ಅಕ್ಟೋಬರ್ 11 ರಿಂದ ವಿಲನ್ ಮುಂಗಡ ಬುಕ್ಕಿಂಗ್
Team Udayavani, Oct 3, 2018, 11:37 AM IST
ಶಿವರಾಜ್ಕುಮಾರ್ ಹಾಗೂ ಸುದೀಪ್ ಅಭಿನಯ “ದಿ ವಿಲನ್’ ಚಿತ್ರದ ರಿಲೀಸ್ ಡೇಟ್ ಪ್ರೇಮ್ ಯಾವಾಗ ಅನೌನ್ಸ್ ಮಾಡುತ್ತಾರೆಂದು ಅಭಿಮಾನಿಗಳು ಕಾಯುತ್ತಿದ್ದರು. ಅಕ್ಟೋಬರ್ 18ರಂದು ಚಿತ್ರ ಬಿಡುಗಡೆಯಾಗುತ್ತದೆ ಎಂದು ಹೇಳುವ ಮೂಲಕ ಪ್ರೇಮ್ ಕುತೂಹಲಕ್ಕೆ ತೆರೆಎಳೆದಿದ್ದರು.
ಈಗ ಚಿತ್ರದ ಮುಂಗಡ ಬುಕ್ಕಿಂಗ್ ಡೇಟ್ ಅನೌನ್ಸ್ ಮಾಡಿದ್ದಾರೆ. ಚಿತ್ರವನ್ನು ಮೊದಲ ದಿನವೇ ಕಣ್ತುಂಬಿಕೊಳ್ಳಬೇಕೆಂದು ಕಣ್ತುಂಬಿಕೊಳ್ಳುವವರಿಗಾಗಿ ಮುಂಗಡ ಬುಕ್ಕಿಂಗ್ ಅವಕಾಶ ಮಾಡಿಕೊಟ್ಟಿದ್ದು, ಅಕ್ಟೋಬರ್ 11 ರಿಂದ ಚಿತ್ರದ ಬುಕ್ಕಿಂಗ್ ಆರಂಭವಾಗಲಿದೆ. ಈ ಮೂಲಕ ಒಂದು ವಾರ ಮುಂಚೆಯೇ ಟಿಕೆಟ್ ಬುಕ್ ಮಾಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿತು.
ನಿರ್ದೇಶಕ ಪ್ರೇಮ್ಗೆ ಇನ್ನೂ ಮುಂಚೆಯೇ ಬುಕ್ಕಿಂಗ್ ಆರಂಭಿಸಬೇಕೆಂಬ ಆಸೆ ಇತ್ತಂತೆ. ಆದರೆ, ಶಿವರಾಜಕುಮಾರ್ ಅವರು, ಒಂದು ವಾರದ ಮುಂಚೆ ಬಿಟ್ಟರೆ ಸಾಕು ಎಂದು ಸಲಹೆ ನೀಡಿದ್ದರಿಂದ ಪ್ರೇಮ್ ಒಪ್ಪಿಕೊಂಡಿದ್ದಾರೆ. ಅಂದಹಾಗೆ, ಇತ್ತೀಚೆಗೆ ಚಿತ್ರದ ರಿಲೀಸ್ ಟೀಸರ್ ಬಿಟ್ಟಿದ್ದು, ಶಿವರಾಜಕುಮಾರ್ ಹಾಗೂ ಸುದೀಪ್ ಅವರ ಡೈಲಾಗ್ ಅಭಿಮಾನಿಗಳಲ್ಲಿ ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸಿದೆ.