ಫೈಟರ್ಗೆ ಲೇಖಾಚಂದ್ರ ನಾಯಕಿ
Team Udayavani, Sep 21, 2018, 9:25 AM IST
ವಿನೋದ್ಪ್ರಭಾಕರ್ ನಾಯಕರಾಗಿರುವ “ಫೈಟರ್’ ಚಿತ್ರ ಆರಂಭವಾಗಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಈಗಾಗಲೇ ಸದ್ದಿಲ್ಲದೇ ಚಿತ್ರೀಕರಣ ಕೂಡಾ ಆರಂಭವಾಗಿದೆ. ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿರಲಿಲ್ಲ. ಸಾಕಷ್ಟು ಮಂದಿಯನ್ನು ಚಿತ್ರತಂಡ ಆಡಿಷನ್ ಮಾಡಿ ಈಗ ಅಂತಿಮವಾಗಿ ಲೇಖಾಚಂದ್ರ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದೆ. ಈ ಮೂಲಕ ಲೇಖಾಚಂದ್ರಗೆ ಕನ್ನಡದಲ್ಲಿ ಮತ್ತೂಂದು ಸಿನಿಮಾ ಸಿಕ್ಕಂತಾಗಿದೆ. ಯಾವ ಲೇಖಾ ಚಂದ್ರ ಎಂದು ನೀವು ಕೇಳಿದರೆ “ನಾನು ಹೇಮಂತ್ ಅವಳು ಸೇವಂತಿ’ ಚಿತ್ರದ ಮೂಲಕ ನಾಯಕಿಯಾದ ಹುಡುಗಿ. ಆ ನಂತರ ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರೂ ಲೇಖಾಗೆ ಹೇಳಿಕೊಳ್ಳುವಂತಹ ಬ್ರೇಕ್ ಯಾವ ಸಿನಿಮಾದಿಂದಲೂ ಸಿಕ್ಕಿಲ್ಲ. ಈಗ “ಫೈಟರ್’ನಲ್ಲಿ ಅವಕಾಶ ಸಿಕ್ಕಿದ್ದು, ಸಹಜವಾಗಿಯೇ ಲೇಖಾ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಕೂಡಾ ಆರಂಭವಾಗಿದೆ.
ಈ ಚಿತ್ರವನ್ನು ನೂತನ್ ಉಮೇಶ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಉಮೇಶ್, ನಿರ್ದೇಶಕ ನೂತನ್ ಉಮೇಶ್, “ಇದೊಂದು ಮಾಸ್ ಫೀಲ್ ಇರುವ ಚಿತ್ರ. “ರೆಗ್ಯುಲರ್ ಆ್ಯಕ್ಷನ್ ಚಿತ್ರಗಳಿಗಿಂತ ಕೊಂಚ ವಿಭಿನ್ನವಾದಂತಹ ಸ್ಟಂಟ್ಸ್ ಈ ಚಿತ್ರದಲ್ಲಿರಲಿವೆ. ವಿನೋದ್ ಪ್ರಭಾಕರ್ ಅವರ ಆ್ಯಕ್ಷನ್ ನೋಡಿದವರಿಗೆ, ಈ ಚಿತ್ರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಿಸ್ಕೀ ಸ್ಟಂಟ್ಸ್ ಇರುವಂತಹ ದೃಶ್ಯಗಳನ್ನು ನೋಡಬಹುದು. ಆ ಮಟ್ಟಕ್ಕೆ ಆ್ಯಕ್ಷನ್ ಸಿನಿಮಾ ಆಗಿ ಮೂಡಿಬರಲಿದೆ. ಇನ್ನು, ಇಲ್ಲಿ ಸಿನಿಮಾದ ನೋಟ ಕೂಡ ಹೊಸದಾಗಿರಲಿದೆ. ಜಬರ್ದಸ್ತ್ ಆ್ಯಕ್ಷನ್ನೊಂದಿಗೆ ಪ್ರೀತಿ, ಸೆಂಟಿಮೆಂಟ್ ಕೂಡಾ ಇರುತ್ತದೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ. ಚಿತ್ರವನ್ನು ಆಕಾಶ್ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ಕಟಿಗೇನಹಳ್ಳಿ ಸೋಮಶೇಖರ್ ನಿರ್ಮಾಣ ಮಾಡತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SS Rajamouli: ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್ನಲ್ಲಿ ಸುಳಿವು ಕೊಟ್ಟ ರಾಜಮೌಳಿ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!