CONNECT WITH US  

ವೈರಲ್ ಆಯ್ತು ಮಾಲಾಶ್ರೀ - ಪುನೀತ್ ಜೋಡಿ

ಕನಸಿನ ಕನ್ಯೆ ಮಾಲಾಶ್ರೀ ಡಾ.ರಾಜಕುಮಾರ್ ಅವರ ಹೋಮ್​​​​ ಬ್ಯಾನರ್​​ನಲ್ಲಿ ರಾಘವೇಂದ್ರ ರಾಜಕುಮಾರ್​​​ ಜೊತೆಗೆ "ನಂಜುಂಡಿ ಕಲ್ಯಾಣ' ಚಿತ್ರದಿಂದ ಚಂದನವನಕ್ಕೆ ಎಂಟ್ರಿಕೊಟ್ಟು, ರಾಘಣ್ಣನೊಟ್ಟಿಗೆ ತೆರೆ ಹಂಚಿಕೊಂಡಿದ್ದ ಮಾಲಾಶ್ರೀ ನೋಡ ನೋಡುತ್ತಲೆ ಸ್ಯಾಂಡಲ್​​ವುಡ್​​ನಲ್ಲಿ ಭದ್ರ ಸ್ಥಾನ ಪಡೆದುಕೊಂಡರು.

ಹೀಗಿರುವಾಗಲೇ ಮಾಲಾಶ್ರೀ ತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹೌದು! ಮಾಲಾಶ್ರೀ ಅವರು ತಮ್ಮ ಟ್ವೀಟರ್ ಅಕೌಂಟ್‍ನಲ್ಲಿ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ಯಾವ ಫೋಟೋ ಅಂದ್ರೆ ಪವರ್​ಸ್ಟಾರ್​​ ಪುನೀತ್​​ರಾಜಕುಮಾರ್​​ ಯೌವ್ವನದಲ್ಲಿದ್ದಾಗ ಮಾಲಾಶ್ರೀಯೊಟ್ಟಿಗೆ ಇರುವ ಫೋಟೋವೊಂದನ್ನು ಹರಿಬಿಟ್ಟಿದ್ದಾರೆ.

ಅಲ್ಲದೇ ಫೋಟೋದಲ್ಲಿ ಮಾಲಾಶ್ರೀ ಮುದ್ದು ಕಂದನನ್ನು ತೊಡೆ ಮೇಲೆ ಕೂರಿಸಿಕೊಂಡಿದ್ದರೆ, ಅವರ ಪಕ್ಕದಲ್ಲಿ ಪವರ್ ಸ್ಟಾರ್ ಕುಳಿತಿದ್ದಾರೆ. ಇದೀಗ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪುನೀತ್ ಹಾಗೂ ಮಾಲಾಶ್ರೀ ಅಭಿಮಾನಿಗಳು ಇವರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವಂತಹ ತರಹೇವಾರಿ ಕಮೆಂಟ್‍ಗಳು ವ್ಯಕ್ತವಾಗಿವೆ.

Trending videos

Back to Top