ಪುನೀತ್ – ಸೂರಿ ಕಾಂಬಿನೇಶನ್ನಲ್ಲಿ ಹೊಸ ಚಿತ್ರ
Team Udayavani, Oct 15, 2018, 11:36 AM IST
ನಿರ್ದೇಶಕ ಸೂರಿ ಹಾಗೂ ಪುನೀತ್ ರಾಜ್ಕುಮಾರ್ ಕಾಂಬಿನೇಶನ್ನಲ್ಲಿ ಸಿನಿಮಾ ಆರಂಭವಾಗಲಿದೆ ಎಂದರೆ ಆ ಚಿತ್ರದ ಬಗ್ಗೆ ಮುಹೂರ್ತ ದಿನದಿಂದಲೇ ಕುತೂಹಲ ಹೆಚ್ಚಿರುತ್ತದೆ. ಅದಕ್ಕೆ ಕಾರಣ ಆ ಜೋಡಿಯ ಹಿಟ್ ಸಿನಿಮಾಗಳು. “ಜಾಕಿ’, “ಅಣ್ಣಾ ಬಾಂಡ್’, “ದೊಡ್ಮನೆ ಹುಡುಗ’ ಚಿತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಈ ಜೋಡಿ ಈಗ ಮತ್ತೂಮ್ಮೆ ಒಟ್ಟಾಗುವ ಸೂಚನೆ ಸಿಕ್ಕಿದೆ.
ಈ ಬಾರಿ “ಜಾಕಿ’ ತರಹದ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವನ್ನು ಕೊಡುವ ಉತ್ಸಾಹದಲ್ಲಿದೆ ಈ ಜೋಡಿ ಎಂಬ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ. ಹೌದು, ಸೂರಿ ಹಾಗೂ ಪುನೀತ್ ರಾಜ್ಕುಮಾರ್ ಕಾಂಬಿನೇಶನ್ನಲ್ಲಿ ಮತ್ತೂಂದು ಸಿನಿಮಾ ಆರಂಭವಾಗುವ ಸಾಧ್ಯತೆ ಇದೆ. ಸದ್ಯ ಪುನೀತ್ರಾಜ್ಕುಮಾರ್ “ನಟ ಸಾರ್ವಭೌಮ’ ಚಿತ್ರದಲ್ಲಿ ಬಿಝಿಯಾದರೆ, ಸೂರಿ “ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ತೊಡಗಿದ್ದಾರೆ.
ಇಬ್ಬರು ಕೂಡಾ ತಮ್ಮ ಚಿತ್ರೀಕರಣವನ್ನು ಮುಗಿಸಿಕೊಂಡು ಹೊಸ ಸಿನಿಮಾಕ್ಕಾಗಿ ಸೇರಲಿದ್ದಾರೆನ್ನಲಾಗಿದೆ. ಅಂದಹಾಗೆ, ಇದು ಪುನೀತ್ರಾಜಕುಮಾರ್ ಅವರ 30ನೇ ಸಿನಿಮಾವಾಗಲಿದೆ. ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ನಿರ್ದೇಶಕ ಸೂರಿ, “ಪುನೀತ್ ಅವರ ಜೊತೆ ಸಿನಿಮಾ ಮಾಡುವ ಆಸೆ ಯಾವತ್ತಿಗೂ ಇದೆ. ಅವರು ನನಗೆ ತುಂಬಾ ಇಷ್ಟದ ನಟ. ಪಾತ್ರಕ್ಕೆ ಹೇಗೆ ಬೇಕೋ ಹಾಗೆ ಅವರು ಹೊಂದಿಕೊಳ್ಳುತ್ತಾರೆ.
ನಿರ್ದೇಶಕ ಏನು ಕನಸು ಕಂಡಿರುತ್ತಾನೋ ಅದನ್ನು ಪುನೀತ್ ಅವರಲ್ಲಿ ತೆಗೆಯಬಹುದು. “ಟಗರು-2′ ಡಿಸ್ಕಶನ್ ಸಮಯದಲ್ಲೇ ಪುನೀತ್ ಅವರಿಗೆ ಸಿನಿಮಾ ಮಾಡುವ ಕುರಿತು ಒಂದು ಸುತ್ತಿನ ಮಾತುಕತೆಯಾಗಿದೆ. “ಜಾಕಿ’ ತರಹದ ಒಂದು ಪಾತ್ರ ನನ್ನ ಕಲ್ಪನೆಯಲ್ಲಿದೆ. ಅದನ್ನಿಟ್ಟುಕೊಂಡು ಮಾಡುವ ಕನಸಿದೆ’ ಎನ್ನುವ ಮೂಲಕ ಮುಂದೆ ಸಿನಿಮಾ ಸಿನಿಮಾ ಮಾಡುವ ಸುಳಿವು ಬಿಟ್ಟುಕೊಡುತ್ತಾರೆ ಸೂರಿ.
ಪಾಪ್ಕಾರ್ನ್ನಲ್ಲಿ ಸೂರಿಗೆ ಮಗು ಸವಾಲು: ಸದ್ಯ ಸೂರಿ “ಪಾಪ್ಕಾರ್ನ್ ಮಂಕಿ ಟೈಗರ್’ನಲ್ಲಿ ಬಿಝಿ. ಕಥೆಯಲ್ಲಿ ಒಂದು ವರ್ಷದೊಳಗಿನ ಮಗು ಕೂಡಾ ಪ್ರಮುಖ ಪಾತ್ರ ವಹಿಸುವುದರಿಂದ ಸೂರಿ ಆ ಮಗುವಿನ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದಾರೆ.
“ಮಗು ಬೆಳೆದು ಬಿಡುತ್ತದೆ ಎಂದು ನಾವು ಮೊದಲು ಮಗುವಿನ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದೇವೆ. ತುಂಬಾ ಸವಾಲಿನ ಕೆಲಸವದು. ಏಕೆಂದರೆ ಆ ಪುಟ್ಟ ಮಗು ಎದುರು ಸ್ಕ್ರಿಪ್ಟ್ ವರ್ಕ್ ಆಗೋದಿಲ್ಲ. ಅದು ನಗುವಾಗ, ಅಳುವಾಗ ನಾವು ಚಿತ್ರೀಕರಣ ಮಾಡಬೇಕು’ ಎಂದು ಅನುಭವ ಬಿಚ್ಚಿಡುತ್ತಾರೆ ಸೂರಿ.
ಪುನೀತ್- ಸಂತೋಷ್ ಚಿತ್ರ ಜ್ವಾಲಾಮುಖಿ?: ಪುನೀತ್ರಾಜಕುಮಾರ್ ಹಾಗೂ ಸಂತೋಷ್ ಆನಂದರಾಮ್ ಕಾಂಬಿನೇಶನ್ನಲ್ಲಿ ಬರುತ್ತಿರುವ ಹೊಸ ಚಿತ್ರದ ಶೀರ್ಷಿಕೆ ನವೆಂಬರ್ 1 ರಂದು ಬಿಡುಗಡೆಯಾಗಲಿದೆ. ಈ ನಡುವೆಯೇ ಆ ಸಿನಿಮಾ ಕುರಿತು ಮತ್ತೂಂದು ಹೊಸ ಟೈಟಲ್ ಕೇಳಿಬರುತ್ತಿದೆ. ಅದು “ಜ್ವಾಲಾಮುಖಿ’.
ಪುನೀತ್ ಅವರ 29ನೇ ಚಿತ್ರಕ್ಕೆ “ಜ್ವಾಲಾಮುಖಿ’ ಎಂದು ಟೈಟಲ್ ಇಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ “ಪರಶುರಾಮ್’, “ದೇವತಾ ಮನುಷ್ಯ’ ಹೆಸರುಗಳು ಕೇಳಿಬಂದುವು. ಈಗ “ಜ್ವಾಲಾಮುಖಿ’. ಡಾ.ರಾಜ್ಕುಮಾರ್ ಅವರು 1985ರಲ್ಲಿ ನಟಿಸಿದ ಸಿನಿಮಾವಿದು. ಈಗ ಆ ಟೈಟಲ್ನಡಿ ಪುನೀತ್ ನಟಿಸುತ್ತಾರೆನ್ನಲಾಗಿದೆ. ಎಲ್ಲದಕ್ಕೂ ನ.1 ರಂದು ಸ್ಪಷ್ಟತೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ