ಸೇಫ್ ಜೋನ್‌ನಲ್ಲಿ ಆರೆಂಜ್‌!


Team Udayavani, Dec 6, 2018, 11:06 AM IST

safe-jone.jpg

ಗಣೇಶ್‌ ಖುಷಿಯ ಮೂಡ್‌ನ‌ಲ್ಲಿದ್ದಾರೆ. ಅವರೊಂದಿಗೆ ನಿರ್ದೇಶಕ ಪ್ರಶಾಂತ್‌ರಾಜ್‌ ಕೂಡ. ಇವರ ಖುಷಿಗೆ ಕಾರಣ “ಆರೆಂಜ್‌’. ಹೌದು, “ಆರೆಂಜ್‌’ ಬಿಡುಗಡೆ ಮುನ್ನವೇ ಸೇಫ್ ಮಾಡಿದೆ ಎಂಬ ಕಾರಣ ಒಂದಾದರೆ, ಬಿಡುಗಡೆ ಮುನ್ನವೇ ಗೆದ್ದ ಖುಷಿ ಇನ್ನೊಂದು. ಹಾಗಾಗಿ, “ಆರೆಂಜ್‌’ ಎಲ್ಲರಿಗೂ ಇಷ್ಟವಾಗುತ್ತೆ ಎಂಬ ನಂಬಿಕೆಯಲ್ಲೇ ಡಿ.7 ರಂದು ಸುಮಾರು 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ ನಿರ್ದೇಶಕ ಪ್ರಶಾಂತ್‌ರಾಜ್‌.

“ಜೂಮ್‌’ ಕಾಂಬಿನೇಶನ್‌ನಲ್ಲೇ “ಆರೆಂಜ್‌’ ಮಾಡೋಕೆ ಕಾರಣವಿಷ್ಟು. “ಜೂಮ್‌’ ಚಿತ್ರ ನೋಡಿದ ಗಣೇಶ್‌, ಸಿನಿಮಾ ಚೆನ್ನಾಗಿದೆ. ನಿಮ್ಮೊಂದಿಗೆ ಇನ್ನೊಂದು ಚಿತ್ರ ಮಾಡುತ್ತೇನೆ ಅಂತ ಆ ದಿನಗಳಲ್ಲೇ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದರಂತೆ. ಗಣೇಶ್‌ ಹಾಗೆ ಹೇಳಿದ್ದೇ ತಡ, ಪ್ರಶಾಂತ್‌ರಾಜ್‌ ಅವರು, ಗಣೇಶ್‌ ಅವರಿಗೆ ಸರಿಹೊಂದುವ ಕಥೆ ಹೆಣೆದು, ಚಿತ್ರ ಮಾಡೋಕೆ ಮುಂದಾಗಿದ್ದಾರೆ.

ಹಾಗೆ ಮಾತುಕತೆಯಲ್ಲಿ ನಡೆದು, ಕೆಲಸ ಮುಗಿಸಿದ ಚಿತ್ರವೇ “ಆರೆಂಜ್‌’ ಎಂಬುದು ನಿರ್ದೇಶಕರ ಮಾತು. ಚಿತ್ರೀಕರಣ ವೇಳೆ ಗಣೇಶ್‌, ಸಾಕಷ್ಟು ಚರ್ಚೆ ನಡೆಸಿ ಚಿತ್ರ ಚೆನ್ನಾಗಿ ಬರಲು ಸಹಕರಿಸಿದ್ದಾರಂತೆ. ಕೆಲ ವಿಷಯಗಳನ್ನು ಬೇಕು, ಬೇಡ ಎಂಬ ಬಗ್ಗೆ ಆಳವಾಗಿ ಚರ್ಚಿಸಿದ ನಂತರ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದ ಬಗ್ಗೆ ನೆನಪಿಸಿಕೊಳ್ಳುವ ನಿರ್ದೇಶಕರು,

ಸಂಗೀತ ನಿರ್ದೇಶಕ ಎಸ್‌.ಎಸ್‌. ತಮನ್‌ ಒದಗಿಸಿರುವ ನಾಲ್ಕು ಹಾಡುಗಳು ಈಗಾಗಲೇ ಮೆಚ್ಚುಗೆ ಪಡೆದಿವೆ ಎಂದು ಮಂದಹಾಸ ಹೊರಹಾಕುತ್ತಾರೆ. ನಾಲ್ಕು ಹಾಡುಗಳ ಪೈಕಿ ನಿರ್ದೇಶಕರು ಎರಡು, ಕವಿರಾಜ್‌ ಎರಡು ಬರೆದಿದ್ದಾರೆ. ಈಗಾಗಲೇ ಅಮೆಜಾನ್‌ ಸಂಸ್ಥೆ ಒಳ್ಳೆಯ ಮೊತ್ತಕ್ಕೆ ಚಿತ್ರ ಖರೀದಿಸಿದ್ದು ನಿರ್ದೇಶಕರಿಗೆ ಇನ್ನಷ್ಟು ಖುಷಿ ಹೆಚ್ಚಿದೆ. ಡಿಸೆಂಬರ್‌ 7 ರಂದು ಚಿತ್ರ ಬಿಡುಗಡೆ ಬಳಿಕ ವಿದೇಶದಲ್ಲೂ ಚಿತ್ರ ಬಿಡುಗಡೆ ಮಾಡುವ ಯೋಚನೆ ನಿರ್ದೇಶಕರಲ್ಲಿದೆ.

ಗಣೇಶ್‌ ಅವರಿಗೆ “ಆರೆಂಜ್‌’ ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಚಿತ್ರ ಆಗುತ್ತೆ ಎಂಬ ನಂಬಿಕೆ. ಇಲ್ಲಿ ಮಾನವೀಯ ಗುಣಗಳಿವೆ. ಪ್ರೀತಿ, ಸೆಂಟಿಮೆಂಟ್‌ ಸೇರಿದಂತೆ ಹಾಸ್ಯದ ಪಾಕ ಇಲ್ಲಿದೆ. ಒಂದು ಹಣ್ಣಿನಿಂದ ಶುರುವಾಗು ಕಥೆಯಲ್ಲಿ ಏನೆಲ್ಲಾ ಇದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಪ್ರತಿ ಪಾತ್ರಗಳಿಗೂ ಇಲ್ಲಿ ಆದ್ಯತೆ ಇದೆ. ಎಲ್ಲವೂ ಗಂಭೀರವಾಗಿದ್ದರೂ, ನೋಡುಗರಿಗೊಂದು ಮಜ ಕೊಡುತ್ತದೆ’ ಎಂಬುದು ಗಣೇಶ್‌ ಮಾತು. ಇನ್ನು, ನಾಯಕಿ ಪ್ರಿಯಾ ಆನಂದ್‌ ಅವರಿಗೆ ಒಳ್ಳೆಯ ಕಥೆ ಮತ್ತು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿಯಾಗಿದೆಯಂತೆ.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.