CONNECT WITH US  

ವಿಜಯ್‌ ಜೊತೆ ಅದಿತಿ ಕುಸ್ತಿ

ಅಕ್ಟೋಬರ್‌ನಿಂದ ಅಖಾಡಕ್ಕೆ

"ದುನಿಯಾ' ವಿಜಯ್‌ ಮತ್ತು ಅವರ ಪುತ್ರ ಸಾಮ್ರಾಟ್‌ "ಕುಸ್ತಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತು. ಆ ಚಿತ್ರಕ್ಕೆ ರಾಘು ಶಿವಮೊಗ್ಗ ನಿರ್ದೇಶಕರು ಎಂಬುದು ಗೊತ್ತು. ಆದರೆ, ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿರಲಿಲ್ಲ. ಈಗ ನಿರ್ದೇಶಕರು ವಿಜಯ್‌ಗೆ ನಾಯಕಿಯನ್ನು ಅಂತಿಮಗೊಳಿಸಲಾಗಿದೆ.

"ಧೈರ್ಯಂ' ಖ್ಯಾತಿಯ ಅದಿತಿ ಪ್ರಭುದೇವ "ಕುಸ್ತಿ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಎಲ್ಲಾ ತಯಾರಿ ನಡೆದಿದ್ದು, ಮುಂದಿನ ತಿಂಗಳು "ಕುಸ್ತಿ'ಪಟುವನ್ನು ಸೇರಿಕೊಳ್ಳಲಿದ್ದಾರೆ ಅದಿತಿ ಪ್ರಭುದೇವ. ಅದಿತಿ ಸದ್ಯಕ್ಕೆ ಸುನಿ ನಿರ್ದೇಶನದ "ಬಜಾರ್‌' ಮತ್ತು ಮಧುಸೂದನ್‌ ನಿದೇಶನದ "ಆಪರೇಷನ್‌ ನಕ್ಷತ್ರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ "ಬಜಾರ್‌' ಬಿಡುಗಡೆಗೆ ರೆಡಿಯಾಗಿದೆ.

ಇನ್ನು, "ಕುಸ್ತಿ' ಚಿತ್ರಕ್ಕಾಗಿ ವಿಜಯ್‌ ಮತ್ತು ಅವರ ಪುತ್ರ ಸಾಮ್ರಾಟ್‌ ಇಬ್ಬರೂ ನಾಲ್ಕೈದು ಗಂಟೆಗಳ ಕಾಲ ಕಸರತ್ತು ನಡೆಸಿ, ಪಾತ್ರಕ್ಕೆ ಪಕ್ಕಾ ಆಗಿದ್ದಾರೆ. ವಿಜಯ್‌, ದೇಹವನ್ನು ಹುರಿಗೊಳಿಸುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಕಟ್ಟುಮಸ್ತಾದ ದೇಹಕ್ಕಾಗಿ ಹಗಲಿರುಳು ಶ್ರಮಿಸಿರುವುದೂ ಉಂಟು. ಅವರಂತೆ ಅವರ ಪುತ್ರ ಸಾಮ್ರಾಟ್‌ ಕೂಡ ಸಿಕ್ಕಾಪಟ್ಟೆ ವರ್ಕೌಟ್‌ ಮಾಡಿರುವುದು ವಿಶೇಷ.

ವಿಜಯ್‌ ದಿನವೊಂದಕ್ಕೆ ಐದು ತಾಸು ವರ್ಕೌಟ್‌ ಮಾಡಿದರೆ, ಸಾಮ್ರಾಟ್‌ ಕೂಡ ಅಪ್ಪನಿಗಿಂತ ನಾನೇನು ಕಮ್ಮಿ ಎಂಬಂತೆ ದಿನಕ್ಕೆ ನಾಲ್ಕು ತಾಸು ವರ್ಕೌಟ್‌ ಮಾಡುವ ಮೂಲಕ "ಕುಸ್ತಿ' ಅಖಾಡಕ್ಕಿಳಿದಿದ್ದಾರೆ. ಈ ಚಿತ್ರದಲ್ಲಿ ರಿಯಲ್‌ "ಕುಸ್ತಿ' ಇರಲಿದ್ದು, ಅದಕ್ಕೆ ಪಕ್ಕಾ ಕುಸ್ತಿಪಟುವಿನಂತೆಯೇ ಅಣಿಯಾಗುವ ಅವಶ್ಯಕತೆ ಇದೆ. ಹಾಗಾಗಿ, ಸಾಮ್ರಾಟ್‌ಗೆ ಈಗಾಗಲೇ ರಾಷ್ಟ್ರ ಹಾಗು ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ತರಬೇತಿ ಕೊಟ್ಟಿದ್ದಾರಂತೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top