CONNECT WITH US  

ನಾಥೂರಾಮ್‌ ಜೊತೆ ಕಿಶೋರ್‌

ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ವಿನು ಬಳಂಜ ಅವರು "ನಾಥೂರಾಮ್‌' ಎಂಬ ಸಿನಿಮಾ ನಿರ್ದೇಶಿಸಲು ಮುಂದಾಗಿರುವುದು ನಿಮಗೆ ಗೊತ್ತೇ ಇದೆ. ರಿಷಭ್‌ ಶೆಟ್ಟಿ ಈ ಚಿತ್ರದ ನಾಯಕ. ಈಗ ಚಿತ್ರತಂಡಕ್ಕೆ ಮತ್ತೂಬ್ಬ ನಟನ ಸೇರ್ಪಡೆಯಾಗಿದೆ. ಅದು ಕಿಶೋರ್‌. ಕಿಶೋರ್‌ "ನಾಥೂರಾಮ್‌' ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಈಗಾಗಲೇ ಕಥೆ ಹಾಗೂ ಪಾತ್ರ ಕೇಳಿ ಖುಷಿಯಿಂದ ಒಪ್ಪಿಕೊಂಡಿರುವ ಕಿಶೋರ್‌ಗೆ ಇಲ್ಲಿ ಹೊಸ ಬಗೆಯ ಪಾತ್ರ ಸಿಕ್ಕಿದೆಯಂತೆ. ರಗಡ್‌ ಆಗಿರುವ ಪಾತ್ರದ ಮೂಲಕ ಮತ್ತೂಮ್ಮೆ ಮಿಂಚಲಿದ್ದಾರೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ "ನಾಥೂರಾಮ್‌' ಮೂಲಕ ರಿಷಭ್‌ ಶೆಟ್ಟಿ ಹಾಗೂ ಕಿಶೋರ್‌ ಮತ್ತೆ ಒಂದೇ ಚಿತ್ರದಲ್ಲಿ ನಟಿಸಿದಂತಾಗುತ್ತದೆ. ಈ ಹಿಂದೆ "ಉಳಿದವರು ಕಂಡಂತೆ' ಚಿತ್ರದಲ್ಲಿ ಇವರು ನಟಿಸಿದ್ದರು.

ಈಗ "ನಾಥೂರಾಮ್‌' ಮೂಲಕ ಮತ್ತೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಉಳಿದಂತೆ ಚಿತ್ರದ ಕಲಾವಿದರ ಆಯ್ಕೆ ನಡೆಯುತ್ತಿದೆ. ಹೊಸ ಮುಖಗಳಿಗೆ ಆದ್ಯತೆ ಸಿಗಲಿದೆ. ರಿಷಭ್‌ ನಾಯಕರಾಗಿರುವ "ಬೆಲ್‌ ಬಾಟಮ್‌' ಚಿತ್ರೀಕರಣ ಇನ್ನೂ ಮುಗಿದಿಲ್ಲ. ಚಿತ್ರದ ಹಾಡುಗಳು ಬಾಕಿ ಇವೆ. ಜೊತೆಗೆ ತಮ್ಮ ನಿರ್ದೇಶನದ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ಬಿಡುಗಡೆಯಲ್ಲೂ ರಿಷಭ್‌ ಬಿಝಿಯಾಗಿದ್ದರು.

ಈ ಎಲ್ಲಾ ಕಾರಣಗಳಿಂದಾಗಿ "ನಾಥೂರಾಮ್‌' ಆರಂಭವಾಗುವುದು ತಡವಾಗಿದೆ. ಸದ್ಯ ಚಿತ್ರ ಬಿಡುಗಡೆಯಾಗಿದ್ದು, ಹಾಡುಗಳು ಮುಗಿದ  ಕೂಡಲೇ "ನಾಥೂರಾಮ್‌' ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ವಿನು ಬಳಂಜ. ಈ ಚಿತ್ರದಲ್ಲಿ ರಿಷಭ್‌ ಗೆಟಪ್‌ ಬದಲಾಗಲಿದೆ. "ರಂಗಿತರಂಗ' ನಿರ್ಮಿಸಿರುವ ಪ್ರಕಾಶ್‌ ಅವರು "ನಾಥೂರಾಮ್‌' ನಿರ್ಮಾಪಕರು. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣವಿದೆ. 


Trending videos

Back to Top