CONNECT WITH US  

ನ.1ಕ್ಕೆ ಪುನೀತ್‌ ಹೊಸ ಚಿತ್ರದ ಟೈಟಲ್‌ ಲಾಂಚ್‌

ಪುನೀತ್‌ ರಾಜಕುಮಾರ್‌ ಹಾಗೂ ನಿರ್ದೇಶಕ ಸಂತೋಷ್‌ ಆನಂದರಾಮ್‌ ಜೊತೆಯಾಗಿ ಮತ್ತೂಂದು ಸಿನಿಮಾ ಮಾಡಲು ಮುಂದಾಗಿರುವ ವಿಚಾರ ನಿಮಗೆ ಗೊತ್ತೇ ಇದೆ. "ರಾಜ್‌ಕುಮಾರ' ಚಿತ್ರದ ಯಶಸ್ಸಿನ ನಂತರ ಅದೇ ತಂಡ ಒಂದಾಗುತ್ತಿದೆ. ಹೊಂಬಾಳೆ ಪ್ರೊಡಕ್ಷನ್ಸ್‌ನಡಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಈಗ ಚಿತ್ರದ ಟೈಟಲ್‌ ಲಾಂಚ್‌ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಅದು ನವೆಂಬರ್‌ 1 ರಂದು. ಕರ್ನಾಟಕ ರಾಜ್ಯೋತ್ಸವದಂದು ಚಿತ್ರದ ಶೀರ್ಷಿಕೆ ಅನಾವರಣ ಮಾಡಲು ಚಿತ್ರತಂಡ ಮುಂದಾಗಿದೆ.

ವಿಶೇಷವೆಂದರೆ ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದೆ. ಈ ಬಗ್ಗೆ ಟ್ವೀಟರ್‌ನಲ್ಲಿ ಚಿತ್ರತಂಡ, "ಕನ್ನಡ ರಾಜ್ಯೋತ್ಸವದಂದು ಕನ್ನಡ ಕುಲಕೋಟಿಗೆ ಅಭಿಮಾನಿಗಳಿಂದ ಅಭಿಮಾನದಿಂದ ಚಿತ್ರದ ಶೀರ್ಷಿಕೆ ಲೋಕಾರ್ಪಣೆ' ಎಂದು ಹೇಳಿದೆ. ಪುನೀತ್‌ರಾಜಕುಮಾರ್‌ ಅವರ 29ನೇ ಸಿನಿಮಾ ಇದಾಗಿದ್ದು, ಸಂತೋಷ್‌ ಆನಂದರಾಮ್‌ ನಿರ್ದೇಶನದ 3ನೇಯ ಹಾಗೂ ಹೊಂಬಾಳೆ ಬ್ಯಾನರ್‌ನ 5ನೇ ಸಿನಿಮಾ ಇದಾಗಿದೆ. ಎಲ್ಲಾ ಓಕೆ ಚಿತ್ರಕ್ಕೆ ಏನು ಟೈಟಲ್‌ ಇಟ್ಟಿರಬಹುದೆಂಬ ಕುತೂಹಲ ಅನೇಕರನ್ನು ಕಾಡುತ್ತಿದೆ. ಈಗಾಗಲೇ "ಪರಶುರಾಮ್‌', "ದೇವತಾ ಮನುಷ್ಯ' ಸೇರಿದಂತೆ ಹಲವು ಶೀರ್ಷಿಕೆಗಳು ಓಡಾಡುತ್ತಿವೆ. ಅಂತಿಮವಾಗಿ ಚಿತ್ರತಂಡ ಯಾವ ಶೀರ್ಷಿಕೆ ಇಡುತ್ತದೆ ಎಂಬ ಕುತೂಹಲಕ್ಕೆ ನವೆಂಬರ್‌ 1 ರವರೆಗೆ ಕಾಯಲೇಬೇಕು.


Trending videos

Back to Top