CONNECT WITH US  

ಹೊಸಬರ ಪುಣ್ಯ ಮತ್ತು ಭಾಗ್ಯ!

ಭಾಗ್ಯವಂತರ ಹಾಡುಪಾಡು

"ಭಾಗ್ಯವಂತರು...' - ಇದು ಕನ್ನಡ ಚಿತ್ರರಂಗದಲ್ಲಿ ಅದ್ಭುತ ಯಶಸ್ಸು ಕಂಡ ಚಿತ್ರ. ಈಗ "ನಾವೇ ಭಾಗ್ಯವಂತರು' ಎಂಬ ಹೊಸಬರ ಚಿತ್ರ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಈ ಚಿತ್ರಕ್ಕೆ ಎಂ.ಹರಿಕೃಷ್ಣ ನಿರ್ದೇಶಕರು. ಮೂಲತಃ ಛಾಯಾಗ್ರಾಹಕರಾಗಿರುವ ಹರಿಕೃಷ್ಣ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಇನ್ನು, ಎಂ.ಪ್ರಕಾಶ್‌ ಮತ್ತು ಹೆಚ್‌.ಎಸ್‌. ಅಶ್ವಥ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇತ್ತೀಚೆಗೆ ಹಾಡುಗಳನ್ನೂ ಬಿಡುಗಡೆ ಮಾಡಿದೆ.

ಯುವಕರು ಕುಡಿತಕ್ಕೆ ದಾಸರಾಗಿ ಹೆತ್ತವರನ್ನು ಹೇಗೆಲ್ಲಾ ನಿರ್ಲಕ್ಷಿಸುತ್ತಾರೆ. ಅದರಿಂದ ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎಂಬ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಸೂರಜ್‌, ಶ್ರವಂತ್‌ ಮತ್ತು ಲೋಕೇಶ್‌ ನಾಯಕರು. ಅವರಿಗೆ ದಿವ್ಯಾ, ಚಂದನಗೌಡ ಮತ್ತು ಶಿಲ್ಪ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕರು, ರಾಜ್‌ಕುಮಾರ್‌, ವಿಷ್ಣುವರ್ಧನ್‌ ಮತ್ತು ಶಂಕರ್‌ನಾಗ್‌ ಅವರ ಅಭಿಮಾನಿಗಳಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿರುವ ಮೂವರು ನಾಯಕರಿಗೂ ಒಂದೊಂದು ಹಿನ್ನೆಲೆಯ ಕಥೆ ಇದೆ.

ಈ ಮೂವರ ಕಥೆಯಲ್ಲೂ ಕುಡಿತದಿಂದಾಗುವ ದುಷ್ಪರಿಣಾಮ ಮತ್ತು ತಾಯಿ ಸೆಂಟಿಮೆಂಟ್‌ ಅಂಶಗಳಿವೆ. ಮೂವರು ನಾಯಕರು, ಹೇಗೆ ತಮ್ಮ ತಪ್ಪು ತಿದ್ದಿಕೊಂಡು ಬದುಕು ಸವೆಸುತ್ತಾರೆ ಎಂಬುದು ಹೈಲೈಟ್‌ ಅಂತೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ನಿರ್ಮಾಪಕ ಬೆಂಕೋಶ್ರೀ, ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಶುಭಕೋರಿದ್ದಾರೆ.

ಚಿತ್ರದಲ್ಲಿ ಲಕ್ಷ್ಮೀದೇವಮ್ಮ, ಮುಖ್ಯಮಂತ್ರಿ ಚಂದ್ರು, ಸುಂದರರಾಜ್‌, ನಾರಾಯಣಸ್ವಾಮಿ, ರಾಮಕೃಷ್ಣ, ಅಂಜನಪ್ಪ, ಸುಚೇಂದ್ರ ಪ್ರಸಾದ್‌, ಬೇಬಿ ಕಾರುಣ್ಯ, ಮಿಮಿಕ್ರಿ ರಾಜು ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಎಂ.ಪಿ.ಬಸವಣ್ಣ ಅವರ ಸಾಹಿತ್ಯ, ಸಂಗೀತವಿದೆ.


Trending videos

Back to Top