ಬುಲೆಟ್ ಸೌಂಡ್ ಮೆಚ್ಚಿದ ಜನರಿಗೆ ಜಗ್ಗೇಶ್ ಥ್ಯಾಂಕ್ಸ್
Team Udayavani, Nov 17, 2018, 4:36 PM IST
ನವರಸನಾಯಕ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ “8 ಎಂಎಂ’ ಚಿತ್ರ ರಾಜ್ಯಾದ್ಯಂದ ತೆರೆಕಂಡಿದ್ದು, ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೇ ಚಿತ್ರಕ್ಕೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ನವರಸನಾಯಕ ಜಗ್ಗೇಶ್ ಟ್ವೀಟರ್ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
“ಚಿತ್ರ ವೀಕ್ಷಿಸಿ ಹರಸಿದ್ದಕ್ಕೆ ಹೃದಯತುಂಬಿ ಬಂತು. ನಿಮ್ಮೆಲ್ಲರ ಹಾರೈಕೆಯಿಂದ #8mm ಚಿತ್ರಕ್ಕೆ ಆನೆಬಲ ಬಂದಿದೆ. ನಿಮಗೆ ಧನ್ಯವಾದಗಳು. ನಿಮ್ಮ ಹಾರೈಕೆಯಿಂದ ಹೃದಯ ಉಬ್ಬಿತು. ಸಾರ್ಥಕ ಅನ್ನಿಸಿತು ಕಲಾಕಾಯಕ ಎಂದು’ ಟ್ವೀಟ್ ಮಾಡಿದ್ದಾರೆ.
ಒಬ್ಬ ಕ್ರಿಮಿನಲ್ ಮತ್ತು ಪೋಲಿಸ್ ನಡುವೆ ನಡೆಯುವ ಒಂದು ಹೊಸ ರೀತಿಯ ಸಸ್ಪೆನ್ಸ್ ಕಥೆ “8 ಎಂಎಂ’ ಚಿತ್ರದಲ್ಲಿದ್ದು, “ನೀರ್ ದೋಸೆ’ ನಂತರ ನವರಸ ನಾಯಕ ಜಗ್ಗೇಶ್ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು ಹರಿಕೃಷ್ಣ ನಿರ್ದೇಶಿಸಿದ್ದು, ನಾರಾಯಣ ಸ್ವಾಮಿ ಇನ್ಪೆಂಟ್ ಪ್ರದೀಪ್, ಸಲೀಮ್ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದ್ದು, ವಸಿಷ್ಠ ಸಿಂಹ, ರಾಕ್ಲೈನ್ ವೆಂಕಟೇಶ್, ಮಯೂರಿ ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ