CONNECT WITH US  

"ಕೆಜಿಎಫ್' ಫ್ಲಾಪ್ ಆಗುತ್ತೆ ಅಂದವರಿಗೆ ಜಗ್ಗೇಶ್ ಹೇಳಿದ್ದೇನು ಗೊತ್ತಾ?

ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ "ಕೆಜಿಎಫ್' ಸಿನಿಮಾ ಫ್ಲಾಪ್ ಆಗುತ್ತೆ ಎಂದು ಹೇಳಿದ್ದವರಿಗೆ ನವರಸ ನಾಯಕ ಜಗ್ಗೇಶ್ ತಮ್ಮ ಮಾತಿನಲ್ಲೇ ಚಾಟಿ ಬೀಸಿದ್ದಾರೆ. ರಾಕಿಂಗ್ ಸ್ಟಾರ್ ಅಭಿನಯದ "ಕೆಜಿಎಫ್' ಚಿತ್ರ ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿದೆ. ಡಿಸೆಂಬರ್ 21ಕ್ಕೆ ಪಂಚ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಅಲ್ಲದೇ ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ "ಝಿರೋ' ಚಿತ್ರವು ಕೂಡಾ ಅಂದೇ ರಿಲೀಸ್ ಆಗಲಿದ್ದು, "ಕೆಜಿಎಫ್' ಚಿತ್ರ "ಝಿರೋ' ಚಿತ್ರದ ಮುಂದೆ ಫ್ಲಾಪ್ ಆಗುತ್ತದೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಬಗ್ಗೆ ಅಭಿಮಾನಿಯೊಬ್ಬರು ನಟ ಜಗ್ಗೇಶ್‍ಗೆ ಟ್ಯಾಗ್ ಮಾಡಿದ್ದರು. 

ಇದಕ್ಕೆ ಜಗ್ಗೇಶ್ ತಮ್ಮ ಟ್ವೀಟರ್ ನಲ್ಲಿ "ಕನ್ನಡದ ಬೆಳವಣಿಗೆಗೆ ಶ್ರಮಿಸುವ ಯಾರೇ ಆಗಲಿ, ಅವರ ಭುಜ ತಟ್ಟಿ ಹುರಿದುಂಬಿಸುವವನೇ ನಿಜವಾದ ಕನ್ನಡಿಗ. ಅಸೂಯೆ ಪಡುವವನು ಸಾಧಿಸಲಾಗದ ಸಾಧಿಸಿದವರನ್ನು ಸಹಿಸಲಾಗದ ನಿಷ್ಪ್ರಯೋಜಕ. ನಮ್ಮ ಕಲಾಬಂಧುಗಳಿಂದ ಕನ್ನಡ ಚಿತ್ರರಂಗ ಮುಂಚೂಣಿಗೆ ನುಗ್ಗುತ್ತಿದೆ. ಈ ಬಗ್ಗೆ ಹೆಮ್ಮೆ ಪಡಿ, ಪರಭಾಷಿಕರಿಗೆ ಕನ್ನಡ ಚಿತ್ರರಂಗ ಕುತೂಹಲ ಮೂಡಿಸುತ್ತಿದೆ. ಹೆಮ್ಮೆಯಿಂದ ಜೈ ಎನ್ನಿ' ಎಂದು ಬರೆದುಕೊಂಡಿದ್ದಾರೆ.

Trending videos

Back to Top