CONNECT WITH US  

ರಾಧಿಕಾ ಪಂಡಿತ್‌ ಚಿತ್ರಕ್ಕೆ ಹೆಸರು ಸಿಕ್ತು

ಆದಿ ಪುರಾಣ ಆಯ್ತು; ಈಗ ಆದಿ ಲಕ್ಷ್ಮಿ ಪುರಾಣ

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಚಿತ್ರವೊಂದರಲ್ಲಿ ರಾಧಿಕಾ ಪಂಡಿತ್‌ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಈ ಚಿತ್ರಕ್ಕೆ ನಿರೂಪ್‌ ಭಂಡಾರಿ ಹೀರೋ ಅಂತಾನೂ ಹೇಳಲಾಗಿತ್ತು. ಆಗಿನ್ನೂ ಚಿತ್ರಕ್ಕೆ ನಾಮಕರಣ ಮಾಡಿರಲಿಲ್ಲ. ಈಗ ರಾಧಿಕಾ ಪಂಡಿತ್‌ ಮತ್ತು ನಿರೂಪ್‌ ಭಂಡಾರಿ ಕಾಂಬಿನೇಷನ್‌ನ ಚಿತ್ರಕ್ಕೆ ಹೆಸರಿಡಲಾಗಿದೆ. ಅದು "ಆದಿ ಲಕ್ಷ್ಮೀ ಪುರಾಣ'.

ಹೌದು, ಕನ್ನಡದಲ್ಲಿ ಹೊಸಬರ "ಆದಿ ಪುರಾಣ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದು "ಆದಿ ಲಕ್ಷ್ಮೀ ಪುರಾಣ'. ಈಗಾಗಲೇ ಚಿತ್ರೀಕರಣ ಮುಗಿಸಿರುವ ನಿರ್ದೇಶಕಿ ಪ್ರಿಯಾ, ಬಿಡುಗಡೆ ತಯಾರಿಯ ಕೆಲಸದ ಬಿಜಿಯಲ್ಲಿದ್ದಾರೆ. ಅಂದಹಾಗೆ, ಚಿತ್ರದ ಕಥೆಗೆ "ಆದಿ ಲಕ್ಷ್ಮೀ ಪುರಾಣ' ಶೀರ್ಷಿಕೆ ಸೂಕ್ತ ಎಂಬ ಕಾರಣಕ್ಕೆ ಅದನ್ನೇ ಅಂತಿಮಗೊಳಿಸಿದ್ದಾರೆ ನಿರ್ದೇಶಕರು. ಈಗಾಗಲೇ "ಆದಿ ಪುರಾಣ' ಎನ್ನುವ ಚಿತ್ರವೊಂದು ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಹೀಗಿರುವಾಗಲೇ "ಆದಿ ಲಕ್ಷ್ಮೀ ಪುರಾಣ' ಎಂಬ ಹೆಸರಿನ ಚಿತ್ರ ತಯಾರಾಗುತ್ತಿರುವುದು ವಿಶೇಷ. ನಿರ್ದೇಶಕಿ ಪ್ರಿಯಾ ಅವರಿಗೆ ಕನ್ನಡದಲ್ಲಿ ಇದು ಮೊದಲ ನಿರ್ದೇಶನದ ಚಿತ್ರ. ಮಣಿರತ್ನಂ ಹಾಗು ಸುಹಾಸಿನಿ ಬಳಿ ಕೆಲಸ ಮಾಡಿರುವ ಪ್ರಿಯಾ, ತಮಿಳಿನಲ್ಲಿ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸೌಮ್ಯ ಜಗನ್‌ ಮೂರ್ತಿ, ಜೋ ಸೈಮನ್‌, ಯಶವಂತ್‌ ಶೆಟ್ಟಿ, ಭರತ್‌ ಕಲ್ಯಾಣ್‌ ಸೇರಿದಂತೆ ರಂಗಭೂಮಿ ಕಲಾವಿದರು ನಟಿಸಿದ್ದಾರೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top