ಮಾನ್ವಿತಾ ಮರಾಠಿ ಕಲಿಕೆ


Team Udayavani, Nov 19, 2018, 12:09 PM IST

manvita.jpg

ಮಾನ್ವಿತಾ ಹರೀಶ್‌ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಎರಡು. ಮೊದಲನೇಯದಾಗಿ ಮಾನ್ವಿತಾ ನಟಿಸಿರುವ “ತಾರಕಾಸುರ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ತಿಂಗಳಾಂತ್ಯಕ್ಕೆ ತೆರೆಕಾಣುತ್ತಿದೆ. ಈ ನಡುವೆಯೇ ಮಾನ್ವಿತಾ ಮರಾಠಿ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಎರಡೂ ಸಂಭ್ರಮದಲ್ಲಿದ್ದಾರೆ ಮಾನ್ವಿತಾ. ಇನ್ನು, “ತಾರಕಾಸುರ’ ಚಿತ್ರದಲ್ಲೂ ಮಾನ್ವಿತಾ ನಟನೆಗೆ ಅವಕಾಶವಿರುವಂತಹ ಪಾತ್ರವೇ ಸಿಕ್ಕಿದೆಯಂತೆ. ಈ ಚಿತ್ರದ ಮೇಲೆ ಮಾನ್ವಿತಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ. 

ಮರಾಠಿ ಚಿತ್ರ ಒಪ್ಪಿಕೊಂಡಿರುವ ಬಗ್ಗೆ ಮಾತನಾಡುವ ಮಾನ್ವಿತಾ, “ನಾನು ಇದೇ ಮೊದಲ ಸಲ ಮರಾಠಿ ಚಿತ್ರವನ್ನು ಒಪ್ಪಿದ್ದೇನೆ. ಸದ್ಯಕ್ಕೆ ನಾನು ಆ ಚಿತ್ರಕ್ಕೆ ತಯಾರಿ ಪಡೆದುಕೊಳ್ಳಲೆಂದೇ ಮುಂಬೈನಲ್ಲಿದ್ದೇನೆ. ವೈಯಕ್ತಿಕವಾಗಿ ನಾನು ಆ ಚಿತ್ರದ ಪಾತ್ರಕ್ಕೆ ಹೇಗೆಲ್ಲಾ ತಯಾರಿ ನಡೆಸಬೇಕೋ ಅದನ್ನು ಮಾಡಿಕೊಳ್ಳುತ್ತಿದ್ದೇನೆ. ನನ್ನ ಪಾತ್ರಕ್ಕೆ ಯಾವುದೂ ಕೊರತೆ ಕಾಣಬಾರದು. ಹಾಗಾಗಿ, ಎಲ್ಲಾ ತಯಾರಿ ನಡೆಸುತ್ತಿದ್ದೇನೆ. ಯಾವುದೇ ಚಿತ್ರದ ನಿರ್ಮಾಪಕ, ನಿರ್ದೇಶಕರಿರಲಿ, ನಂಬಿಕೆ ಇಟ್ಟು ಅವಕಾಶ ಕೊಟ್ಟಾಗ, ನಾವು ಅದನ್ನು ಉಳಿಸಿಕೊಳ್ಳಬೇಕು.

ಇನ್ನು, “ಮರಾಠಿ’ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ. ಹಾಗೆ ಹೇಳುವುದಾದರೆ, ಅದು ಇನ್ನೊಂದು “ಸೈರಾತ್‌’ ಆಗಬಹುದು. ಅಷ್ಟರ ಮಟ್ಟಿಗೆ ಕಥೆ, ಪಾತ್ರ ಚೆನ್ನಾಗಿದೆ. ಮರಾಠಿಯ “ಲೇ ಭಾರಿ’ ಚಿತ್ರ ನಿರ್ಮಿಸಿದ್ದ ಭಾಳ ಠಾಕ್ರೆ ಅವರ ಮಗ ಮತ್ತು ಸೊಸೆ ಶಾಲಿನಿ ಠಾಕ್ರೆ ಅವರ ಪ್ರೊಡಕ್ಷನ್‌ನಲ್ಲಿ ತಯಾರಾಗುತ್ತಿರುವ ಚಿತ್ರವದು. ಅದು ಮರಾಠಿ ಮತ್ತು ಕನ್ನಡ ಎರಡು ಭಾಷೆಯಲ್ಲೂ ತಯಾರಾಗುತ್ತಿದೆ. ಇನ್ನು, ನಂದಿತಾ ಯಾದವ್‌ ಆ ಚಿತ್ರದ ನಿರ್ದೇಶಕಿಯಾಗಿದ್ದಾರೆ.

ಅವರು ನನಗೆ ಕಥೆ ಹೇಳಿದಾಗ, ಬಿಡಬಾರದು ಅಂತೆನಿಸಿ, ಚಿತ್ರ ಮಾಡುತ್ತಿದ್ದೇನೆ. ಬಹುಶಃ ಡಿಸೆಂಬರ್‌ ಎರಡನೇ ವಾರದಲ್ಲಿ ಮರಾಠಿ ಚಿತ್ರಕ್ಕೆ ಚಾಲನೆ ಸಿಗಲಿದೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಕನ್ನಡದ ಅನೇಕ ನಟರು ಆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ನಾಗತಿಹಳ್ಳಿ ಮೇಷ್ಟ್ರು ಅವರ ಚಿತ್ರವೂ ನಡೆಯುತ್ತಿದೆ. ಆ ಚಿತ್ರದ ಡೇಟ್‌ ಹೊಂದಿಸಿಕೊಂಡು, ಮರಾಠಿ ಚಿತ್ರಕ್ಕೂ ಡೇಟ್‌ ಕೊಡಬೇಕಿದೆ’ ಎಂಬುದು ಮಾನ್ವಿತಾ ಮಾತು.

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

14

Sandalwood: ರಿಷಬ್‌ ಶೆಟ್ಟಿ ʼಕಾಂತಾರ-1ʼ ʼಸಪ್ತ ಸಾಗರದಾಚೆʼಯ ಬೆಡಗಿ ರುಕ್ಮಿಣಿ ನಾಯಕಿ?

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

KTM Movie: ಸಕ್ಸಸ್‌ ರೈಡ್‌ನ‌ಲ್ಲಿ ಕೆಟಿಎಂ

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

Sandalwood: ಏಪ್ರಿಲ್‌ 5ರಿಂದ ಮ್ಯಾಟ್ನಿ ಶೋ  

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.