ಅಂಬಿ ನೆನೆದು ಭಾವುಕರಾದ ಶಿವರಾಜಕುಮಾರ್
Team Udayavani, Dec 1, 2018, 11:30 AM IST
ನಟ ಶಿವರಾಜಕುಮಾರ್ ಕೂಡಾ ಅಂಬಿಯವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು. ಅಂಬಿ ಹಾಗೂ ತಮ್ಮ ಕುಟುಂಬದ ಜೊತೆಗಿನ ಆತ್ಮೀಯತೆ ಸೇರಿದಂತೆ ಹಲವು ಅಂಶಗಳನ್ನು ಶಿವಣ್ಣ ನೆನೆದು ಭಾವುಕರಾದರು. ಜೊತೆಗೆ ಅಂಬರೀಶ್ ಅವರು ಚಿತ್ರರಂಗದ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದ್ದರು.
ಆ ಗುಣವನ್ನು ನಾವು ಅಳವಡಿಸಿಕೊಂಡು ಚಿತ್ರರಂಗವನ್ನು ಮುಂದುವರೆಸಿಕೊಂಡು ಹೋಗಬೇಕು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಹಿರಿಯ ನಟಿಯರಾದ ಬಿ.ಸರೋಜಾದೇವಿ, ಜಯಂತಿ ಸೇರಿದಂತೆ ಚಿತ್ರರಂಗದ ಹಲವು ಮಂದಿ ಅಂಬರೀಶ್ ಅವರನ್ನು ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.