CONNECT WITH US  

ಇಂದಿನಿಂದ ಮನಸಿನ ಮರೆಯಲಿ

"ಮನಸಿನ ಮರೆಯಲಿ' ಎಂಬ ಚಿತ್ರವೊಂದು ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರ ಇಂದು ಬಿಡುಗಡೆಯಾಗುತ್ತಿದೆ. "ಆಸ್ಕರ್‌' ಕೃಷ್ಣ ಈ ಚಿತ್ರದ ನಿರ್ದೇಶಕರು. ಪ್ರೀತಿಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂಬ ಅಂಶದೊಂದಿಗೆ ಈ ಚಿತ್ರ ಸಾಗುತ್ತದೆಯಂತೆ.

ಪ್ರೀತಿ ವಿಚಾರ ಬಂದಾಗ ಮನುಷ್ಯನ ಭಾವನೆ, ಆಲೋಚೆಗಳು ಭಿನ್ನವಾಗಿರುತ್ತವೆ. ಸನ್ನಿವೇಶಗಳು ಖಳ ನಾಯಕನಾಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ. ಚಿತ್ರ ನೋಡುವ ಪ್ರೇಕ್ಷಕನಿಗೆ ಇದು ನಮ್ಮದೇ ಜೀವನದಲ್ಲಿ ನಡೆದ ಘಟನೆಯೇನೋ ಎಂಬಂತೆ ಭಾಸವಾಗುತ್ತದೆ ಎನ್ನುವುದು ನಿರ್ದೇಶಕ ಕೃಷ್ಣ ಮಾತು.

ಚಿತ್ರದಲ್ಲಿ ನಾಯಕನಾಗಿ ಕಿಶೋರ್‌ ಯಾದವ್‌, ನಾಯಕಿಯಾಗಿ ದಿವ್ಯಾಗೌಡ ನಟಿಸಿದ್ದಾರೆ. ಉಳಿದಂತೆ ವರ್ಧನ್‌, ಚಂದ್ರಿಕಾ, ನಂದಗೋಪಾಲ್‌, ಲಡ್ಡು ದಿವ್ಯಾ ನಟಿಸಿದ್ದಾರೆ.  ಪಾಂಚಜನ್ಯ ಕಂಬೈನ್ಸ್‌ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರಕ್ಕೆ ಎಂ.ಎಸ್‌.ತ್ಯಾಗರಾಜ್‌ ಸಂಗೀತ ನೀಡಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು ಸುತ್ತಮುತ್ತ ಚಿತ್ರೀಕರಣವಾಗಿದೆ. 

Trending videos

Back to Top