ನ.9 ಕೆಜಿಎಫ್ ಟ್ರೇಲರ್
Team Udayavani, Nov 5, 2018, 11:09 AM IST
ನಟ ಯಶ್ ಅಭಿನಯದ “ಕೆ.ಜಿ.ಎಫ್’ನ ಟ್ರೇಲರ್ ಬಿಡುಗಡೆಯಾಗೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಶಿರಡಿ ಸಾಯಿಬಾಬ ಮತ್ತು ಕೊಲ್ಲಾಪುರದ ಮಹಾಲಕ್ಷ್ಮೀ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಅದರ ಮೊದಲ ಭಾಗವಾಗಿ “ಕೆ.ಜಿ.ಎಫ್’ ಟ್ರೇಲರ್ ಅನ್ನು ಹೊರತರುತ್ತಿದೆ.
ಚಿತ್ರತಂಡದ ಮೂಲಗಳ ಪ್ರಕಾರ, ಇದೇ ನ. 9ಕ್ಕೆ “ಕೆ.ಜಿ.ಎಫ್’ನ ಟ್ರೇಲರ್ ಬಿಡುಗಡೆಯಾಗಲಿದ್ದು, ಅದರ ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. “ಕೆ.ಜಿ.ಎಫ್’ ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿರುವುದರಿಂದ, ಚಿತ್ರದ ಟ್ರೇಲರ್ಗಳನ್ನು ಕೂಡ ಏಕ ಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಒಟ್ಟಾರೆ ಸೆಟ್ಟೇರಿದಾಗಿನಿಂದಲೂ ಚಿತ್ರದ ಫಸ್ಟ್ಲುಕ್, ನಡುವೆ ಒಂದೆರಡು ಪೋಸ್ಟರ್ಗಳು, ಸ್ಟಿಲ್ಗಳನ್ನು ಹೊರತುಪಡಿಸಿದರೆ, ಚಿತ್ರತಂಡ ಇಲ್ಲಿಯವರೆಗೆ ಚಿತ್ರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಏನೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ, ಚಿತ್ರದ ಬಗ್ಗೆ ಕುತೂಹಲ ಹಾಗೂ ನಿರೀಕ್ಷೆ ಎರಡೂ ಇದೆ.