CONNECT WITH US  

ಒಡೆಯನ ತಯಾರಿ ಬಲು ಜೋರು

ಡಿಸೆಂಬರ್‌ 10 ರಿಂದ ಚಿತ್ರೀಕರಣ ಶುರು

ದರ್ಶನ್‌ ಅಭಿನಯದ "ಒಡೆಯ' ಚಿತ್ರೀಕರಣಕ್ಕೆ ಇದೀಗ ತಯಾರಿ ಜೋರಾಗುತ್ತಿದೆ. ಅತ್ತ, ದರ್ಶನ್‌ ಅವರು "ಯಜಮಾನ' ಚಿತ್ರದ ಹಾಡೊಂದಕ್ಕೆ ಸ್ವೀಡನ್‌ಗೆ ಹೋಗಿಬಂದಿದ್ದಾರೆ. ಈಗ "ಒಡೆಯ' ಚಿತ್ರತಂಡ ಡಿಸೆಂಬರ್‌ 10 ರಿಂದ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಶೇ.15 ರಷ್ಟು ಚಿತ್ರೀಕರಣ ನಡೆಸಲಾಗಿದೆ. ಆ ನಡುವೆ "ಯಜಮಾನ' ಚಿತ್ರದ ಚಿತ್ರೀಕರಣ ಇದ್ದುದರಿಂದ, "ಒಡೆಯ' ಚಿತ್ರೀಕರಣಕ್ಕೆ ಬ್ರೇಕ್‌ ಕೊಡಲಾಗಿತ್ತು.

ಈಗ ಡಿ.10 ರಿಂದ ಸುಮಾರು 20 ದಿನಗಳ ಕಾಲ ಒಂದು ಹಂತದ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡಕ್ಕಿದೆ. ಆ ಬಳಿಕ ಬ್ರೇಕ್‌ ಕೊಟ್ಟು, ಫೆಬ್ರವರಿಯಲ್ಲಿ ಉಳಿದ ಚಿತ್ರೀಕರಣ ಮಾಡುವ ಉದ್ದೇಶವಿದೆ. ಇನ್ನು, ಬೆಂಗಳೂರಿನಲ್ಲೇ ಸುಮಾರು 45 ದಿನಗಳವರೆಗೆ ಚಿತ್ರೀಕರಣ ಮಾಡಲಿರುವ ಚಿತ್ರತಂಡ, ಆ ನಂತದ ದಿನಗಳಲ್ಲಿ ಹೈದರಾಬಾದ್‌ನಲ್ಲೂ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದೆ. 

ಇನ್ನು, ಡಿ.10ರ ಸೋಮವಾರದಿಂದ ಶುರುವಾಗಲಿರುವ ಚಿತ್ರೀಕರಣದಲ್ಲಿ ದರ್ಶನ್‌ ಅವರೊಂದಿಗೆ ದೇವರಾಜ್‌ ಮತ್ತು ಸಹೋದರರ ಪಾತ್ರ ನಿರ್ವಹಿಸುತ್ತಿರುವ ಯಶಸ್‌ ಸೂರ್ಯ, ನಿರಂಜನ್‌, ಎಸ್‌.ನಾರಾಯಣ್‌ ಪುತ್ರ ಪಂಕಜ್‌, ಸಮಂತ್‌ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಈ ಹಂತದಲ್ಲಿ ಒಂದು ಗ್ರೂಪ್‌ ಸಾಂಗ್‌ ಕೂಡ ಇದ್ದು, ತಾವರಕೆರೆ ಸಮೀಪ ನಡೆಸುವ ತಯಾರಿಯಲ್ಲೂ ಚಿತ್ರತಂಡ ನಿರತವಾಗಿದೆ. "ಒಡೆಯ' ಚಿತ್ರಕ್ಕೆ ಕನ್ನಡದ ಹುಡುಗಿ ಅದರಲ್ಲೂ ಮಡಿಕೇರಿ ಮೂಲದ ಬೆಡಗಿ ದರ್ಶನ್‌ಗೆ ನಾಯಕಿಯಾಗಿದ್ದು, ಇಷ್ಟರಲ್ಲೇ ಆ ಹುಡುಗಿ ಯಾರೆಂಬುದಕ್ಕೆ ಉತ್ತರ ಸಿಗಲಿದೆ.


Trending videos

Back to Top