ಐಂದ್ರಿತಾ-ದಿಗಂತ್ ಮದುವೆ ಬಗ್ಗೆ ರಾಗಿಣಿ ಹೇಳಿದ್ದೇನು ಗೊತ್ತಾ?
Team Udayavani, Nov 21, 2018, 3:03 PM IST
ಸ್ಯಾಂಡಲ್ವುಡ್ನ ಬಹುಕಾಲದ ಬ್ಯೂಟಿಫುಲ್ ಜೋಡಿ ದಿಗಂತ್ ಮಂಚಾಲೆ ಮತ್ತು ನಟಿ ಐಂದ್ರಿತಾ ರೇ ಕೊನೆಗೂ ಸಪ್ತಪದಿ ತುಳಿಯೋಕೆ ರೆಡಿಯಾಗಿದ್ದು, ಡಿಸೆಂಬರ್ 11, 12ರಂದು ಮದುವೆ ಸಮಾರಂಭ ನಡೆಯಲಿದೆ ಎಂದು ಐಂದ್ರಿತಾ ಅವರು ಸಾಮಾಜಿಕ ತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ ಬಹುಕಾಲದ ಪ್ರೇಮಿಗಳು ಮದುವೆ ಆಗುತ್ತಿರುವುದು ಸ್ಯಾಂಡಲ್ವುಡ್ ಮಂದಿಗೆ ಬಹಳಷ್ಟು ಖುಷಿ ತಂದಿದೆ.
ಅದರಲ್ಲೂ ಮುಖ್ಯವಾಗಿ ದಿಗಂತ್-ಐಂದ್ರಿತಾರ ಆಪ್ತ ಸ್ನೇಹಿತೆಯಾದ ರಾಗಿಣಿಗೆ ತುಂಬಾನೆ ಖುಷಿ ತಂದಿದೆಯಂತೆ. ಹೌದು! ತುಪ್ಪದ ಬೆಡಗಿ ರಾಗಿಣಿ, ನವಜೋಡಿಗೆ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟರ್ ನಲ್ಲಿ ರಾಗಿಣಿ “ಈ ಖುಷಿಯನ್ನು ವ್ಯಕ್ತಪಡಿಸೋಕೆ ಆಗ್ತಿಲ್ಲ. ಅಷ್ಟೊಂದು ಖುಷಿಯಾಗುತ್ತಿದೆ. ಮದುವೆಯಾಗುತ್ತಿರುವುದಕ್ಕೆ ಇಬ್ಬರಿಗೂ ಶುಭಾಶಯ’ ಎಂದು ಬರೆದುಕೊಂಡಿದ್ದಾರೆ.
ಇನ್ನು ದಿಗಂತ್ ಮತ್ತು ಐಂದ್ರಿತಾ ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದರು. 2009 ರಲ್ಲಿ “ಮನಸಾರೆ’ ಚಿತ್ರದಲ್ಲಿ ಜೊತೆಯಾಗಿ ನಟಿಸುವ ವೇಳೆ ಇಬ್ಬರಿಗೆ ಪ್ರೇಮಾಂಕುರವಾಗಿತ್ತು. ಸದ್ಯ ದಿಗಂತ್ ಅವರು ಶ್ರೀಲಂಕಾಕ್ಕೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ. 11 ರಂದು ಹಳದಿ ಕಾರ್ಯಕ್ರಮ, 12 ರಂದು ಮದುವೆ ಶಾಸ್ತ್ರದ ಜೊತೆಗೆ ಸ್ಯಾಂಡಲ್ವುಡ್ ಮಂದಿ ಮತ್ತು ಸ್ನೇಹಿತರಿಗೆ ಔತಣ ಕೂಟ ನಡೆಯಲಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ
O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…