ವೈಭವ್‌ ಕಣ್ತುಂಬ ಕನಸು

Team Udayavani, Nov 14, 2018, 11:13 AM IST

taraka.jpg

ಇತ್ತೀಚೆಗೆ ಚಂದನವನದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ “ತಾರಕಾಸುರ’. ಹೆಸರೇ ಹೇಳುವಂತೆ “ತಾರಕಾಸುರ’ ಕಮರ್ಷಿಯಲ್‌ ಆ್ಯಕ್ಷನ್‌ ಕಹಾನಿ. ಈ ಚಿತ್ರದ ಮೂಲಕ ನವನಟ ವೈಭವ್‌ ಆ್ಯಕ್ಷನ್‌ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಈಗಾಗಲೇ “ತಾರಕಾಸುರ’ ಚಿತ್ರದ ಪೋಸ್ಟರ್‌, ಟೀಸರ್‌, ಹಾಡುಗಳು ಮತ್ತು ಟ್ರೇಲರ್‌ಗಳು ನೋಡುಗರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಚಿತ್ರಕ್ಕೆ ಪ್ರೇಕ್ಷಕರು ಮತ್ತು ಚಿತ್ರರಂಗದ ಕಡೆಯಿಂದ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಆದಷ್ಟು ಬೇಗ “ತಾರಕಾಸುರ’ನನ್ನು ಚಿತ್ರಮಂದಿರಗಳಿಗೆ ತರುವ ಸಿದ್ಧತೆ ಮಾಡಿಕೊಳ್ಳುತ್ತಿದೆ. 

“ತಾರಕಾಸುರ ಚಿತ್ರಕ್ಕೆ ಸುಮಾರು ಎರಡು ವರ್ಷಗಳ ಸುದೀರ್ಘ‌ ಸಮಯವನ್ನು ತೆಗೆದುಕೊಂಡಿದ್ದೆವು. ಚಿತ್ರರಂಗದಲ್ಲಿ ಅನೇಕರು ಇಷ್ಟೊಂದು ಸಮಯವನ್ನು ಯಾಕೆ ತೆಗೆದುಕೊಂಡಿದ್ದು? ಎಂದು ಕೇಳುತ್ತಿದ್ದರು. ಅವರ ಎಲ್ಲಾ ಪ್ರಶ್ನೆಗಳಿಗೆ ಚಿತ್ರದ ಟ್ರೇಲರ್‌ ಉತ್ತರ ನೀಡಿದೆ. ಉಳಿದ ಪ್ರಶ್ನೆಗಳಿಗೆ ಚಿತ್ರ ತೆರೆಗೆ ಬಂದ ನಂತರ ಉತ್ತರ ಸಿಗುತ್ತದೆ’ ಎನ್ನುವುದು ಚಿತ್ರದ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಅವರ ಮಾತು. 

“ಯಾವುದೇ ಚಿತ್ರವನ್ನಾದರೂ ಮಾಡಲು ಒಂದಷ್ಟು ಸಮಯ ಬೇಕೆ ಬೇಕು. ಇನ್ನು ಕೆಲವು ಚಿತ್ರಗಳನ್ನು ಮಾಡುವಾಗ ಅಂದುಕೊಂಡಿದ್ದಕ್ಕಿಂತ ಜಾಸ್ತಿಯೇ ಸಮಯ ಬೇಕು. ಅದರಲ್ಲೂ ಹೊಸ ಕಥೆಯನ್ನು ಚಿತ್ರವಾಗಿ ಮಾಡಲು ಹೊರಟಾಗ, ಅದಕ್ಕೆ ಸಾಕಷ್ಟು ಅಧ್ಯಯನ, ಸಂಶೋಧನೆ, ಹೋಮ್‌ ವರ್ಕ್‌ ಎಲ್ಲವೂ ಬೇಕಾಗುತ್ತದೆ. ತಾರಕಾಸುರ ಅಂಥ ಕೆಟಗೆರಿಗೆ ಸೇರುವ ಚಿತ್ರ’ ಎನ್ನುವ ಚಂದ್ರಶೇಖರ್‌ ಬಂಡಿಯಪ್ಪ, “ನಾವು ಸ್ಕ್ರಿಪ್ಟ್ ಹಂತದಲ್ಲಿ ಚಿತ್ರ ಹೇಗೆ ಬರಬೇಕು ಅಂದುಕೊಂಡಿದ್ದೆವೊ, ಹಾಗೇ ತೆರೆಮೇಲೆ ಬಂದಿದೆ. ಚಿತ್ರ ತೆರೆಗೆ ಬರೋದಕ್ಕೆ ಸ್ವಲ್ಪ ತಡವಾದರೂ ಅದಕ್ಕೆ ಒಂದಷ್ಟು ಸಕಾರಣಗಳಿವೆ’ ಎನ್ನುತ್ತಾರೆ.

“ತಾರಕಾಸುರ’ ಚಿತ್ರದಲ್ಲಿ ನವನಟ ವೈಭವ್‌ಗೆ ನಾಯಕಿಯಾಗಿ ಮಾನ್ವಿತಾ ಹರೀಶ್‌ ಜೋಡಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಹಾಲಿವುಡ್‌ ನಟ ಡ್ಯಾನಿ ಸಫಾನಿ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಉಳಿದಂತೆ ಸಾಧುಕೋಕಿಲ, ಕರಿಸುಬ್ಬು, ಎಂ.ಕೆ ಮಠ, ಜೈಜಗದೀಶ್‌ ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಬೆಂಗಳೂರು, ಮೈಸೂರು, ಚಾಮರಾಜನಗರ, ಕೊಳ್ಳೇಗಾಲ, ಮದ್ದೂರು, ವಾರಣಾಸಿ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಹಾಡುಗಳಿಗೆ ಧರ್ಮವಿಶ್‌ ಸಂಗೀತ ಸಂಯೋಜಿಸಿದ್ದಾರೆ. 

ಹಾಡುಗಳು ಹಿಟ್‌: ಇನ್ನು ಇತ್ತೀಚೆಗೆ ಬಿಡುಗಡೆಯಾಗಿರುವ “ತಾರಕಾಸುರ’ ಚಿತ್ರದ ಹಾಡುಗಳು ಸೂಪರ್‌ ಹಿಟ್‌ ಆಗಿವೆ. ಅದರಲ್ಲೂ ನಟ ಶಿವರಾಜಕುಮಾರ್‌ ಹಾಡಿರುವ ಹಾಡಂತೂ ವೈರಲ್‌ ಆಗುತ್ತಿದೆ. ಈಗಾಗಲೇ ನಿರ್ದೇಶಕರಾದ ಸೂರಿ, ಸಂತೋಷ್‌ ಆನಂದರಾಮ್‌, ಸುನಿ, ರಿಷಭ್‌ ಶೆಟ್ಟಿ, ನಟ ಶ್ರೀ ಮುರಳಿ ಹೀಗೆ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ಟ್ರೇಲರ್‌ ಹಾಡುಗಳನ್ನು ನೋಡಿ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಈ ವರ್ಷದ ಹಿಟ್‌ ಹಾಡುಗಳ ಪಟ್ಟಿಯಲ್ಲಿ ನಮ್ಮ ಚಿತ್ರದ ಹಾಡುಗಳೂ ಸ್ಥಾನ ಪಡೆದುಕೊಂಡಿವೆ. ಹೆಸರೇ ಹೇಳುವಂತೆ “ತಾರಕಾಸುರ’ ಒಂದು ಆ್ಯಕ್ಷನ್‌ ಸಿನಿಮಾ. ಆದರೆ ಕನ್ನಡದ ಆ್ಯಕ್ಷನ್‌ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಲಾಗದ ಹತ್ತಾರು ಸಂಗತಿಗಳು ಈ ಚಿತ್ರದಲ್ಲಿರುತ್ತವೆ. ಒಳ್ಳೆಯ ಕಥೆ, ಹಾಡುಗಳು, ಮನರಂಜನೆಯ ಅಂಶಗಳ ಜೊತೆಗೆ ಗಂಭೀರವಾದ ವಿಷಯವೊಂದನ್ನು ಚಿತ್ರ ಚರ್ಚಿಸಲಿದೆ ಎನ್ನುತ್ತದೆ ಚಿತ್ರತಂಡ. 

ಕಳೆದ ಮೂರುವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಪ್ರದರ್ಶಕರಾಗಿ, ವಿತರಕರಾಗಿ ಸಕ್ರಿಯವಾಗಿರುವ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಯಾಗಿದ್ದ ಎಂ. ನರಸಿಂಹಲು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.  “ತಾರಕಾಸುರ’ ಚಿತ್ರದ ಬಿಡುಗಡೆಯ ಹೊಣೆಯನ್ನು ವಿತರಕ ಜಾಕ್‌ ಮಂಜು ವಹಿಸಿಕೊಂಡಿದ್ದು, ಚಿತ್ರವನ್ನು ಇದೇ ತಿಂಗಳಾಂತ್ಯಕ್ಕೆ ರಾಜ್ಯದಾದ್ಯಂತ ಸುಮಾರು ನೂರೈವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ. 

ಇನ್ನು, “ತಾರಕಾಸುರ’ ಚಿತ್ರದ ಕಥಾ ಹಂದರ ಕೂಡ, ಹೊಸ ಮುಖದ ನಾಯಕನನ್ನು ಬಯಸುತ್ತಿದ್ದು, ಅದೇ ಹುಡುಕಾಟದಲ್ಲಿದ್ದ ಚಂದ್ರಶೇಖರ್‌ ಬಂಡಿಯಪ್ಪ ಅವರ ಕಣ್ಣಿಗೆ ಬಿದ್ದಿದ್ದು ನಿರ್ಮಾಪಕ ನರಸಿಂಹಲು ಅವರ ಪುತ್ರ ವೈಭವ್‌. ಆಗಷ್ಟೆ ವೈಭವ್‌ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿ, ನಟನಾಗುವ ಸಲುವಾಗಿ ಒಂದಷ್ಟು ತಯಾರಿ, ಕಸರತ್ತನ್ನು ಆರಂಭಿಸಿದ್ದರು. ಚಿತ್ರದ ಕಥೆಗೂ ಹೊಂದಾಣಿಕೆಯಾಗುತ್ತಿದ್ದರಿಂದ, “ಈ ಚಿತ್ರದಲ್ಲಿ ವೈಭವ್‌ನನ್ನೆ ನಾಯಕ ನಟನನ್ನಾಗಿ ಮಾಡಿದರೆ ಹೇಗೆ?’ ಎಂಬ ಪ್ರಸ್ತಾಪವನ್ನು ನಿರ್ಮಾಪಕರ ಮುಂದಿಟ್ಟರು ನಿರ್ದೇಶಕರು.

“ನಿರ್ಮಾಪಕರ ಮಗ ಎಂಬ ಮುಲಾಜಿಗೆ ಮಣಿದು ವೈಭವ್‌ನನ್ನು ಈ ಸಿನಿಮಾಕ್ಕೆ ಹೀರೋ ಆಗಿ ಹಾಕಿಕೊಳ್ಳುವುದು ಬೇಡ. ನಿಜಕ್ಕೂ ನಿಮ್ಮ ಕಥೆಗೆ ವೈಭವ್‌ ಹೊಂದಿಕೆಯಾಗುತ್ತಾನೆ ಎಂಬುದಿದ್ದರೆ ಮಾತ್ರ ಅವನನ್ನು ಹಾಕಿಕೊಳ್ಳಿ. ಇಲ್ಲದಿದ್ದರೆ ಈ ಕಥೆಗೆ ಹೊಂದಾಣಿಕೆಯಾಗುವ ಬೇರೆ ಯಾವುದಾದರೂ ನಾಯಕ ನಟನ್ನು ನೋಡಿ’ ಎಂಬ ಉತ್ತರ ನಿರ್ಮಾಪಕ ನರಸಿಂಹಲು ಅವರಿಂದ ಬಂತು. ಕೊನೆಗೆ ಇಡೀ ತಂಡ ಕೂತು ಚರ್ಚಿಸಿ ವೈಭವ್‌ ಅವರನ್ನೆ ಸಿನಿಮಾದ ನಾಯಕ ನಟನಾಗಿ ಆಯ್ಕೆ ಮಾಡಿದ್ದಾರೆ. ಅದರಂತೆ ವೈಭವ್‌ ಕೂಡಾ ಪಾತ್ರಕ್ಕೆ ಬೇಕಾದ ಪೂರ್ವ ತಯಾರಿ ನಡೆಸಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಗಟ್ಟಿ ಕಥಾಹಂದರ: ಚಿತ್ರವನ್ನು ಹಿರಿಯ ನಿರ್ಮಾಪಕ, ಪ್ರದರ್ಶಕ ನರಸಿಂಹಲು ನಿರ್ಮಿಸಿದ್ದಾರೆ. ಈಗಾಗಲೇ ಸಿನಿಮಾ ನೋಡಿರುವ ಅವರಿಗೆ ಸಿನಿಮಾ ಬಗ್ಗೆ ವಿಶ್ವಾಸವಿದೆ. ಸುಮಾರು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. “ಸಿನಿಮಾ ನೋಡಿದ್ದೇನೆ. ತುಂಬಾ ಚೆನ್ನಾಗಿ ಬಂದಿದೆ. ಮುಖ್ಯವಾಗಿ ಈ ಚಿತ್ರದ ಕಥಾವಸ್ತು ಭಿನ್ನವಾಗಿದೆ. ಚಿತ್ರದ ಕಥಾವಸ್ತು ಗಟ್ಟಿಯಾಗಿದ್ದರೆ ಜನ ಸಿನಿಮಾವನ್ನು ಇಷ್ಟಪಡುತ್ತಾರೆಂಬುದನ್ನು ಇಷ್ಟು ವರ್ಷದ ಅನುಭವದಲ್ಲಿ ಕಂಡುಕೊಂಡಿದ್ದೇನೆ. “ತಾರಕಾಸುರ’ದಲ್ಲಿ ಆ ಗುಣ ಇದೆ. ಅಂತಿಮವಾಗಿ ಪ್ರೇಕ್ಷಕರು ಏನು ಹೇಳುತ್ತಾರೆ ಅನ್ನೋದಷ್ಟೇ ಮುಖ್ಯವಾಗುತ್ತದೆ’ ಎನ್ನುವುದು ಅವರ ಮಾತು. 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.