CONNECT WITH US  

"8 ಎಂಎಂ' ಪ್ರಚಾರಕ್ಕೆ ಬಿಗ್​​ಬಾಸ್​​ ಮನೆ ಕದ ತಟ್ಟಿದ ಜಗ್ಗೇಶ್

ಜಗ್ಗೇಶ್​ ಅಭಿನಯದ "8 ಎಂಎಂ' ಚಿತ್ರ ಇದೇ ನವೆಂಬರ್​​ 16ರಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಸಿನಿಮಾ ಪ್ರಚಾರಕ್ಕಾಗಿ ನವರಸ ನಾಯಕ ಜಗ್ಗೇಶ್ ಕನ್ನಡದ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​​ಬಾಸ್​​ ಮನೆಗೆ ಕಾಲಿಟ್ಟಿದ್ದಾರೆ.

ಅಲ್ಲದೇ ಇದೇ ವೇಳೆಯಲ್ಲಿ ಜಗ್ಗೇಶ್​​, ಕಿಚ್ಚ ಸುದೀಪ್​​ ಅವರನ್ನು ತಬ್ಬಿಕೊಂಡಿರುವ ಫೋಟೋವೊಂದನ್ನು ತಮ್ಮ ಟ್ವೀಟರ್​​ನಲ್ಲಿ ಪೋಸ್ಟ್​​ ಮಾಡಿದ್ದಾರೆ. ಹೌದು! ಕಿಚ್ಚ ಸುದೀಪ್ ಹಾಗೂ ನವರಸ ನಾಯಕ ಜಗ್ಗೇಶ್​​​​ ಮೊದಲಿಂದಲೂ ತುಂಬಾ ಆತ್ಮೀಯತೆ ಇಂದ ಇದ್ದವರು.

ಹಾಗಾಗಿ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ "ಕನ್ನಡ ಚಿತ್ರರಂಗ ಶ್ರೀಮಂತಗೊಳಿಸುತ್ತಿರುವ ನಲ್ಮೆಯ ಸಹೋದರನ ಅಪ್ಪುಗೆಯಲ್ಲಿ..ಪರಭಾಷಿಕರನ್ನ ಕನ್ನಡ ಚಿತ್ರಕ್ಕೆ ಕರೆಸಿದ ಗಾರುಡಿಗ..#8mm ಚಿತ್ರದ ಪ್ರಚಾರಕ್ಕೆ #bigboss ಮನೆಗೆ ಹೋದಾಗ.. Love you..God bless.. @KicchaSudeep' ಅಂತ ಬರೆದುಕೊಂಡಿದ್ದಾರೆ.

ಅಂದಹಾಗೆ "ನೀರ್‌ ದೋಸೆ' ನಂತರ ನವರಸ ನಾಯಕ ಜಗ್ಗೇಶ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ "8 ಎಂಎಂ' ಚಿತ್ರ ತಮಿಳಿನ 8 ತೊಟಕಲ್ ಚಿತ್ರದ ಕನ್ನಡ ಅವತರಣಿಕೆ. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಹರಿಕೃಷ್ಣ ಚಿತ್ರವನ್ನು ನಿರ್ದೇಶಿಸಿದ್ದಾರೆ.

ನಾರಾಯಣ ಸ್ವಾಮಿ ಇನ್ಪೆಂಟ್ ಪ್ರದೀಪ್‌, ಸಲೀಮ್‌ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್‌ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದ್ದು, ವಸಿಷ್ಠ ಸಿಂಹ, ರಾಕ್‍ಲೈನ್ ವೆಂಕಟೇಶ್, ಮಯೂರಿ, ಆದಿಲೋಕೇಶ್‌ ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ.

Trending videos

Back to Top