ಎಲ್ಲರಿಗೂ ಧನ್ಯವಾದ ಹೇಳಿದ ಯಶ್‌


Team Udayavani, Nov 12, 2018, 11:20 AM IST

yash.jpg

ಆರಂಭದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ಯಶ್‌ ಅಭಿನಯದ “ಕೆಜಿಎಫ್’ ಚಿತ್ರದ ಮೊದಲ ಟ್ರೇಲರ್‌ ಬಿಡುಗಡೆಯಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಬಿಡುಗಡೆಯಾದ ಟ್ರೇಲರ್‌ಗೆ ಎಲ್ಲೆಡೆಯಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. “ಕೆಜಿಎಫ್’ ಚಿತ್ರದ ಟ್ರೇಲರ್‌ನ ವಿಶೇಷವೆಂದರೆ, ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಜೋರು ಸುದ್ದಿಯಾಗಿರುವುದು.

ಸಾಮಾಜಿಕ ತಾಣಗಳಲ್ಲಂತೂ “ಕೆಜಿಎಫ್’ ಟ್ರೇಲರ್‌ಗೆ ನಿರೀಕ್ಷೆ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೇಲರ್‌ ಬಿಡುಗಡೆಯಾದ ಒಂದೇ ದಿನದಲ್ಲಿ ಸುಮಾರು 3.5 ಮಿಲಿಯನ್‌ ವೀಕ್ಷಣೆಯಾಗಿದ್ದಲ್ಲದೆ, ಕನ್ನಡಕ್ಕಿಂತ ಬೇರೆ ಭಾಷೆಯಲ್ಲೇ ಟ್ರೇಲರ್‌ ಹೆಚ್ಚು ಸದ್ದು ಮಾಡುತ್ತಿರುವುದು ವಿಶೇಷತೆಗಳಲ್ಲೊಂದು. ಇನ್ನೂ ಒಂದು ಖುಷಿಯ ವಿಷಯವೆಂದರೆ, ಯು ಟ್ಯೂಬ…ನಲ್ಲಿ ತೆಲುಗು ಭಾಷೆಯ “ಕೆಜಿಎಫ್’ ಟ್ರೇಲರ್‌ ಟ್ರೆಂಡಿಂಗ್‌ ಲಿಸ್ಟ್‌ನಲ್ಲಿದೆ.

ಇವೆಲ್ಲದರ ನಡುವೆ ಅಭಿಮಾನಿಗಳು ಮಾತ್ರವಲ್ಲದೆ ಬಾಲಿವುಡ್‌ನಿಂದ, ಸ್ಯಾಂಡಲ್‌ವುಡ್‌ವರೆಗೆ ಎಲ್ಲಾ ಚಿತ್ರರಂಗದ ಸೆಲೆಬ್ರಿಟಿಗಳು, ಚಿತ್ರೋದ್ಯಮದ ಗಣ್ಯರು “ಕೆಜಿಎಫ್’ ಟ್ರೇಲರ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಚಿತ್ರ ನೋಡುವ ಕುತೂಹಲ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನು, “ಕೆಜಿಎಫ್’ ಟ್ರೇಲರ್‌ಗೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ಸಾಕಷ್ಟು ಸಂತಸದಲ್ಲಿರುವ ಯಶ್‌, ತಮ್ಮ ಅಭಿಮಾನಿಗಳು ಸೇರಿದಂತೆ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಯ ಜನರಿಗೆ ಹಾಗು ಚಿತ್ರದ ಕುರಿತು ಬೆಂಬಲವಾಗಿ ನಿಲ್ಲುತ್ತಿರುವವರಿಗೆ ಪ್ರೀತಿಯಿಂದ ಧನ್ಯವಾದ ತಿಳಿಸಿದ್ದಾರೆ.

ಈ ಕುರಿತಂತೆ ತಮ್ಮ “ಮುಖಪುಟ’ದಲ್ಲಿ ವಿಡಿಯೋ ಪೋಸ್ಟ್‌ ಮಾಡಿರುವ ಯಶ್‌, “ಕೆಜಿಎಫ್’ ಚಿತ್ರದ ಟ್ರೇಲರ್‌ ವೀಕ್ಷಿಸಿ, ಅದನ್ನು ಸ್ವೀಕರಿಸಿರುವ ರೀತಿ ನೋಡಿ ತುಂಬಾ ಖುಷಿಯಾಗಿದೆ. ಎರಡು ವರ್ಷದಿಂದ ನಾವು ಏನೆಲ್ಲಾ ಕಷ್ಟಪಟ್ಟು ಕೆಲಸ ಮಾಡಿ¨ªೆವೋ ಅದನ್ನ ನಿಮಗೆ ತೋರಿಸಬೇಕು ಅಂತ ಕಾಯುತ್ತಿದ್ದೆವು. ಅದನ್ನ ಟ್ರೇಲರ್‌ ಮೂಲಕ ತೋರಿಸಿದ್ದೇವೆ. ನೀವು ಅದನ್ನು ಮೆಚ್ಚಿರುವ ರೀತಿ ನೋಡಿ ನನಗೆ ಸಾರ್ಥಕತೆ ಫೀಲ್‌ ಆಗುತ್ತಿದೆ.

ನೀವು ನೀಡುತ್ತಿರುವ ಬೆಂಬಲದಿಂದ ನಮಗೆ ಇನ್ನಷ್ಟು ಕೆಲಸ ಮಾಡಬೇಕು ಎಂಬ ಹುಮ್ಮಸ್ಸು ಬರುತ್ತಿದೆ. ನಿಮ್ಮೆಲ್ಲರಿಗೂ ಧನ್ಯವಾದಗಳು. ಆದಷ್ಟು ಬೇಗ ಚಿತ್ರವನ್ನು ನಿಮ್ಮ ಮುಂದೆ ತರಲಿದ್ದೇವೆ. ನಿಮ್ಮ ಬೆಂಬಲ, ಸಹಕಾರ ಹೀಗೆ ಇರಲಿ’ ಎಂದು ಅಭಿಮಾನಿಗಳು, ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸದ್ಯ “ಕೆಜಿಎಫ್’ ಚಿತ್ರದ ಟ್ರೇಲರ್‌ ವೀಕ್ಷಣೆಯಲ್ಲಿ ಮೊದಲ ಸ್ಥಾನದಲ್ಲಿ ಹಿಂದಿ ಹಾಗೂ ಎರಡನೇ ಸ್ಥಾನದಲ್ಲಿ ತೆಲುಗು, ಮೂರನೇ ಸ್ಥಾನದಲ್ಲಿ ಕನ್ನಡವಿದ್ದು, ಇನ್ನುಳಿದಂತೆ ತಮಿಳು ಹಾಗೂ ಮಲಯಾಳಂ ನಂತರದ ಸ್ಥಾನಗಳಲ್ಲಿದೆ ಎಂಬುದೇ ಈ ಹೊತ್ತಿನ ವಿಶೇಷ. ಬರೀ ಟ್ರೇಲರ್‌ ನೋಡಿ ಇಷ್ಟೊಂದು ಮೆಚ್ಚುಗೆ ವ್ಯಕ್ತಪಡಿಸಿರುವ ಜನರಿಗೆ, ಸಿನಿಮಾ ನೋಡುವ ಕುತೂಹಲ ಹೆಚ್ಚಿರುವುದಂತೂ ಸುಳ್ಳಲ್ಲ.

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

14

Sandalwood: ರಿಷಬ್‌ ಶೆಟ್ಟಿ ʼಕಾಂತಾರ-1ʼ ʼಸಪ್ತ ಸಾಗರದಾಚೆʼಯ ಬೆಡಗಿ ರುಕ್ಮಿಣಿ ನಾಯಕಿ?

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.