CONNECT WITH US  

ರಷ್ಯಾದಲ್ಲಿ ಶರಣ್ "ವಿಕ್ಟರಿ': Watch

ಸ್ಯಾಂಡಲ್‍ವುಡ್ ಅಧ್ಯಕ್ಷ ಶರಣ್ ಅಭಿನಯದ "ವಿಕ್ಟರಿ 2' ಚಿತ್ರದ ಟೀಸರ್ ಮತ್ತು ಫೋಟೋಗಳು ಈಗಾಗಲೇ ರಿವೀಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರದ "ಪ್ಲೀಸು ಟ್ರಸ್ಟು .. ನಾನು ಚೀಪ್‌ ಅಂಡ್‌ ಬೆಸ್ಟು ...' ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ.

"ಬ್ರಹ್ಮ ನಿಂಗೆ ಲಂಚ ಕೊಟ್ಟು ಬುಕ್ ಮಾಡಿಸಿದ್ದೀನಿ ಕಮ್,. ಏಳೇಳು ಜನ್ಮ ನೀನೇ ನನ್ನ ವೈಫು ಅಂತಾ ಬರೆಸಿದ್ದೀನಿ' ಎಂಬ ಸಾಲುಗಳ ಮೂಲಕ ಸಾಗುವ ಹಾಡು ಕೇಳಲು ತುಂಬಾ ಕ್ಯಾಚಿಯಾಗಿದೆ. ಹಾಡಿನ ಚಿತ್ರೀಕರಣ ರಷ್ಯಾದಲ್ಲಿ ನಡೆದಿದ್ದು, ಶರಣ್ ಮತ್ತು ಆಸ್ಮಿತಾ ಕಲರ್ ಫುಲ್ ಡ್ರೆಸ್‍ನಲ್ಲಿ ಮಿಂಚಿದ್ದಾರೆ.

ಹಾಡಿನ ಮತ್ತೊಂದು ವಿಶೇಷ ಅಂದ್ರೆ ಸಹ ಡ್ಯಾನ್ಸರ್ ಹುಲಿ ಕುಣಿತ, ಯಕ್ಷಗಾನ ಮತ್ತು ಪೌರಾಣಿಕ ಉಡುಪಿನಲ್ಲಿ ಕಾಣುವ ಮೂಲಕ ಹಾಡನ್ನು ಮತ್ತಷ್ಟು ಸುಂದರವಾಗಿಸಿದೆ. ಪಕ್ಕಾ ಹಳ್ಳಿ ಭಾಷೆಯ ಇಂಗ್ಲಿಷ್ ಮಿಶ್ರಿತವಾಗಿ ರಚಿಸಿರುವ ಹಾಡು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿ ಬಂದಿದೆ. ಚಿತ್ರಕ್ಕೆ ತರುಣ್ ಸುಧೀರ್ ಕಥೆ ಬರೆದಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಡಿಗಿದೆ. 

ತರುಣ್‌ ಶಿವಪ್ಪ ಚಿತ್ರವನ್ನು ನಿರ್ಮಿಸುತ್ತಿದ್ದು, ನಾಯಕಿಯರಾಗಿ ಅಸ್ಮಿತಾ ಸೂದ್‌ ಹಾಗೂ ಅಪೂರ್ವ ನಟಿಸಿದ್ದಾರೆ. ಬಹುತೇಕ "ವಿಕ್ಟರಿ' ತಂಡವೇ ಇಲ್ಲೂ ಕೆಲಸ ಮಾಡಿದೆ. ಹರಿ ಸಂತೋಷ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಬಳಗವಿದೆ.


Trending videos

Back to Top