ಟ್ರೈಲರ್ ಮೆಚ್ಚಿದ ಅಭಿಮಾನಿಗಳಿಗೆ ಯಶ್ ಹೇಳಿದ್ದೇನು ಗೊತ್ತಾ?


Team Udayavani, Nov 11, 2018, 3:02 PM IST

yash-kgf.jpg

ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ “ಕೆಜಿಎಫ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಹವಾ ಎಬ್ಬಿಸುತ್ತಿದೆ. ಯಶ್​​ ಲುಕ್​​ ಹಾಗೂ ಡೈಲಾಗ್ಸ್​ನ ಸ್ಯಾಂಪಲ್​​​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ಬಾಲಿವುಡ್‍ನಿಂದ ಹಿಡಿದು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಂದ “ಕೆಜಿಎಫ್’​ ಚಿತ್ರತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ಹಿನ್ನೆಲೆಯಲ್ಲಿ ನಟ ಯಶ್ ವಿಡಿಯೋ ಮೂಲಕ ಎಲ್ಲಾ ಅಭಿಮಾನಿಗಳಿಗೆ ಹಾಗೂ ಶುಭಾಶಯ ತಿಳಿಸಿದವರಿಗೆ ಧನ್ಯವಾದ ತಿಳಿಸಿದ್ದಾರೆ.

ಹೌದು! ನಟ ಯಶ್ ಟ್ವಿಟ್ಟರ್ ನಲ್ಲಿ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ. ನನ್ನ “ಕೆಜಿಎಫ್’ ಟ್ರೈಲರ್ ನ ನೀವು ರಿಸೀವ್ ಮಾಡಿಕೊಂಡಿರುವುದಕ್ಕೆ ತುಂಬಾ ತುಂಬಾ ಖುಷಿಯಾಗಿದೆ. ಹೇಗೆ ನಮ್ಮ ಖುಷಿಯನ್ನು ವ್ಯಕ್ತಪಡಿಸಬೇಕು ಗೊತ್ತಾಗುತ್ತಿಲ್ಲ. ಎರಡು ವರ್ಷದಿಂದ ಕಷ್ಟಪಟ್ಟು ನಾವು ಏನು ಕೆಲಸ ಮಾಡಿದ್ದೇವೆ ಎಂದು ನಿಮಗೆ ತೋರಿಸಬೇಕು ಎಂದು ಕಾಯುತ್ತಿದ್ದೆವು. ಈಗ ಅದನ್ನು ಟ್ರೈಲರ್ ಮೂಲಕ ನಿಮಗೆ ತೋರಿಸಿದ್ದೇವೆ’ ಎಂದು ಹೇಳಿದ್ದಾರೆ. “ನೀವು ಟ್ರೈಲರ್ ಮೆಚ್ಚಿರುವ ರೀತಿ ನಮಗೆ ಸಾರ್ಥಕತೆಯ ಭಾವನೆಯಾಗುತ್ತಿದೆ. ಇನ್ನು ಹೆಚ್ಚು ಕೆಲಸ ಮಾಡುವ ಸ್ಫೂರ್ತಿ ಸಿಕ್ಕಿದೆ.

ಅಭಿಮಾನಿಗಳು ತುಂಬಾ ಚೆನ್ನಾಗಿ ಟ್ರೈಲರ್ ಬಿಡುಗಡೆಯನ್ನು ಆಚರಿಸಿದ್ದೀರಿ. ಅವರಿಗೆಲ್ಲಾ ಧನ್ಯವಾದಗಳು. ಎಲ್ಲ ಕಲಾವಿದರು ಮತ್ತು ನಿರ್ಮಾಪಕರು ಸಿನಿಮಾ ನೋಡಿ ಸಪೋರ್ಟ್ ಮಾಡಿ ಬೆನ್ನು ತಟ್ಟಿದ್ದೀರಿ. ನೀವು ಕೊಡುವ ಶಕ್ತಿ, ಭರವಸೆಯಿಂದ ನಾವು ಇನ್ನೂ ಚೆನ್ನಾಗಿ ಕೆಲಸ ಮಾಡುತ್ತೇವೆ’ ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲೇ ಅತೀ ದೊಡ್ಡ ಬಜೆಟ್ ಸಿನಿಮಾ ಆಗಿರುವ “ಕೆಜಿಎಫ್’, ಇದೇ ಡಿಸೆಂಬರ್ 21ರಂದು ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. 80ರ ದಶಕದ ಕಾಲಘಟ್ಟದ ಕಥೆಯಲ್ಲಿ ಪಾತ್ರಕ್ಕಾಗಿ ಒಂದೂವರೆ ವರ್ಷ ಗಡ್ಡ, ಕೂದಲು ಬಿಟ್ಟು ರಫ್ ಅಂಡ್ ಟಫ್ ಲುಕ್​ನಲ್ಲಿ ಯಶ್​​​ ಕಾಣಿಸಿಕೊಂಡಿದ್ದಾರೆ.

ಅವರ ಅಭಿನಯ ಕೂಡ ಈ ಚಿತ್ರದಲ್ಲಿ ಸಖತ್ ಡಿಫರೆಂಟ್ ಆಗಿದೆ ಎನ್ನಲಾಗುತ್ತಿದೆ. ಇನ್ನು ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಭುವನ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಯಶ್ ಎದುರಿಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಖಳ ನಟನಾಗಿ ರವಿಶಂಕರ್ ಸಹೋದರ ಅಯ್ಯಪ್ಪ ಅಭಿನಯಸುತ್ತಿದ್ದಾರೆ. ಇನ್ನುಳಿದಂತೆ ಅನಂತ್ ನಾಗ್, ಮಾಳವಿಕಾ, ಟಿ.ಎಸ್.ನಾಗಾಭರಣ, ಬಿ,ಸುರೇಶ್, ನೀನಾಸಂ ಅಶ್ವಥ್, ಅಚ್ಯುತ್ ಕುಮಾರ್, ರಾಮ್, ಅವಿನಾಶ್, ಲಕ್ಕಿ, ಹರೀಶ್ ರಾಯ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

14

Sandalwood: ರಿಷಬ್‌ ಶೆಟ್ಟಿ ʼಕಾಂತಾರ-1ʼ ʼಸಪ್ತ ಸಾಗರದಾಚೆʼಯ ಬೆಡಗಿ ರುಕ್ಮಿಣಿ ನಾಯಕಿ?

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.