ಶರಣ್ಗೆ ಧ್ರುವ ಸಾಥ್
Team Udayavani, Oct 22, 2018, 4:45 PM IST
ಸ್ಯಾಂಡಲ್ವುಡ್ನಲ್ಲಿ ಬೊಂಬಾಟ್ ಯಶಸ್ಸು ಕಂಡಿದ್ದ ಶರಣ್ ಅಭಿನಯದ “ವಿಕ್ಟರಿ’ ಚಿತ್ರದ ಸೀಕ್ವೆಲ್ ಆಗಿ “ವಿಕ್ಟರಿ 2′ ತೆರೆಗೆ ಬರಲು ಸಿದ್ಧವಾಗಿದೆ. “ವಿಕ್ಟರಿ’ ಚಿತ್ರಕ್ಕೆ ನವರಸ ನಾಯಕ ಜಗ್ಗೇಶ್ ಹಿನ್ನೆಲೆ ಧ್ವನಿ ನೀಡಿದ್ದರೆ, ಅದರ ಮುಂದುವರೆದ ಭಾಗ “ವಿಕ್ಟರಿ 2′ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಿನ್ನೆಲೆ ಧ್ವನಿ ನೀಡಿದ್ದಾರೆ.
ಹೌದು! ಬ್ಯಾರಿಟೋನ್ ಕಂಠದ ಮೂಲಕ ಯೂತ್ ಐಕಾನ್ ಆಗಿರುವ ಧ್ರುವ ಸರ್ಜಾ “ವಿಕ್ಟರಿ 2′ ಚಿತ್ರಕ್ಕೆ ಹಿನ್ನೆಲೆ ಧ್ವನಿಯನ್ನು ನೀಡಿದ್ದು, ಚಿತ್ರದ ಪ್ರಮುಖ ಸನ್ನಿವೇಶಗಳು, ಪಾತ್ರಗಳ ಪರಿಚಯ, ದೃಶ್ಯಗಳ ಹಿನ್ನೆಲೆಯನ್ನು ವಿವರಿಸಲಿದ್ದಾರೆ. ಶರಣ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವು ಪಕ್ಕಾ ಕಾಮಿಡಿ ಎಂಟರ್ಟ್ರೈನರ್ ಆಗಿದ್ದು, ಡಬಲ್ ಮಿನಿಂಗ್ ಡೈಲಾಗ್ ಅಬ್ಬರ ಜೋರಾಗಿದೆ.
ಶರಣ್ ಜತೆ ಸಾಧು ಕೋಕಿಲಾ ಹಾಗೂ ರವಿಶಂಕರ್ ವಿಶೇಷ ಗೆಟಪ್ನಲ್ಲಿ ಮಿಂಚಿರುವುದು ಮತ್ತಷ್ಟು ಹಾಸ್ಯಭರಿತವನ್ನಾಗಿಸಿದೆ. ಇನ್ನು ಶರಣ್ ಎದುರಿಗೆ ನಾಯಕಿಯರಾಗಿ ಬಿ-ಟೌನ್ ಬೆಡಗಿ ಅಸ್ಮಿತಾ ಸೂದ್ ಹಾಗೂ ಅಪೂರ್ವ ನಟಿಸಿದ್ದಾರೆ. ಚಿತ್ರವನ್ನು ತರುಣ್ ಶಿವಪ್ಪ ನಿರ್ಮಿಸುತ್ತಿದ್ದು, ತರುಣ್ ಸುಧೀರ್ ಅವರ ಕಥೆ ಇದೆ. ಬಹುತೇಕ “ವಿಕ್ಟರಿ’ ತಂಡವೇ ಇಲ್ಲೂ ಕೆಲಸ ಮಾಡಿದೆ.
ಹರಿ ಸಂತೋಷ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಬಳಗವಿದೆ. ನವೆಂಬರ್ 1 ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಹಿಂದೆ ಧ್ರುವ ಸರ್ಜಾ ದರ್ಶನ್ ಅಭಿನಯದ “ಯಜಮಾನ’ ಮತ್ತು “ಅಮ್ಮ ಐ ಲವ್ ಯೂ’ ಚಿತ್ರಕ್ಕೆ ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ