CONNECT WITH US  

ಮಹಿರ ಟ್ರೇಲರ್‌; ಹೊಸಬರ ಖದರ್‌

ತನ್ನ ಶೀರ್ಷಿಕೆ ಮತ್ತು ಪೋಸ್ಟರ್‌ ಮೂಲಕ ಚಿತ್ರಪ್ರೇಮಿಗಳ ಗಮನ ಸೆಳೆದಿದ್ದ "ಮಹಿರ' ಚಿತ್ರದ ಮೊದಲ ಟ್ರೇಲರ್‌ ಬಿಡುಗಡೆಯಾಗಿದೆ. "ಮಹಿರ' ಅನ್ನೋದು ಸಂಸ್ಕೃತದಲ್ಲಿ ಹೆಣ್ಣಿನ ಶಕ್ತಿಯ ಬಗ್ಗೆ ಹೇಳುವ ಪದವಾಗಿದ್ದು, ಈ ಚಿತ್ರದ ಕಥೆಯೂ ಹೆಣ್ಣಿನ ಶಕ್ತಿ ಮತ್ತು ಹೋರಾಟದ ಬಗ್ಗೆಯೇ ಹೇಳುತ್ತಿರುವುದರಿಂದ ಚಿತ್ರದ ಕಥೆಗೆ ಸೂಕ್ತ ಎಂಬ ಕಾರಣಕ್ಕೆ "ಮಹಿರ' ಪದವನ್ನೇ ಚಿತ್ರದ ಶೀರ್ಷಿಕೆಯಾಗಿ ಬಳಸಿಕೊಂಡಿದ್ದೇವೆ ಎನ್ನುವುದು ಚಿತ್ರತಂಡದ ಮಾತು.

ತಾಯಿ-ಮಗಳ ಬದುಕು ಮತ್ತು ಹೋರಾಟದ ಕಥೆಯನ್ನು "ಮಹಿರ' ಚಿತ್ರ ತೆರೆದಿಡಲಿದೆಯಂತೆ. ಚಿತ್ರದಲ್ಲಿ ವರ್ಜೀನಿಯ ರಾಡ್ರಿಗಸ್‌ ಹಾಗೂ ಚೈತ್ರ ಆಚಾರ್‌ ತಾಯಿ-ಮಗಳ ಪಾತ್ರದಲ್ಲಿ ಕಾಣಿಸಿಕೊಂಡರೆ, ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್‌ ಬಿ. ಶೆಟ್ಟಿ ಮೊದಲ ಬಾರಿಗೆ ಈ
ಚಿತ್ರದಲ್ಲಿ ತನಿಖಾಧಿಕಾರಿಯಾಗಿ ರಫ್ ಆ್ಯಂಡ್‌ ಟಫ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಶ್‌ ಗೌಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 

Trending videos

Back to Top