ನಾವು ಬೇರೆ ಮನೇಲಿದ್ದರೂ ಮನಸ್ಸು ಒಂದೇ


Team Udayavani, Sep 8, 2018, 11:19 AM IST

shivanna.jpg

ಶಿವರಾಜಕುಮಾರ್‌ ತಮ್ಮ ಚಿತ್ರಗಳ ಬಗ್ಗೆ, ನಡೆದು ಬಂದ ಹಾದಿಯ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಆದರೆ, ಬಾಲ್ಯದ ಬಗ್ಗೆ ಮತ್ತು ಶಾಲೆಯ ರಜಾ ದಿನಗಳ ಬಗ್ಗೆ ಅವರು ಮಾತನಾಡಿದ್ದು ಕಡಿಮೆಯೇ. ಈಗ ಮೊದಲ ಬಾರಿಗೆ ಅವರು ಮನಬಿಚ್ಚಿ, ತಮ್ಮ ಬಾಲ್ಯದ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಅದಕ್ಕೆ ವೇದಿಕೆ ಮಾಡಿಕೊಟ್ಟಿದ್ದು ವಿನಯ್‌ ರಾಜಕುಮಾರ್‌ ಅವರ ಹೊಸ ಚಿತ್ರ “ಗ್ರಾಮಾಯಣ’. ದೇವನೂರು ಚಂದ್ರು ನಿರ್ದೇಶನದ “ಗ್ರಾಮಾಯಣ’ ಚಿತ್ರದ ಟೀಸರ್‌ ಬಿಡುಗಡೆ ಸಮಾರಂಭ ಗುರುವಾರ ಸಂಜೆ ನಡೆಯಿತು.

ಟೀಸರ್‌ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸುವುದಕ್ಕೆ ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌ ಮತ್ತು ಪುನೀತ್‌ ರಾಜಕುಮಾರ್‌ ಬಂದಿದ್ದರು. “ಗ್ರಾಮಾಯಣ’ ಚಿತ್ರದ ಪೋಸ್ಟರ್‌ ನೋಡಿದರೆ, ನಿರ್ದೇಶಕ ಸೂರಿ ಅವರ ಪೇಂಟಿಂಗ್‌ ನೆನಪಾಗುತ್ತದೆ ಎಂದು ಹೇಳಿದ ಶಿವರಾಜಕುಮಾರ್‌, ತಮ್ಮ ಗ್ರಾಮದಲ್ಲಿ ಕಳೆದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. “ಬಾಲ್ಯದ ಸಾಕಷ್ಟು ದಿನಗಳನ್ನು ಹಳ್ಳಿಯಲ್ಲಿ ಕಳೆದಿದ್ದೇನೆ. ಪರೀಕ್ಷೆ ಮುಗಿಯಿತು ಎಂದರೆ, ಅಂಬಾಸಿಡರ್‌ ಕಾರಿನಲ್ಲಿ 25 ಮಕ್ಕಳು ಒಟ್ಟಿಗೆ ಗಾಜನೂರಿಗೆ ಹೋಗುತ್ತಿದ್ದೆವು.

ಯಲ್ಲಪ್ಪ ಅಂತ ಡ್ರೈವರ್‌ವೊಬ್ಬರಿದ್ದರು. ಮೈಸೂರಿನಲ್ಲಿ ಬಿರಿಯಾನಿ ಕಟ್ಟಿಸಿಕೊಂಡು, ನಂಜನಗೂಡಿಯ ಹೊಳೆಯ ದಡದಲ್ಲಿ ಊಟ ಮಾಡಿ, ಊರಿಗೆ ಹೋದವೆಂದರೆ, ಅಲ್ಲಿಂದ ಆಟ ಶುರು. ಎಲ್ಲೇ ಹೋದರೂ ಜನ ನನಗೆ ಬಹಳ ಎನರ್ಜಿ ಇದೆ ಎನ್ನುತ್ತಾರೆ. ಆ ಎನರ್ಜಿಗೆ ಕಾರಣ ನಮ್ಮ ಹಳ್ಳಿಯ ವಾತಾವರಣ. ನಾನು ಈಜ ಕಲಿತಿದ್ದೇ ಅಲ್ಲಿ. ಒಂದು ದಿನ ಯಾರೋ ಒಬ್ಬರು ನನ್ನನ್ನು ನೀರಿಗೆ ತಳ್ಳಿಬಿಟ್ಟಿದ್ದರು. ನನಗೆ ಗಾಬರಿಯಾಗಿಬಿಟ್ಟಿತು. “ಕಾಲು ಬಡಿ, ಈಜು ಬರತ್ತೆ …’ ಅಂದ. ಕಾಲು ಆಡಿಸ್ತಾ ಆಡಿಸ್ತಾ ಈಜು ಕಲಿತಿದ್ದೆ.

ಮೀನು ಹಿಡೀತಿದ್ದಿದ್ದು, ಮರಕೋತಿ ಆಟ ಆಡಿದ್ದು, ಮಾವಿನಕಾಯಿ ಕದ್ದಿದ್ದು, ಅಪ್ಪಾಜಿ ಹೊಡೆದಿದ್ದು … ಇವೆಲ್ಲಾ ಮರೆಯೋಕೆ ಸಾಧ್ಯವಿಲ್ಲ. ಎಲ್ಲೋ ಊಟ ಮಾಡ್ತಿದ್ವಿ, ಎಲ್ಲೋ ಮಲಗುತ್ತಿದ್ವಿ, ಯಾರೂ ನಮ್ಮನ್ನ ತಡೀರಿತಲಿಲ್ಲ. ಈಗಲೂ ನನಗೆ ಸಾವಿರ ಪ್ರಾಬ್ಲಿಮ್‌ಗಳಿದ್ದರೂ, ಎಲ್ಲಿ ಮಲಗಿದರೂ ನಿದ್ದೆ ಬರುತ್ತೆ. ಇದೆಲ್ಲಾ ಕಲಿಸಿದ್ದು ನನ್ನೂರು. ಈಗಲೂ ನನಗೆ ಗಾಜನೂರು ಅಂದ್ರೆ ಇಷ್ಟ’ ಎಂದು ನೆನಪಿಸಿಕೊಂಡರು ಶಿವರಾಜಕುಮಾರ್‌. ತಮ್ಮ ಮಾತನ್ನು ಮುಂದುವರೆಸಿದ ಶಿವರಾಜಕುಮಾರ್‌, “ನನಗೂ ಅಪ್ಪುಗೂ 13 ವರ್ಷ ವ್ಯತ್ಯಾಸ.

ಅವನ ಯಶಸ್ಸಿಗೆ ಯಾವತ್ತೂ ಹೊಟ್ಟೆಕಿಚ್ಚು ಪಟ್ಟಿಲ್ಲ. ಚಿಕ್ಕ ವಯಸ್ಸಿನಿಂದಲೂ ಅವನ ಟ್ಯಾಲೆಂಟ್‌ ನೋಡಿಕೊಂಡು ಬಂದ್ವಿ. ನಾವೆಲ್ಲಾ ಬೇರೆಬೇರೆ ಮನೆಯಲ್ಲಿದ್ದರೂ ನಮ್ಮ ಮನಸ್ಸೆಲ್ಲಾ ಒಂದೇ. ಭಿನ್ನಾಭಿಪ್ರಾಯಗಳು ಸಹಜ. ಅದು ಸಹಜವಾಗಿಯೇ ಇರುತ್ತದೆ ಮತ್ತು ಇರಲೇಬೇಕು. ಹಾಗಂತ ನಾವು ಮೂರು ಜನ ಯಾವತ್ತೂ ಕಿತ್ತಾಡಿಲ್ಲ. ನಾವ್ಯಾವತ್ತೂ ಒಂದೇ. ಅದಢ ಜೀವನ. ಪೋಸ್ಟರ್‌ನಲ್ಲಿದ್ದ ಫೋಟೋ ನೋಡಿ, ಅವೆಲ್ಲಾ ನೆನಪಾಯಿತು. ಇವತ್ತಿಗೂ ನನ್ನ ಬಾಲ್ಯದ ಫೋಟೋ ನೋಡಿದ್ರೆ, ನನಗೆ ಅಳು ಬರತ್ತೆ. ಆ ಫೋಟೋ ನೋಡಿದರೆ ಎಷ್ಟು ಬೇಗ ವಯಸ್ಸಾಯ್ತಲ್ಲ ಅನಿಸುತ್ತೆ’ ಎಂದರು ಶಿವರಾಜಕುಮಾರ್‌.

ಇನ್ನು ವಿನಯ್‌ ರಾಜಕುಮಾರ್‌ ಕುರಿತು ಮಾತನಾಡಿದ ಅವರು, “ವಿನು ಬೇರೆಬೇರೆ ತರಹದ ಸಿನಿಮಾಗಳನ್ನ ಮಾಡ್ತಾ ಇದ್ದಾನೆ. ಕೆಲವು ಚಿತ್ರಗಳು ಕಡಿಮೆ ತಲುಪಬಹುದು, ಅದನ್ನ ಸೋಲು ಅಂತಂದುಕೊಳ್ಳಬಾರದು. ಅದು ಸೋಲಲ್ಲ. ಸೋಲಲ್ಲೂ ಗೆಲವನ್ನು ಕಾಣಬೇಕು. ಡಿಪ್ರಸ್‌ ಆಗಬೇಡ ಅಂತ ಹೇಳುತ್ತಿರುತ್ತೀನಿ. ಅವನಪ್ಪ ನಟ. ತಾತ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ಕಲಾವಿದರೇ. ನನಗೆ 100 ಪರ್ಸೆಂಟ್‌ ನಂಬಿಕೆ ಇದೆ, ಅವನು ತುಂಬಾ ಹೆಸರು ಮಾಡುತ್ತಾನೆ ಅಂತ. ಈ ಚಿತ್ರದ ಹೆಸರು ಬಹಳ ಚೆನ್ನಾಗಿದೆ’ ಎಂದು ಶಿವರಾಜಕುಮಾರ್‌ ಹೇಳಿದರು.

* ನಾವು ಬೇರೆ ಮನೆಯಲ್ಲಿದ್ದರೂ ಮನಸ್ಸು ಒಂದೇ
* ಭಿನ್ನಾಭಿಪ್ರಾಯ ಸಹಜ; ಹಾಗಂತ ಯಾವತ್ತೂ ಕಾಡಿಲ್ಲ
* ನಾವು ಸೋಲಲ್ಲೂ ಗೆಲುವನ್ನ ಕಾಣಬೇಕು
* ಅವನಪ್ಪ, ತಾತ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ಕಲಾವಿದರೇ

ಟಾಪ್ ನ್ಯೂಸ್

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.