ಯಶ್ ನಟನೆಯ KGF ಹೇಗಿರಬಹುದು, ನೋಡಿ ಟ್ರೇಲರ್; ಅಭಿಮಾನಿಗಳಿಗೆ ಹಬ್ಬ
Team Udayavani, Nov 9, 2018, 2:28 PM IST
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಹವಾ ಎಬ್ಬಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿಯನಯದ ಬಹು ನಿರೀಕ್ಷಿತ ಕೆಜಿಎಫ್ ಸಿನಿಮಾದ ಟ್ರೇಲರ್ ಶುಕ್ರವಾರ ಬಿಡುಗಡೆಯಾಗಿದ್ದು, ಯಶ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಟ್ಟಂತಾಗಿದೆ.
ಕೆಜಿಎಫ್ ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದ್ದು, ಚಿತ್ರದ ಟ್ರೇಲರ್ ಕೂಡಾ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿತ್ತು.
ಈಗಾಗಲೇ ಕೆಜಿಎಫ್ ನ ಟೀಸರ್ ಬಿಡುಗಡೆ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಉಗ್ರಂ ಫೇಮ್ ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ನ ಭರ್ಜರಿ ಫರ್ಫಾರ್ಮೆನ್ಸ್, ಹೊಂಬಾಳೆ ಫಿಲ್ಮ್ ಬ್ಯಾನರ್ ನ ಬಹುಕೋಟಿ ವೆಚ್ಚದ ಅದ್ದೂರಿ ಸಿನಿಮಾ ಕೆಜಿಎಫ್ ಟ್ರೇಲರ್ ರಿಲೀಸ್ ಆಗುವ ಮೂಲಕ ಸಹಜವಾಗಿಯೇ ಚಿತ್ರದ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ.
ಯಶ್ ನಟನೆಯ ಕೆ.ಜಿ.ಎಫ್ ಸಿನಿಮಾ ನವೆಂಬರ್ ತಿಂಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಲಿದೆ ಎಂದು ಈ ಮೊದಲು ಚಿತ್ರತಂಡ ಹೇಳಿತ್ತು. ಆದರೆ ಶಿವಣ್ಣ ಮತ್ತು ಸುದೀಪ್ ಅಭಿನಯದ ದಿ ವಿಲನ್ ಬಿಡುಗಡೆ ಹಿನ್ನೆಲೆಯಲ್ಲಿ ದಿನಾಂಕವನ್ನು ಮುಂದೂಡಿತ್ತು. ಆ ನಿಟ್ಟಿನಲ್ಲಿ ಕೆಜಿಎಫ್ ಡಿಸೆಂಬರ್ ನಲ್ಲಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ.
ಕೆಜಿಎಫ್ ಚಿತ್ರದಲ್ಲಿ ಶ್ರೀನಿಧಿ ರಮೇಶ್ ಶೆಟ್ಟಿ ಯಶ್ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೇ ಅಚ್ಯುತ್ ಕುಮಾರ್, ನಾಸಿರ್, ರಮ್ಯಾಕೃಷ್ಣ, ಅನಂತ್ ನಾಗ್, ವಶಿಷ್ಠ ಎನ್ ಸಿಂಹ ಸೇರಿದಂತೆ ಖ್ಯಾತ ನಟರು ಮುಖ್ಯಭೂಮಿಕೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು