೆ. ಅಂದಹಾಗೆ "ಇರುವುದೆಲ್ಲವ ಬಿಟ್ಟು' ಈ ಶೀರ್ಷಿಕೆಗೆ "ಇರುವೆ ಬಿಟ್ಟುಕೊಳ್ಳುವುದೇ ಜೀವನ' ಎಂಬ ಅಡಿಬರಹವಿದೆ.
 

Trending videos

Back to Top