CONNECT WITH US  

"ಬೆಟ್ಟದ ಹೂವು' ಶೂಟಿಂಗ್ ಸ್ಪಾಟ್‍ನಲ್ಲಿ ಪುನೀತ್ ಏನಂದ್ರು?: Watch

"ಬೆಟ್ಟದ ಹೂ' ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಕೊಟ್ಟ ಸಿನಿಮಾ. ಈ ಚಿತ್ರಕ್ಕೆ ಅವರು ನ್ಯಾಷನಲ್ ಅವಾರ್ಡ್​​ ಪಡೆದಿದ್ದು ಗೊತ್ತೇ ಇದೆ. 1985ರಲ್ಲಿ ನಿರ್ಮಾಣವಾದ ಈ ಸಿನಿಮಾ ಇಂದಿಗೂ ಎವರ್​ಗ್ರೀನ್​. ಇಡೀ ಸಿನಿಮಾದ ಶೂಟಿಂಗ್​ ಚಿಕ್ಕಮಗಳೂರಿನ ಅತ್ತಿಗುಂಡಿಯಲ್ಲಿ ನಡೆದಿತ್ತು. ಇದೀಗ ಆ ಚಿತ್ರವನ್ನು ಪುನೀತ್ ರಾಜಕುಮಾರ್ ಮತ್ತೊಮ್ಮೆ ನೆನಪು ಮಾಡಿದ್ದಾರೆ.

ಹೌದು! ಇತ್ತೀಚೆಗೆ "ನಟಸಾರ್ವಭೌಮ' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಚಿಕ್ಕಮಗಳೂರಿನಲ್ಲಿ ಅತ್ತಿಗುಂಡಿ ಕಡೆಯಿಂದ ಪ್ರಯಾಣಿಸುತ್ತಿದ್ದರಂತೆ. ಆಗ ಅವರಿಗೆ "ಬೆಟ್ಟದ ಹೂವು' ಸಿನಿಮಾದ ಚಿತ್ರೀಕರಣ ನಡೆದ ಸ್ಥಳದ ನೆನಪಾಗಿದೆ. ಕೂಡಲೇ ಕಾರನ್ನು ಅತ್ತಿಗುಂಡಿ​ ಕಡೆ ತಿರುಗಿಸಿದ ಪುನೀತ್​ ಅಲ್ಲಿಗೆ ಹೋಗಿ ಶೂಟಿಂಗ್ ಸ್ಥಳ, ಸೆಟ್ ಎಲ್ಲಿ ಹಾಕಿದ್ದು, ಯಾರ್ಯಾರಿದ್ದರು ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಸುಮಾರು 30 ವರ್ಷಗಳ ಹಿಂದೆ ಬಿಡುಗಡೆಯಾದ ಚಿತ್ರದ ಚಿತ್ರೀಕರಣದ ಸಂದರ್ಭಗಳನ್ನು ಮೆಲುಕು ಹಾಕಿದ್ದಾರೆ. ಅಷ್ಟೇ ಅಲ್ಲದೆ, ಅತ್ತಿಗುಂಡಿಯ ಗ್ರಾಮಸ್ಥರನ್ನು ಭೇಟಿಯಾಗಿ ಚಿತ್ರೀಕರಣದ ಸ್ಥಳಗಳ, ದೃಶ್ಯಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದೀಗ ಈ ವೀಡಿಯೋವನ್ನು ತಮ್ಮ ಫೇಸ್ ಬುಕ್ ಅಕೌಂಟ್'ನಲ್ಲಿ ಪುನೀತ್ ರಾಜಕುಮಾರ್ ಶೇರ್ ಮಾಡಿದ್ದಾರೆ. 

Trending videos

Back to Top