ಐ ಲವ್ ಯೂ ಕನ್ನಡದ ಗೀತಾಂಜಲಿಯಾಗುತ್ತದೆ
Team Udayavani, Sep 24, 2018, 11:37 AM IST
ಆರ್.ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್ ಯೂ’ ಚಿತ್ರದ ಮೋಶನ್ ಪೋಸ್ಟರ್ ಉಪೇಂದ್ರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಅಂದು ಬಿಡುಗಡೆಯಾಗಿರಲಿಲ್ಲ.
ಈಗ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ಉಪೇಂದ್ರ ಅವರ “ಎ’ ಹಾಗೂ “ಉಪೇಂದ್ರ’ ಶೈಲಿಯ ಹೊಸ ವರ್ಶನ್ನಂತೆ ಮೂಡಿಬಂದಿರುವ “ಐ ಲವ್ ಯೂ’ ಚಿತ್ರ ಹಾಗೂ ಮೋಶನ್ ಪೋಸ್ಟರ್ ಬಗ್ಗೆ ಸ್ವತಃ ನಾಯಕ ಉಪೇಂದ್ರ ಎಕ್ಸೆ„ಟ್ ಆಗಿದ್ದಾರೆ.
ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲ್ಲುವ ವಿಶ್ವಾಸ ಕೂಡಾ ಉಪೇಂದ್ರ ಅವರಿಗಿದೆ. ಆ ವಿಶ್ವಾಸದಿಂದಲೇ ಉಪೇಂದ್ರ ಅವರು “ಐ ಲವ್ ಯೂ’ ಕನ್ನಡದ “ಗೀತಾಂಜಲಿ’ಯಾಗುತ್ತದೆ ಎಂದು ಹೇಳುತ್ತಾರೆ. ಇತ್ತೀಚೆಗೆ ನಡೆದ ಮೋಶನ್ ಪೋಸ್ಟರ್ ಬಿಡುಗಡೆಯಲ್ಲಿ ಮಾತನಾಡಿದ, ಉಪೇಂದ್ರ, “ಇತ್ತೀಚಿನ ದಿನಗಳಲ್ಲಿ ನಾನು ಈ ತರಹದ ಸಿನಿಮಾ ಮಾಡಿರಲಿಲ್ಲ.
ಆದರೆ, ಚಂದ್ರು ತಂದ ಕಥೆ ತುಂಬಾ ಭಿನ್ನವಾಗಿತ್ತು. ತುಂಬಾ ಹೊಸ ಬಗೆಯಿಂದ ಕೂಡಿದ ಕಥೆಯನ್ನು ತಂದ ಕಾರಣ ಒಪ್ಪಿಕೊಂಡೆ. ಇದು ಅವರ ಅನುಭವದ ಕಥೆ. ಅವರ ಫೀಲಿಂಗ್ಸ್ಗೆ ನನ್ನ ತಲೆ ಇಟ್ಟಿದ್ದಾರಷ್ಟೇ. ಇದು ಕನ್ನಡದ “ಗೀತಾಂಜಲಿ’ಯಾಗುತ್ತದೆ ಎಂಬ ವಿಶ್ವಾಸವಿದೆ. ಅಷ್ಟೊಂದು ನೀಟಾಗಿ ಸಿನಿಮಾ ಬಂದಿದೆ. ನನ್ನ ಮೆದುಳು, ಚಂದ್ರು ಹೃದಯ ಹಾಗೂ ಅನುಭವ ಸೇರಿ “ಐ ಲವ್ ಯೂ’ ಆಗಿದೆ.
ಇನ್ನು ಮುಂದೆ ಹೋಗಿ ಹೇಳಬೇಕಾದರೆ ನಮ್ಮಿಬ್ಬರ ಫಿಫ್ಟಿ – ಫಿಫ್ಟಿ ಈ ಸಿನಿಮಾದಲ್ಲಿದೆ’ ಎಂದು “ಐ ಲವ್ ಯೂ’ ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ ಉಪೇಂದ್ರ. ಈಗಾಗಲೇ “ಐ ಲವ್ ಯೂ’ ಚಿತ್ರದ ಐವತ್ತು ದಿನಗಳ ಚಿತ್ರೀಕರಣ ನಡೆದಿದ್ದು, ಇನ್ನು 20 ದಿನಗಳ ಚಿತ್ರೀಕರಣ ಬಾಕಿ ಇದೆ. ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
Bhuvanam gaganam Teaser: ಭುವನಂ ಗಗನಂ ಟೀಸರ್ ಬಂತು
Bharjari Gandu: ಟ್ರೇಲರ್ನಲ್ಲಿ ಭರ್ಜರಿ ಗಂಡು
Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್ನಲ್ಲಿ ಶೂಟಿಂಗ್!
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್