ಅಪ್ಪು ಈಗ “ಯುವರತ್ನ’: Watch
Team Udayavani, Nov 2, 2018, 3:41 PM IST
ಪವರ್ ಸ್ಟಾರ್ ಪುನೀತ್ರಾಜಕುಮಾರ್ ಅವರ 29ನೇ ಚಿತ್ರದ ಟೈಟಲ್ ಏನು ಎಂದು ಅಪ್ಪು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಇದೀಗ ಚಿತ್ರದ ಟೈಟಲ್ ಲಾಂಚ್ ಆಗಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಪವರ್ ಸ್ಟಾರ್ ಪುನೀತ್ರಾಜಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಹೊಸ ಚಿತ್ರದ ಟೈಟಲ್ ಗುರುವಾರ ಅನೌನ್ಸ್ ಆಗಿದ್ದು, ಸಿನಿಮಾದ ಫಸ್ಟ್ಲುಕ್ ಕೂಡ ರಿಲೀಸ್ ಆಗಿದೆ. ಹೌದು! ಅಪ್ಪು ಅಭಿಮಾನಿಗಳೇ ಪುನೀತ್ ಅವರ 29ನೇ ಸಿನಿಮಾದ ಟೈಟಲನ್ನು ಲಾಂಚ್ ಮಾಡಿದ್ದು “ಯುವರತ್ನ’ ಎಂದು ಹೆಸರಿಡಲಾಗಿದೆ.
ಹೊಂಬಾಳೆ ಪ್ರೊಡಕ್ಷನ್ಸ್ ಅಡಿ ನಿರ್ದೇಶಕ ಸಂತೋಷ್ ಆನಂದ್ರಾಮ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಇನ್ನು “ಯುವರತ್ನ’ ಸಿನಿಮಾವನ್ನು ಪಿಆರ್ಕೆ ಬ್ಯಾನರ್ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿದ್ದು, “ಅಪ್ಪು’ ಸಿನಿಮಾ ನಂತರ ಪುನೀತ್ರಾಜಕುಮಾರ್ 16 ವರ್ಷದ ಕಾಲೇಜ್ ವಿದ್ಯಾರ್ಥಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಲ್ಲದೇ ಚಿತ್ರದ ಶೂಟಿಂಗ್ ಯಾವಾಗ ಶುರುವಾಗಲಿದೆ ಅನ್ನೋದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಪವನ್ ಒಡೆಯರ್ ನಿರ್ದೇಶನದ “ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್ರಾಜಕುಮಾರ್ ನಟಿಸುತ್ತಿದ್ದು, ಬಹುತೇಕ ಸಿನಿಮಾ ಚಿತ್ರೀಕರಣ ಮುಗಿದಿದೆ. ಈ ಸಿನಿಮಾದ ನಂತರ ಸಂತೋಷ್ ಆನಂದ್ ರಾಮ್ ಸಿನಿಮಾ ಆರಂಭವಾಗಲಿದೆ.