“ಇರುವುದೆಲ್ಲ ಬಿಟ್ಟು’ ಮೇಘನಾ ಕಾಯ್ತಿರೋ ಸಿನಿಮಾವಿದು

Team Udayavani, Sep 18, 2018, 11:29 AM IST

meghana-raj.jpg

ಮೇಘನಾ ರಾಜ್‌ ಸಿಕ್ಕಾಪಟ್ಟೆ ಎಕ್ಸೈಟ್‌ ಆಗಿದ್ದಾರೆ. ಅದು ಯಾವ ಮಟ್ಟಿಗೆಂದರೆ ಬಂದ ಅವಕಾಶಗಳನ್ನೆಲ್ಲಾ ಸೈಡಿಗಿಟ್ಟು ಸಿನಿಮಾವೊಂದರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅಷ್ಟಕ್ಕೂ ಮೇಘನಾ ಅಷ್ಟೊಂದು ಇಷ್ಟಪಟ್ಟಿರುವ ಸಿನಿಮಾ ಯಾವುದೆಂದರೆ “ಇರುವುದೆಲ್ಲವ ಬಿಟ್ಟು’. ಹೌದು, “ಇರುವುದೆಲ್ಲವ ಬಿಟ್ಟು’ ಸಿನಿಮಾ ಬಗ್ಗೆ ಮೇಘನಾ ರಾಜ್‌ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಪಾತ್ರ.

ಇತ್ತೀಚಿನ ದಿನಗಳಲ್ಲಿ ಮೇಘನಾಗೆ ಸಿಕ್ಕ ವಿಭಿನ್ನ ಪಾತ್ರಗಳಲ್ಲಿ “ಇರುವುದೆಲ್ಲವ ಬಿಟ್ಟು’ ಚಿತ್ರ ಒಂದಂತೆ. “ಎರಡ್ಮೂರು ಹೊಸ ಸಿನಿಮಾಗಳ ಕಥೆ ಕೇಳಿ ಓಕೆ ಮಾಡಿದ್ದೇನೆ. ಆದರೆ, “ಇರುವುದೆಲ್ಲವ ಬಿಟ್ಟು’ ಬಿಡುಗಡೆಯಾದ ಮೇಲೆ ಚಿತ್ರೀಕರಣಕ್ಕೆ ಹೋಗೋದೆಂದು ನಿರ್ಧರಿಸಿದ್ದೇನೆ. ಏಕೆಂದರೆ, ನಾನು ತುಂಬಾ ನಿರೀಕ್ಷೆ ಇಟ್ಟಿರುವ ಸಿನಿಮಾವಿದು. ನನ್ನದೇ ನಿರ್ಮಾಣ, ನಿರ್ದೇಶನದ ಸಿನಿಮಾವಾದರೆ ಎಷ್ಟು ಪ್ರೀತಿ, ಎಕ್ಸೈಟ್‌ಮೆಂಟ್‌ ಇರಬಹುದೋ, ಅದೇ ತರಹದ ಪ್ರೀತಿ ಈ ಸಿನಿಮಾ ಮೇಲೆ ಇದೆ.

ಅದಕ್ಕೆ ಕಾರಣ ಚಿತ್ರದ ಪಾತ್ರ. ಇಲ್ಲಿ ನಾನು ಪೂರ್ವಿ ಎನ್ನುವ ಪಾತ್ರ ಮಾಡಿದ್ದೇನೆ. ಸಂಬಂಧಗಳಿಗಿಂತ ಸಾಧನೆ ಮುಖ್ಯ ಎಂದುಕೊಂಡಿರುವ ಪಾತ್ರ. ಸಾಧನೆ ಮಾಡುತ್ತಾ ಹೋದಂತೆ ಸಂಬಂಧಗಳನ್ನು ಕಳೆದುಕೊಳ್ಳುವ ಹಾಗೂ ಆ ನಂತರದ ಘಟನೆಗಳ ಸುತ್ತ ನನ್ನ ಪಾತ್ರ ಸಾಗುತ್ತದೆ. 25 ರಿಂದ 35 ವಯಸ್ಸಿನ ಮಹಿಳೆಯರಿಗೆ ಈ ಪಾತ್ರ ಹೆಚ್ಚು ಹತ್ತಿರವಾಗುತ್ತದೆ’ ಎಂದು ಚಿತ್ರದ ಬಗ್ಗೆ ಖುಷಿಯಿಂದ ಹೇಳುತ್ತಾರೆ ಮೇಘನಾರಾಜ್‌. 

ಇತ್ತೀಚೆಗೆ ಚಿತ್ರತಂಡ “ಇರುವುದೆಲ್ಲವ ಬಿಟ್ಟು’ ಎಂಬ ಸ್ಪರ್ಧೆಯೊಂದನ್ನು ಆಯೋಜಿಸಿತ್ತಂತೆ. ಒಂದಷ್ಟು ಮಂದಿಯಲ್ಲಿ, “ನೀವು ನಿಮ್ಮ ನಾಳಿನ ಎಲ್ಲಾ ಕಾರ್ಯಗಳನ್ನು ಬಿಟ್ಟು ಕುಟುಂಬ ಸಮೇತ ಸಿನಿಮಾ ನೋಡಲು ಬರಬೇಕೆಂಬುದು’ ಆ ಸ್ಪರ್ಧೆ. ಅದರಂತೆ ಒಂದಷ್ಟು ಮಂದಿ ಭಾನುವಾರದ ತಮ್ಮ ಕಾರ್ಯಗಳನ್ನೆಲ್ಲಾ ಬದಿಗೊತ್ತಿ ಕುಟುಂಬ ಸಮೇತರಾಗಿ “ಇರುವುದೆಲ್ಲವ ಬಿಟ್ಟು’ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗಿಯಾದರಂತೆ.

ಸಿನಿಮಾ ನೋಡಿದ ಪ್ರತಿಯೊಬ್ಬರಿಂದಲೂ, “ಈ ಸಿನಿಮಾ ನಮ್ಮ ಜೀವನಕ್ಕೆ ತುಂಬಾ ಹತ್ತಿರವಾಗಿದೆ’ ಎಂಬ ಮಾತುಗಳು ಕೇಳಿಬಂದುವಂತೆ. ಇದು ಕೂಡಾ ಮೇಘನಾ ರಾಜ್‌ಗೆ “ಇರುವುದೆಲ್ಲವ ಬಿಟ್ಟು’ ಸಿನಿಮಾ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ಚಿತ್ರದಲ್ಲಿ ಗ್ಲಾಮರ್‌ಗಿಂತ ಹೆಚ್ಚಾಗಿ ಜೀವನಕ್ಕೆ ಸಂಬಂಧಪಟ್ಟ ಅಂಶಗಳ ಸುತ್ತ ಈ ಸಿನಿಮಾ ಸಾಗಲಿದೆ ಎನ್ನುವುದು ಮೇಘನಾ ರಾಜ್‌ ಮಾತು. 

ಎಲ್ಲಾ ಓಕೆ, ಮದುವೆಯಾದ ಮೇಲೆ ಕಥೆಯ ಆಯ್ಕೆಯಲ್ಲಿ ಚಿರು ಪಾತ್ರವಿದೆಯಾ ಎಂದರೆ, ಇಲ್ಲ ಎನ್ನುತ್ತಾರೆ ಮೇಘನಾ. “ಕಥೆಯ ಆಯ್ಕೆ ನನ್ನದೇ. ಅವರು, “ಪಾತ್ರ ನಿನಗೆ ಹೊಂದಿಕೆಯಾದರೆ ಮಾಡು’ ಎನ್ನುತ್ತಾರೆ. ಅದು ಬಿಟ್ಟರೆ ಸಿನಿಮಾ ಬಗೆಗಿನ ಸಹಜ ಚರ್ಚೆಗಳು ನಡೆಯುತ್ತವೆಯೇ ಹೊರತು ಉಳಿದಂತೆ ನನ್ನ ಸಿನಿಮಾ ಆಯ್ಕೆಯಲ್ಲಿ ನಾನು ಸ್ವತಂತ್ರಳು’ ಎನ್ನುತ್ತಾರೆ ಮೇಘನಾ ರಾಜ್‌. 

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.